ಬೆಂಗಳೂರು: ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದೇ ರೀತಿ ಧಾರಾವಾಹಿ ನಟ ಸ್ಕಂದ ಅಶೋಕ್ (Skanda Ashok) ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ (Social Media Hack) ಮಾಡಿ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕ್ ಮೈಕ್ರೋ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಾಯಕ ರಮಣನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಪಡೆದ ಹೆಣ್ಣು ಮಕ್ಕಳ ಹೃದಯ ಕದ್ದ ಸ್ಕಂದ ಅಶೋಕ್ ಇದೀಗ ಸೈಬರ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ವಂಚನೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಕಂದ ಅಶೋಕ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಅಕೌಂಟ್ ಹ್ಯಾಕ್ ಆದ ಲೊಕೆಷನ್ ಪರಿಶೀಲಿಸಿದ್ದಾರೆ. ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯಾ ಸ್ಥಳ ಎಂಬುದು ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Honeybee Attack : ಹುಲಿ ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿದ ಸಾಕಾನೆ ಭೀಮ
‘ಅವನು ಮತ್ತು ಶ್ರಾವಣಿ’ (Avanu Mathe Shravani)ಎನ್ನುವ ಹೆಸರಿನ ಹೊಸ ಧಾರಾವಾಹಿ ಮೂಲಕ ಸ್ಕಂದ ಅಶೋಕ್ ಕಿರುತೆರೆಗೆ ಮರಳಿದ್ದರು. ಮಲಯಾಳಂನ ‘ನೋಟ್ ಬುಕ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿದ್ದರು. ಮಲಯಾಳಂನ ‘ಪಾಸಿಟಿವ್’, ತೆಲುಗಿನ ‘ಮಲ್ಲಿ ಮಲ್ಲಿ’, ಮಲಯಾಳಂನ ‘ಎಲೆಕ್ಟ್ರಾ’, ತಮಿಳಿನ ‘ಅಂಗುಸಂ’ ಹಾಗೂ ‘ಮುಪ್ಪರಿಮಾನಂ’ ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆದ ಸ್ಕಂದ ‘ಚಾರುಲತಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಸು’ ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ನಟಿಸುವ ಮೂಲಕ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
ಚಾರುಲತಾ’ ಸಿನಿಮಾದ ನಂತರ ‘ಯೂ ಟರ್ನ್’ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ ಇವರು ತದ ನಂತರ ‘ಕಾನೂರಾಯಣ’, ‘ಜಿಗ್ರಿ ದೋಸ್ತ್’, ‘ದೇವಯಾನಿ’, ‘ಭೈರಾದೇವಿ’ ಹಾಗೂ ‘ರಣಾಂಗಣ’ ‘ಫ್ಲಾಟ್ ನಂ 9’, ‘ಬರ್ಬರಿಕಾ’ ಸಿನಿಮಾದಲ್ಲಿ ಸ್ಕಂದ ಬಣ್ಣ ಹಚ್ಚಿದ್ದಾರೆ.