Site icon Vistara News

Seetha Rama Serial: ಚಂದನವನದ ದಿಗ್ಗಜರ ಜತೆ ಬಾಲನಟಿಯಾಗಿ ಮಿಂಚಿದ್ದ ಸಿಂಧೂ ರಾವ್‌ ಕಿರುತೆರೆಗೆ ಎಂಟ್ರಿ!

Sindhu Rao with her husband

ಬೆಂಗಳೂರು: 1993ರಲ್ಲಿ ತೆರೆ ಕಂಡ ‘ನಾನೆಂದು ನಿಮ್ಮವನೇ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಸಿಂಧೂ ರಾವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ (Seetha Rama Serial) ನಾಯಕ ರಾಮ್ ಚಿಕ್ಕಮ್ಮನ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಬಾಲ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಸಿಂಧೂ ರಾವ್ ಎಂಟ್ರಿ ಕೊಟ್ಟಿದ್ದರು. ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರವಿಚಂದ್ರನ್, ಶಿವಣ್ಣ ಸೇರಿದಂತೆ ಹಲವು ನಾಯಕರ ಜತೆ ತೆರೆ ಹಂಚಿಕೊಂಡಿದ್ದರು.

ವಿದ್ಯಾಭ್ಯಾಸದತ್ತ ಗಮನ ಹರಿಸಲು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಸಿಂಧು ನಾಯಕಿಯಾಗಿ ಅವಕಾಶಗಳಿಗೆ ಎದುರು ನೋಡಿದರೂ ಅದು ಸಾಧ್ಯವಾಗಲಿಲ್ಲ. ಟಿ ಸಿಂಧು ರಾವ್ ಅವರ ಕುಟುಂಬದಲ್ಲಿ ಯಾರೂ ಕಲಾವಿದರಲ್ಲ.

‘ನಾನೆಂದು ನಿಮ್ಮವನೇ’, ‘ರಾಯರು ಬಂದರು ಮಾವನ ಮನೆಗೆ’, ‘ಮಿಸ್ಟರ್ ಮಹೇಶ್ ಕುಮಾರ್’, ‘ಮದರ್ ಇಂಡಿಯಾ’, ‘ಆಯುಧ’, ‘ರಾಜ ಮಾರ್ತಾಂಡ’, ‘ಕಲಾವಿದ’, ‘ಪುಟ್ಮಲ್ಲಿ’, ‘ಒಂದಾಗೋಣ ಬಾ’, ‘ಮೌನರಾಗ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಿಂಧು ಬಾಲನಟಿಯಾಗಿ ಕಾಣಿಸಿಕೊಂಡರು. ‘ಮೌನರಾಗ’ ಚಿತ್ರಕ್ಕೆ 1996-97ರಲ್ಲಿ ಆಕೆಗೆ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಆ ಕಾರಣಕ್ಕೆ ನಾಯಕಿ ಅವಕಾಶ ಸಿಗಲಿಲ್ಲ ಹತ್ತನೇ ತರಗತಿ ವೇಳೆಗೆ ಓದಿನ ಕಡೆಗೆ ಗಮನ ಕೊಡಬೇಕು ಎಂದು ನಟನೆ ನಿಲ್ಲಿಸಿದ್ದರು.

ಇದನ್ನೂ ಓದಿ: Seetha Rama Serial: ಪ್ರೇಕ್ಷಕರ ಅಚ್ಚುಮೆಚ್ಚಿನ `ಸೀತಾ ರಾಮ’ ಧಾರಾವಾಹಿಯ ಸಿಹಿ ಕನ್ನಡದವಳಲ್ಲ!

ಇದನ್ನೂ ಓದಿ: Seetha Raama Serial: ಸೀತಾ ರಾಮ ಧಾರಾವಾಹಿಯಲ್ಲಿ ಸೃಜನ್‌ ಲೋಕೇಶ್‌ ಅಕ್ಕ ಪೂಜಾರ ಪಾತ್ರವೇನು?

2017ರಲ್ಲಿ ಮಹೇಶ್ ರಾಮಕೃಷ್ಣಯ್ಯ ಎಂಬುವರನ್ನು ವಿವಾಹವಾದರು. ಪತಿ ಮಹೇಶ್, ಏರೋಬಿಕ್ ಇನ್ಸ್ಟ್ರಕ್ಟರ್, ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕೋವಿಡ್‌ಗೂ ಮುನ್ನ ಸಿಂಧು ಅವರು ‘ಗುಬ್ಬಿ ಮರಿ’ ಸಿನಿಮಾದಲ್ಲಿ ನಟಿಸಿದರು. ಕಮ್ ಬ್ಯಾಕ್ ಮಾಡಬೇಕು ಎಂದು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ನಟಿಸಿದರು. ಈಗ ‘ಸೀತಾರಾಮ’ ಧಾರಾವಾಹಿ ಮೂಲಕ ರೀಎಂಟ್ರಿ ಕೊಟ್ಟಿದ್ದಾರೆ.

Exit mobile version