Site icon Vistara News

BBK Season 10: ʻಬಿಗ್‌ ಬಾಸ್‌ʼ ಲಾಂಚ್‌ ಆಗುವ ದಿನವೇ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-7ʼ ಗ್ರ್ಯಾಂಡ್‌ ಫಿನಾಲೆ!

The grand finale of Dance Karnataka Dance-7launch of Bigg Boss

ಬೆಂಗಳೂರು: ಇದೇ ಅ.8ರಿಂದ ಬಿಗ್‌ ಬಾಸ್‌ ಸೀಸನ್‌ 10 (BBK Season 10) ಕಲರ್ಸ್‌ ಕನ್ನಡದಲ್ಲಿ ಶುರುವಾಗಲಿದೆ. ಇನ್ನು ಕೇವಲ ಎರಡು ದಿನ ಬಾಕಿ ಉಳಿದಿದೆ. ಭಾನುವಾರ (ಅಕ್ಟೋಬರ್ 8) ಸಂಜೆ 6 ಗಂಟೆಗೆ ಬಿಗ್ ಬಾಸ್ ಲಾಂಚ್ ಆಗಲಿದೆ. ಅದೇ ದಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್‌ ಫಿನಾಲೆ ಕೂಡ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6ರಿಂದ 10.30ರವರೆಗೆ ಪ್ರಸಾರ ಕಾಣುತ್ತಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ರಿಯಾಲಿಟಿ ಶೋ ಬಗ್ಗೆ ಈಗಾಗಲೇ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ʻʻಎಲ್ಲರಿಗೂ ಶುಭವಾಗಲಿ. ಖಂಡಿತ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಟ್ಯಾಲೆಂಟ್ ಇದೆ. ಅವರ ಪರಿಶ್ರಮ ಹಾಗೂ ಡೆಡಿಕೇಶನ್ ಅವರ ಪರ್ಫಾರ್ಮೆನ್ಸ್ ನಲ್ಲಿ ಕಾಣಲಿದೆ” ಎಂದು ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದರು. ಕಾರ್ಯಕ್ರಮದಲ್ಲಿ ಜಡ್ಜ್ ಗಳಾಗಿ ಅರ್ಜುನ್ ಜನ್ಯ, ನಟಿ ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ಶಿವರಾಜ್ ಕುಮಾರ್, ಚಿನ್ನಿ ಪ್ರಕಾಶ್ ಮಾಸ್ಟರ್ ಇದ್ದಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಗ್ರ್ಯಾಂಡ್‌ ಫಿನಾಲೆಗೆ ಪ್ರಭುದೇವ ಕೂಡ ಬರುತ್ತಿದ್ದಾರೆ. ಈ ಸುಂದರ ಕ್ಷಣದ ಫೋಟೊಗಳನ್ನು ಜೀ ವಾಹಿನಿ ಹಂಚಿಕೊಂಡಿದೆ. ಇದೀಗ ಎರಡೂ ರಿಯಾಲಿಟಿ ಶೋ ಕಾರ್ಯಕ್ರಮಗಳು ಒಂದೇ ದಿನ ಇರುವುದರಿಂದ ಕ್ಲಾಶ್‌ ಆಗುತ್ತಿದೆ. ಕೆಲವರು ʻʻಬಿಗ್ ಬಾಸ್ ತೋರಣ ಕಟ್ಟಾಯಿತು. ಹಬ್ಬ ಶುರುವಾಯಿತುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಸೀಸನ್‌ಗೆ ಮನೆಯೂ ಸ್ಪೆಷಲ್; ಹತ್ತು ವರ್ಷಗಳ ಜರ್ನಿ ಹೇಗಿತ್ತು?

ಅ.8ರಂದೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ರಿವೀಲ್‌ ಆಗಲಿದೆ. ಅಂದೇ ದಿನ ಡಿಕೆಡಿಯಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬದೂ ರಿವೀಲ್‌ ಆಗಿದೆ. ಇದೀಗ ನೋಡುಗರು ಎರಡೂ ಕಾರ್ಯಕ್ರಮದ ಪ್ರಸಾರದ ಸಮಯವಾದ್ರೂ ಚೇಂಜ್‌ ಮಾಡ್ಬಾರದಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಈ ಎರಡೂ ರಿಯಾಲಿಟಿ ಶೋ ಹಬ್ಬ ಒಂದೇ ದಿನ ಕ್ಲ್ಯಾಶ್‌ ಆಗಿದೆ.

ಹೇಗಿರಲಿದೆ ಬಿಗ್‌ ಬಾಸ್‌ ಮನೆ?

ಈ ಬಾರಿ ಬೆಂಗಳೂರಿನ ಹೊರವಲಯದಲ್ಲಿ ಹೊಸದಾದ ಬಿಗ್ ಬಾಸ್ ಮನೆ ನಿರ್ಮಾಣಗೊಂಡಿದೆ. ಒಟ್ಟು 12 ಸಾವಿರ ಚದರಡಿಗಳ ಈ ಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡಬಹುದು, ಟಾಸ್ಕ್ ಮಾಡಬಹುದು. ಇನ್ನು ‘777 ಚಾರ್ಲಿ’ ಸಿನಿಮಾದ ಚಾರ್ಲಿ ಈ ಬಾರಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿರುವುದಂತೂ ಪಕ್ಕಾ ಆಗಿದೆ.

Exit mobile version