Site icon Vistara News

Rupali Ganguly: ನಾನು ಮೋದಿಯ ʻಡೈ ಹಾರ್ಡ್‌ ಫ್ಯಾನ್‌ʼ ಎಂದು ಬಿಜೆಪಿ ಸೇರಿದ ಖ್ಯಾತ ಕಿರುತೆರೆ ನಟಿ!

Rupali Ganguly Of Anupamaa Fame Joins BJP

ಬೆಂಗಳೂರು: ದೂರದರ್ಶನ ನಟಿ ರೂಪಾಲಿ ಗಂಗೂಲಿ (Rupali Ganguly) ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಮೇ 1ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. 1990ರ ಸಮಯದಲ್ಲಿ ನಟಿ ರೂಪಾಲಿ ಗಂಗೂಲಿಯವರು ಧಾರಾವಾಹಿ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ್ದರು. ಹಲವಾರು ವಿಭಿನ್ನವಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಇವರು ತಮ್ಮ ನಟನೆಯ ಮೂಲಕ ಮನೆ ಮಾತಾಗಿದ್ದರು.

ಬಿಜೆಪಿ ಸೇರ್ಪಡೆ ಬಳಿಕ ನಟಿ ಮಾಧ್ಯಮದವರೊಂದಿಗೆ ಮಾತನಾಡಿ “ನಾನು ಬಿಜೆಪಿಗೆ ಸೇರ್ಪಡೆಯಾಗಿರುವುದು ತುಂಬಾ ಗೌರವ ಎಂದೆನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಹಾಗಾಗಿ ನಾನು ಬಿಜೆಪಿ ಸೇರಲು ಬಯಸುತ್ತೇನೆ. ನಾನು ಪಕ್ಷಕ್ಕೆ ತುಂಬಾ ಕೃತಜ್ಞನಾಗಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜಕೀಯ ಮುಖಂಡ ವಿನೋದ್ ತಾವ್ಡೆ ಮತ್ತು ಅನಿಲ್ ಬಲುನಿ ಕೂಡ ಇದ್ದರು. ನಟಿ ರೂಪಾಲಿ ಗಂಗೂಲಿ ಅವರು ‘ಸುಕನ್ಯಾ’ ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ‘ಸಾರಾಭಾಯಿ ವರ್ಸಸ್ ಸಾರಾಭಾಯಿ’ ಧಾರಾವಾಹಿಯಿಂದ ಬಹಳಷ್ಟು ಮನೆ ಮಾತಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿರುವ ನಟಿ ರೂಪಾಲಿ ಗಂಗೂಲಿ ‘ಅನುಪಮಾ’ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ʻಅನುಪಮಾʼ ಧಾರಾವಾಹಿ ಕೂಡ ಪ್ರೇಕ್ಷಕರ ಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿತು.

ಇದನ್ನೂ ಓದಿ: Mallikarjuna Kharge: ಶಿವ, ಶ್ರೀರಾಮನ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ

ರೂಪಾಲಿ ಗಂಗೂಲಿ ರಾಜಕೀಯ ವೃತ್ತಿಜೀವನವನ್ನು ಘೋಷಿಸಿದ್ದರೂ, 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ ಎಂದು ಅವರು ಇನ್ನೂ ಖಚಿತಪಡಿಸಿಲ್ಲ.

ತಿಂಗಳ ಮುಂಚೆ ಮೋದಿಯವರನ್ನು ಭೇಟಿಯಾಗಿದ್ದ ನಟಿ!

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಗ್ಗೆ ನಟಿ ಮಾರ್ಚ್‌ನಲ್ಲಿ ಇನ್‌ಸ್ಟಾ ಮೂಲಕ ಹೇಳಿಕೊಂಡಿದ್ದರು. ʻʻ ನನ್ನ ಕನಸು ನನಸಾಯಿತು…ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಭೇಟಿ ಮಾಡುವ ದಿನ. ಇದು ನಿಜಕ್ಕೂ ಅಭಿಮಾನಿ ಹುಡುಗಿಯ ಕ್ಷಣ! 14 ವರ್ಷಗಳ ಕಾಲ ನಾನು ಅಂತಹ ಒಂದು ದೊಡ್ಡ ವೇದಿಕೆ ಹಂಚಿಕೊಳ್ಳಬೇಕು ಎಂದು ಕಾಯುತ್ತಿದ್ದೆʼʼಎಂದು ಸಂತಸ ವ್ಯಕ್ತಪಡಿಸಿದ್ದರು.

ಹೆಚ್ಚು ಕಮ್ಮಿ ಆರರಿಂದ ಏಳು ವರ್ಷಗಳ ಕಾಲ ಯಾವುದೇ ನಟನೆಯಲ್ಲಿ ಕಾಣಿಸಿಕೊಳ್ಳದ ನಟಿ ರೂಪಾಲಿ ಗಂಗೂಲಿ ʻಅನುಪಮಾʼ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದರು. ʻʻದಶಕಗಳ ಹಿಂದೆ ನಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟವಿತ್ತು. ನನ್ನ ತಂದೆ ಆರೋಗ್ಯ ಸರಿ ಇರಲಿಲ್ಲ. ಯಾವುದೇ ವ್ಯವಸ್ಥೆ ಇಲ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ಸೇರಿಸಲು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟೆ. ಆಗ ಬರುತ್ತಿದ್ದ ಹಣ ನನಗೆ ಬಹಳ ಮುಖ್ಯವಾಗಿತ್ತು ಎಂದು ರೂಪಾಲಿ ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Exit mobile version