ಬೆಂಗಳೂರು: ಸುವರ್ಣ ಸೂಪರ್ ಸ್ಟಾರ್ (suvarna superstar) ಕಾರ್ಯಕ್ರಮವನ್ನು ಶಾಲಿನಿ (Super Star Shalini) ನಡೆಸಿಕೊಡುತ್ತಿದ್ದಾರೆ. ಈ ಶೋ ನೋಡುವ ಬಹುತೇಕ ಮಹಿಳೆಯರಿಗೆ, ಶಾಲಿನಿ ಇವತ್ತು ಯಾವ ರೀತಿಯ ಬ್ಲೌಸ್ ಧರಿಸುತ್ತಾರೆ ಎಂಬುದೇ ಕುತೂಹಲ. ಆ ಕಾರ್ಯಕ್ರಮ ಮಹಿಳೆಯರದ್ದೇ ಆದರೂ ಕೂಡ ಶಾಲಿನಿ ಅವರ ಬ್ಲೌಸ್ (suvarna superstar shalini) ಪ್ರಮುಖ ಹೈಲೈಟ್. ಇದೀಗ ಶಾಲಿನಿ ಅವರು ಹೊಸ ವಿಡಿಯೊ ಹಂಚಿಕೊಂಡು ಬ್ಲೌಸ್ ಉಪಯೋಗ ಏನು? (suvarna superstar shalini blouse) ಎಂದು ಅವರ ಫ್ಯಾನ್ಸ್‌ಗೆ ಪ್ರಶ್ನೆ ಕೇಳಿದ್ದಾರೆ. ಅಭಿಮಾನಿಗಳು ಕೂಡ ಬಗೆ ಬಗೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.
ಸಾಕಷ್ಟು ಬಾರಿ ಶಾಲಿನಿ ಅವರು ರೀಲ್ಸ್ ಹಂಚಿಕೊಳ್ಳುವುದರ ಮೂಲಕ ಬ್ಲೌಸ್ ವಿಚಾರಕ್ಕೆ ಮೌನೀಶ್ ಹಾಗೂ ಶಾಲಿನಿ ಶಾಲಿನಿ (Shalini Sathyanarayan) ನಡುವೆ ಮಹಾ ಯುದ್ಧವೇ ನಡೆಯುತ್ತಿರುತ್ತದೆ. ನಾನಾ ಸಂಗತಿಯನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲವರು ಈ ಮೂಲಕ ಬ್ಲೌಸ್ ಅನ್ನು ಹೊಗಳಿದರೆ, ಇನ್ನೂ ಕೆಲವರು ಗರಗರ ಎಂದು ತಿರುಗಿಸಿ ಹೊಡೆಯಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Actress Shalini: ಡಿವೋರ್ಸ್ ಫೋಟೊಶೂಟ್ ಮಾಡಿಸಿಕೊಂಡ ತಮಿಳು ಕಿರುತೆರೆ ನಟಿ ಶಾಲಿನಿ!
ಪ್ರಶ್ನೆಗೆ ನೆಟ್ಟಿಗರ ಉತ್ತರವೇನು?
ಈ ಬ್ಲೌಸ್‌ನಿಂದ ಹಲವಾರು ಉಪಯೋಗವಿದೆ. ಸೊಳ್ಳೆ ಪರದೆ ರೀತಿ ಬಳಕೆ ಆಗುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಹೂಗುಚ್ಛ ರೀತಿಯೂ ಇಟ್ಟುಕೊಳ್ಳಬಹುದು. ಕಸ ಹೊಡೆಯಬಹುದು, ಧೂಳು ಹೊಡೆಯಬಹುದು, ಪೊರಕೆ ಥರ ಬಳಸಬಹುದು, ಪಾತ್ರೆ ಉಜ್ಜೋ ಗುಂಜು ಮಾಡಿಕೊಳ್ಳಬಹುದು, ಟೀ ಸೋಸಬಹುದು, ಮಕ್ಕಳಿಗೆ ಜೋಕಾಲಿ ಮಾಡಬಹುದು, ಗಾಳಿ ಬೀಸಿಕೊಳ್ಳಲು ಬಳಸಿಕೊಳ್ಳಬಹುದು. ಅಷ್ಟೇ ಯಾಕೆ ಇದರಲ್ಲಿ ಮೀನನ್ನು ಹಿಡಿಯಬಹುದು. ಸ್ವಲ್ಪ ತಲೆ ಓಡಿಸಿದ್ರೆ ಅದ್ರಲ್ಲೇ ನೇಣು ಹಾಕಿಕೊಳ್ಳಬಹುದು. ಜೇಡರ ಬಲೆ ತೆಗೆಯಬಹುದು. ಅದ್ರಲ್ಲಿ ನಟಿ ಉರ್ಫಿ ಜಾವೇದ್‌ಗೆ 1 ಡಜನ್ ಬಟ್ಟೆ ಹೋಲಿಸಬಹುದು. ಸಿಟ್ಟು ಬಂದ್ರೆ ಗಂಡನಿಗೆ ಒಂದೆರಡು ಬಾರಿಸಬಹುದು. ಮುಖ್ಯವಾಗಿ ಮಾನ ಕಾಪಾಡುತ್ತದೆʼʼ ಎಂಬ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: Seetha Rama Serial: ಚಂದನವನದ ದಿಗ್ಗಜರ ಜತೆ ಬಾಲನಟಿಯಾಗಿ ಮಿಂಚಿದ್ದ ಸಿಂಧೂ ರಾವ್ ಕಿರುತೆರೆಗೆ ಎಂಟ್ರಿ!
ಸುವರ್ಣ ಸೂಪರ್ ಸ್ಟಾರ್ ವಿಶೇಷತೆ ಏನು?
ಮಹಿಳೆಯರಿಗಾಗಿ ಮಾತ್ರ ಸೃಷ್ಟಿಸಿದ ಮಹಾವೇದಿಕೆ ‘ಸುವರ್ಣ ಸೂಪರ್ ಸ್ಟಾರ್’ಗೆ ಇದುವರೆಗೆ 2400ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಸಾಮಾನ್ಯ ಹೆಣ್ಣು ಮಕ್ಕಳ ಅಸಾಮಾನ್ಯ ಶಕ್ತಿಯನ್ನು ಕರ್ನಾಟಕಕ್ಕೆ ಪರಿಚಯಿಸುವ ಮಹಾವೇದಿಕೆ ಸುವರ್ಣ ಸೂಪರ್ ಸ್ಟಾರ್. ಈ ವೇದಿಕೆಯಲ್ಲಿ ಮಹಿಳೆಯರು ಬದುಕಿನ ಕಥೆಗಳನ್ನ ಹೇಳಿಕೊಂಡು, ತಮ್ಮಲ್ಲಿರುವ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಗಳಿಗೆ ವಿಶೇಷವಾಗಿ ವಾಷಿಂಗ್ ಮೆಷೀನ್, ಫ್ರಿಡ್ಜ್, ಓವೆನ್, ಮಿಕ್ಸರ್ ಗ್ರೈಂಡರ್, ರೇಷ್ಮೆ ಸೀರೆ ಹೀಗೆ ಎಲ್ಲ ಗೃಹೋಪಯೋಗಿ ವಸ್ತುಗಳನ್ನ ಬಹುಮಾನವಾಗಿ ನೀಡುತ್ತಾರೆ.