Site icon Vistara News

Kannada Serials: ಅಂತ್ಯ ಕಾಣಲಿವೆ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳು? ಕಾರಣವೇನು?

Two serials of Kannada are coming to an end.What is the reason

ಬೆಂಗಳೂರು: 2019ರ ಸೆಪ್ಟೆಂಬರ್‌ 9 ಕನ್ನಡದ ಕಿರುತೆರೆಗೆ ಹೊಸ ಶೈಲಿಯ ಕಥೆಯೊಂದು (Kannada Serial) ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ. ಈ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಎಂಬ ಸುದ್ದಿ ಬೆನ್ನಲ್ಲೇ ಇದೀಗ ಪ್ರೇಕ್ಷಕರಿಗೆ ಮತ್ತೊಂದು ಬೇಸರದ ಸುದ್ದಿ ಅರಗಿಸಿಕೊಳ್ಳಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ‘ಗಿಣಿರಾಮ’ ಧಾರಾವಾಹಿ (Kannada Serials) ತನ್ನ ಪ್ರಸಾರ ನಿಲ್ಲಿಸಲಿದೆ ಎಂದು ವರದಿಯಾಗಿದೆ. ಈಗಾಗಲೇ ಧಾರಾವಾಹಿ ತಂಡ ಕ್ಲೈಮ್ಯಾಕ್ಸ್ ಸಂಚಿಕೆಯ ಶೂಟಿಂಗ್ ಮಾಡುತ್ತಿದೆ ಎನ್ನಲಾಗಿದೆ.

ಟಿಆರ್‌ಪಿ ಕಡಿಮೆ ಆಗಿದ್ದಕೆ ಧಾರಾವಾಹಿ ಅಂತ್ಯ?

ಈಗಾಗಲೇ ಗಿಣಿರಾಮ ಧಾರಾವಾಹಿಯ 740 ಎಪಿಸೋಡ್‌ಗಳು ಪ್ರಸಾರ ಆಗಿವೆ. ಟಿಆರ್‌ಪಿ ಕಡಿಮೆ ಇರುವ ಕಾರಣಕ್ಕೆ ಈ ಧಾರಾವಾಹಿಯನ್ನು ಅಂತ್ಯ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿಯಾಗಲೀ, ಸೀರಿಯಲ್‌ ತಂಡವಾಗಲೀ ಅಧಿಕೃತ ಹೇಳಿಕೆ ನೀಡಿಲ್ಲ.

‘ಮರಾಠಿ’ ಧಾರಾವಾಹಿಯೊಂದರ ರಿಮೇಕ್ ಇದು!

2020 ಆಗಸ್ಟ್‌ 17ರಂದು ‘ಗಿಣಿರಾಮ’ ತನ್ನ ಪಯಣ ಶುರು ಮಾಡಿತ್ತು. ‘Jeev Zala Yeda Pisa’ ಎಂಬ ಮರಾಠಿ ಧಾರಾವಾಹಿಯ ರಿಮೇಕ್‌ ಕನ್ನಡದ ಈ ‘ಗಿಣಿರಾಮ’. ಉತ್ತರ ಕರ್ನಾಟಕದ ಭಾಷೆಯಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತ್ತು.

ರಿತ್ವಿಕ್‌ ಮಾತಾಡ್‌, ನಯನಾ ನಾಗರಾಜ್‌, ಚೈತ್ರಾ ರಾವ್‌ ಸಚಿನ್‌, ಸುಜಾತಾ ಕುರಹಟ್ಟಿ, ಬಸವರಾಜ್‌ ತಿರಳಪರ, ಕಾವೇರಿ ಬಾಗಲಕೋಟೆ, ಲಕ್ಷ್ಮೀ ಸಿದ್ದಯ್ಯ, ಸುಷ್ಮಾ ಶೇಖರ್‌, ವರುಣ್‌ ಹೆಗಡೆ, ಪ್ರದೀಪ್‌ ರಾಜ್‌, ರಾಖಿ ಗೌಡ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದ್ದು ವಿಲನ್‌ ಆಯಿಸಾಹೇಬರ ಮಗಳು ಮಹತಿ ಎಂಬ ಸುದ್ದಿ ಹೊರಬರಲಿದೆ.

ಇದನ್ನೂ ಓದಿ: Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ

‘ಜೊತೆಜೊತೆಯಲಿ’ ಶೀಘ್ರದಲ್ಲಿ ಮುಕ್ತಾಯ

ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಕೂಡ ಮುಕ್ತಾಯದ ಹಂತ ತಲುಪಿದೆ.ಮೇಘಾ ಶೆಟ್ಟಿ ಅನು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಪೂರ್ಣಗೊಳಿಸಲು ನಿರ್ಮಾಪಕ ಆರೂರು ಜಗದೀಶ್ ನಿರ್ಧರಿಸಿದ್ದಾರೆ. ಟಿಆರ್‌ಪಿ ಕಡಿಮೆ ಇದ್ದು, ಕಲಾವಿದರ ಡೇಟ್ಸ್ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೂರ್‌ ಜಗದೀಶ್‌ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Kannada Serial | ಬಿಗ್‌ ಬಾಸ್‌ನಿಂದ ಅಂತ್ಯಗೊಳ್ಳಲಿವೆಯಂತೆ ಈ ಧಾರಾವಾಹಿಗಳು!

ಆರೂರು ಜಗದೀಶ್‌ ನಿರ್ದೇಶನದ ಈ ಧಾರಾವಾಹಿಯಲ್ಲಿ ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್‌ ರಾಜ್‌ ಅವರನ್ನು ಕರೆತರಲಾಗಿತ್ತು. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು.

Exit mobile version