ಬೆಂಗಳೂರು: ʻಇಷ್ಕ್ ಕಾ ರಂಗ್ ಸಫೇದ್ʼ ಖ್ಯಾತಿಯ ನಟಿ ಸ್ನೇಹಲ್ ರೈ (Snehal Rai) ಅವರು 10 ವರ್ಷಗಳ ಹಿಂದೆಯೇ ತಾವು ರಾಜಕಾರಣಿಯನ್ನು ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೀಗ ನಟಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಬಗ್ಗೆ ಬರೆದುಕೊಂಡಿದ್ದಾರೆ. ತಾವು ಮಿಸಸ್ ಬ್ಯೂಟಿ ಕಾಂಟೆಸ್ಟ್ನಲ್ಲಿ (Mrs beauty contest) ಭಾಗವಹಿಸಲು ರೆಡಿಯಾಗಿರುವುದಾಗಿ ಹೇಳಿದ್ದಾರೆ. ಮಿಸಸ್ ಎಂದ ಮೇಲೆ ಮದುವೆಯಾಗಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದನ್ನು ಬಹಿರಂಗಪಡಿಸಿದ್ದಾರೆ.
ಇಷ್ಕ್ ಕಾ ರಂಗ್ ಸಫೇದ್, ಜನ್ಮೋ ಕಾ ಬಂಧನ್, ಇಚ್ಛಪ್ಯಾರಿ ನಾಗಿನ್ ನಂತಹ ಟಿವಿ ಶೋಗಳಲ್ಲಿ ಸ್ನೇಹಲ್ ರೈ ನಟಿಸಿ ಖ್ಯಾತಿ ಗಳಿಸಿದ್ದರು. ಮಧ್ವೇಂದ್ರ ರೈ ಅವರೊಂದಿಗೆ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಮ್ಮದಾಗಿದ್ದು, ನನ್ನ ವೃತ್ತಿ ಜೀವನಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ನೀನು ಗೆಲ್ಲುತ್ತೀಯೋ ಇಲ್ಲವೋ ಆದರೆ ಎಂದೂ ರಾಣಿಯಾಗಿ ನನ್ನ ಹೃದಯವನ್ನು ಆಳುತ್ತಿ ಎಂದಿದ್ದರು. ಇದು ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ. ನಟಿಯಾಗಿ ತಾನು ಮಾಧವೇಂದ್ರ ಹಾಗೂ ಅವರ ಕುಟುಂಬದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಸ್ನೇಹಲ್ ರೈ (Snehal Rai) ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Deepa Katte: ವೈವಾಹಿಕ ಜೀವನಕ್ಕೆ ಕಾಲಿಟ್ಟ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ
ಇವರಿಬ್ಬರು ಭೇಟಿಯಾಗಿದ್ದು ಹೇಗೆ?
ಸ್ನೇಹಲ್ ರೈ ಆಯೋಜಿಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಮಧ್ವೇಂದ್ರ ಅವರ ಜತೆ ನಟಿ ಮೊದಲ ಬಾರಿಗೆ ಭೇಟಿಯಾದರು. ಮಧ್ವೇಂದ್ರ ಅವರು ಕಾರ್ಯಕ್ರಮಕ್ಕೆ ವಿಐಪಿ ಅತಿಥಿಯಾಗಿದ್ದರು ಎಂದು ಸ್ನೇಹಲ್ ಬಹಿರಂಗಪಡಿಸಿದ್ದಾರೆ. ಆಗಲೇ ಪ್ರೀತಿ ಚಿಗುರಿತ್ತು. ನಂತರ ವಿಮಾನ ಒಂದರಲ್ಲಿ ಇಬ್ಬರೂ ಭೇಟಿಯಾದಾಗ ಪ್ರೀತಿ ಹೆಚ್ಚಾಗಿತ್ತು. ನಂತರ ನಟಿ ಹಲವಾರು ಸಲ ಮಧ್ವೇಂದ್ರ ಅವರ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯ ಹೋಸ್ಟ್ ಆಗಿ ಕೆಲಸ ಮಾಡಿ ನಂತರ ಮದುವೆಯಾದರು.