Site icon Vistara News

Shruti Shanmuga Priya: ಕೆಟ್ಟ ಚಟಗಳೇ ಅರವಿಂದ್‌ಗೆ ಮುಳುವಾಯ್ತಾ? ಕಿರುಕುಳ ನೀಡಬೇಡಿ ಎಂದ ನಟಿ ಶ್ರುತಿ!

Shruti Shanmuga Priya MARRIAGE PIC

ಮಿಳು ಸೀರಿಯಲ್ ಮೂಲಕ ಮಗಗೆದ್ದ ಶ್ರುತಿ ಷಣ್ಮುಗ ಪ್ರಿಯಾ (Shruti Shanmuga Priya) ಅವರ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ಆಗಸ್ಟ್ 2ರಂದು ನಿಧನರಾಗಿದ್ದರು. ಇದಾದ ಬಳಿಕ ಹಲವು ಮಾಧ್ಯಮಗಳು, ಯೂಟ್ಯೂಬ್‌ ಚಾನೆಲ್‌ಗಳು ಅರವಿಂದ್ (Aravind Sekhar) ಸಾವಿನ ಬಗ್ಗೆ ತಪ್ಪಾಗಿ ಮಾಹಿತಿ ಹಂಚಲಾಗುತ್ತಿದೆ. ಇದಕ್ಕೆ ನಟಿ ಶ್ರುತಿ ಬೇಸರ ಹೊರಹಾಕಿದ್ದಾರೆ. ಬಾಡಿ ಬಿಲ್ಡರ್ ಆಗಿದ್ದ ಅರವಿಂದ್ ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಈಗಾಗಲೇ ಪತಿಯ ಸಾವಿನ ದುಃಖದಲ್ಲಿರುವ ಶ್ರುತಿ ಮತ್ತು ಅರವಿಂದ್ ಕುಟುಂಬಸ್ಥರು ಈ ಸುದ್ದಿಗಳಿಂದ ಮತ್ತಷ್ಟು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಪತಿಯ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.

ನಟಿ ವಿಡಿಯೊ ಮೂಲಕ ʻʻಎಲ್ಲ ಯೂಟ್ಯೂಬ್ ಚಾನೆಲ್‌ಗಳು, ನ್ಯೂಸ್ ಚಾನೆಲ್‌ಗಳು ಮತ್ತು ಮಾಧ್ಯಮಗಳಿಗೆ ಒಂದು ವಿನಂತಿ. ದಯವಿಟ್ಟು ಸುಳ್ಳು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ. ನಮಗೆ ಮತ್ತಷ್ಟು ನೋಯಿಸಬೇಡಿ. ಚಾನಲ್‌ಗಳಲ್ಲಿ ಯಾವುದೇ ಅಸಂಬದ್ಧ ವಿಷಯವನ್ನು ಪೋಸ್ಟ್ ಮಾಡುವ ಮೊದಲು ಗಮನಿಸಿ. ಈ ಪರಿಸ್ಥಿತಿಯಲ್ಲಿ ಇದು ನಮಗೆ ಹೆಚ್ಚು ನೋವು ಮತ್ತು ಸಂಕಟವನ್ನು ನೀಡುತ್ತದೆ. ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನನ್ನ ಪತಿ ಹೃದಯಾಘಾತದಿಂದ ನಿಧನರಾದರು. ಇದನ್ನು ವೈದ್ಯರು ಕೂಡ ದೃಢಪಡಿಸಿದ್ದಾರೆ. ಆದರೆ ಸತ್ಯಾಂಶ ತಿಳಿಯದೆ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾವೆಲ್ಲರೂ ಈಗ ದುಃಖದಲ್ಲಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಅಭಿಪ್ರಾಯ ಮತ್ತು ಇಷ್ಟಗಳಿಗಾಗಿ ನಮಗೆಈ ರೀತಿ ಕಿರುಕುಳ ನೀಡಬೇಡಿ’ ಎಂದು ಶ್ರುತಿ ವಿನಂತಿಸಿದ್ದಾರೆ.

ಇದನ್ನೂ ಓದಿ: Shruti Shanmuga Priya: ಮದುವೆಯಾದ ಒಂದೇ ವರ್ಷದಲ್ಲಿ ಪತಿಯನ್ನು ಕಳೆದುಕೊಂಡ ಖ್ಯಾತ ಕಿರುತೆರೆ ನಟಿ!

ಅರವಿಂದ್ ಅವರಿಗೆ ಕೇವಲ 30ವರ್ಷ ವಯಸ್ಸಾಗಿತ್ತು. ಶ್ರುತಿ ಷಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ (Body Builder) ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದರು. 2022ರ ಮಿಸ್ಟರ್ ತಮಿಳುನಾಡು ಕೂಡ ಆಗಿದ್ದರು. ಫಿಟ್ನೆಸ್‌ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಕಳೆದ ವರ್ಷ ಈ ಜೋಡಿ ಮದುವೆಯಾಗಿತ್ತು. ಈ ಜೋಡಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು.

ಹೃದಯಾಘಾತಕ್ಕೆ ಒಳಗಾದ ಅರವಿಂದ್ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅರವಿಂದ್ ಅವರು ಫಿಟ್ನೆಸ್ ಕೋಚ್ ಆಗಿದ್ದರು. ಶ್ರುತಿ ಷಣ್ಮುಗ ಪ್ರಿಯಾ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ರೀಲ್ಸ್‌ ಮೂಲಕ ಫೇಮಸ್ಸಾಗಿತ್ತು. ಈ ಜೋಡಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪ್ಯಾರಿಸ್‌ನಲ್ಲಿ ಆಚರಿಸಿಕೊಂಡಿತ್ತು.

ಇದನ್ನೂ ಓದಿ: Udupi Toilet Case: ಉಡುಪಿ ಕೇಸ್;‌ ವಿಡಿಯೊ ಮಾಡಿದ ತಪ್ಪನ್ನು ಒಪ್ಪಿಕೊಂಡ ವಿದ್ಯಾರ್ಥಿನಿಯರು; ತನಿಖೆ ವೇಳೆ ಹೇಳಿದ್ದೇನು?

ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು.

Exit mobile version