ಕಿರುತೆರೆ
Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ
ಜೀ ಕನ್ನಡದ ಪ್ರಸಿದ್ಧ ಧಾರಾವಾಹಿಯಾದ (Kannada Serial) ʼಜೊತೆ ಜೊತೆಯಲಿʼ 900 ಸಂಚಿಕೆಗಳನ್ನು ಇತ್ತೀಚೆಗೆ ಪೂರೈಸಿದೆ.
ಬೆಂಗಳೂರು: ಅದು 2019ರ ಸೆಪ್ಟೆಂಬರ್ 9. ಕನ್ನಡದ ಕಿರುತೆರೆಗೆ ಹೊಸ ಶೈಲಿಯ ಕಥೆಯೊಂದು (Kannada Serial) ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ. ಈ ಧಾರಾವಾಹಿ ಕಿರುತೆರೆಗೆ ಎಂಟ್ರಿ ಕೊಟ್ಟ ಒಂದೇ ವಾರದಲ್ಲಿ ಕನ್ನಡದ ಎಲ್ಲಾ ಧಾರಾವಾಹಿಗಳ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎನ್ನುವ ಖ್ಯಾತಿ ಪಡೆದುಕೊಂಡಿತು. ಆ ಧಾರಾವಾಹಿಗೆ ಇದೀಗ 900 ಸಂಚಿಕೆಗಳು ಸಂಪೂರ್ಣಗೊಂಡಿವೆ.
ಇದನ್ನೂ ಓದಿ: Jote Joteyali: ಹಸೆಮಣೆ ಏರಲು ಸಜ್ಜಾದ `ಜೊತೆ ಜೊತೆಯಲಿ’ ಧಾರಾವಾಹಿ ನಟಿ ಶಿಲ್ಪಾ ಅಯ್ಯರ್
ಧಾರಾವಾಹಿ 900 ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಸಂತಸದಲ್ಲಿ ಧಾರಾವಾಹಿಯ ತಂಡವಿದೆ. ಈ 900 ಸಂಚಿಕೆಗಳಲ್ಲಿ ಧಾರಾವಾಹಿ ಹಲವಾರು ತಿರುವುಗಳನ್ನು ಕಂಡಿದೆ. ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿದೆ. ಹಾಗೆಯೇ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್ ಅವರನ್ನೂ ಸಹ ಆರಾಧನಾ ಹೆಸರಿನಲ್ಲಿ ಧಾರಾವಾಹಿಯಲ್ಲಿ ಪರಿಚಯಿಸಲಾಗಿದೆ.
ಜೊತೆ ಜೊತೆಯಲ್ಲಿ ಧಾರಾವಾಹಿಯು ಮಧ್ಯಮ ವಯಸ್ಸಿನ ಉದ್ಯಮಿ ಆರ್ಯವರ್ಧನ್ ಕಥೆಯಾಗಿದೆ. ಅದರಲ್ಲಿ ಆ ಉದ್ಯಮಿಗೆ ಅನು ಹೆಸರಿನ ಯುವತಿಯೊಂದಿಗೆ ಪ್ರೀತಿ ಹುಟ್ಟಿ ಅವರಿಬ್ಬರು ಮದುವೆಯಾಗುತ್ತಾರೆ. ಇದೀಗ ಅನು ಗರ್ಭಿಣಿಯಾಗಿದ್ದು, ಅದೇ ಸಂಭ್ರಮದಲ್ಲಿ ಆರ್ಯವರ್ಧನ್ ಇದ್ದಾರೆ. ಆದರೆ ಇವರಿಬ್ಬರ ಅನ್ಯೋನ್ಯತೆ ಬಗ್ಗೆ ಆರಾಧನಾ ಅವರಿಗೆ ಅಸಮಾಧಾನ ಇದೆ.
ಇದನ್ನೂ ಓದಿ: Anirudh Jatkar: ʻಜೊತೆ ಜೊತೆಯಲಿʼ ಖ್ಯಾತಿಯ ಅನಿರುದ್ಧ ಮುಂಬರುವ ಧಾರಾವಾಹಿಗೆ ನಾಯಕಿ ಯಾರು?
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.
ಕಿರುತೆರೆ
Celebrity Divorce: ಸಂಸಾರದಲ್ಲಿ ಬಿರುಕು, ಪತಿಯಿಂದ ದೂರವಾದ ಕಿರುತೆರೆ ನಟಿ
ಹಿಂದಿ ಕಿರುತೆರೆ ನಟಿ ಚಾರು ಅಸೋಪಾ ಮತ್ತು ಮಾಡೆಲ್ ರಾಜೀವ್ ಸೇನ್ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ (celebrity divorce) ಹಾಡಿದ್ದಾರೆ.
ಮುಂಬೈ: ಬಾಲಿವುಡ್‌ನ ಕಿರುತೆರೆ ನಟಿ ಚಾರು ಅಸೋಪಾ ಮತ್ತು ನಟಿ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ನಡುವಿನ ದಾಂಪತ್ಯದಲ್ಲಿ ಬಿರುಗಾಳಿ ಎದ್ದು ಹಲವು ವರ್ಷಗಳೇ ಕಳೆದಿವೆ. ಇಷ್ಟು ದಿನ ಸಹಿಸಿಕೊಂಡಿದ್ದ ಈ ಜೋಡಿ ಇದೀಗ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದು, ದೂರವಾಗಿರುವುದಾಗಿ (celebrity divorce) ಘೋಷಿಸಿಕೊಂಡಿದ್ದಾರೆ.
ಈ ಕುರಿತಾಗಿ ರಾಜೀವ್ ಸೇನ್ ಅವರೇ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಪತ್ನಿ ಚಾರು ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ರಾಜೀವ್, “ಗುಡ್ ಬೈ ಇಲ್ಲ. ಇಬ್ಬರು ಪರಸ್ಪರ ಜತೆ ಬದುಕಲಾರೆವು ಅಷ್ಟೇ. ಪ್ರೀತಿ ಇದ್ದೇ ಇರುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ಅಪ್ಪ ಅಮ್ಮನಾಗಿ ಇರುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಅವರ ಈ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಚಾರು ಮತ್ತು ರಾಜೀವ್ ಅವರು 2019ರಲ್ಲಿ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದಾಗಿನಿಂದಲೂ ಅವರಿಬ್ಬರ ಮಧ್ಯೆ ಒಂದಿಲ್ಲೊಂದು ರೀತಿಯ ಸಮಸ್ಯೆಗಳಿತ್ತು. ಹಲವಾರು ಬಾರಿ ಅವರಿಬ್ಬರು ದೂರವಾಗಿದ್ದರು ಕೂಡ. ಮದುವೆಯಾಗಿ ಎರಡು ವರ್ಷಗಳಿಗೆ ಅವರಿಗೆ ಹೆಣ್ಣು ಮಗುವೊಂದು ಜನಿಸಿತು. ಕಳೆದ ವರ್ಷದೊಂದು ಅವರಿಬ್ಬರು ದೊಡ್ಡ ನಿರ್ಧಾರ ತೆಗೆದುಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ವಿಚ್ಛೇದನವಾಗಿದೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಚಾರು ಅವರು ʼದೇವೋ ಕೆ ದೇವ್ ಮಹಾದೇವ್ʼ, ʼಬಾಲವೀರ್ʼ, ʼಮೆರೆ ಆಂಗನೆ ಮೇʼ, ʼಜೀಜಿ ಮಾʼ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಾರು ಮೊದಲಿಗೆ ಉದ್ಯಮಿಯೊಬ್ಬರನ್ನು ರಾಜಸ್ಥಾನದಲ್ಲಿ ವರಿಸಿದ್ದರು. ಅದನ್ನು ಮುರಿದುಕೊಂಡ ಅವರು ನೀರಜ್ ಮಾಳ್ವಿಯಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅದನ್ನೂ ಮುರಿದುಕೊಂಡು ನಂತರ ರಾಜೀವ್ ಸೇನ್‌ರನ್ನು ಮದುವೆಯಾಗಿದ್ದರು.
ಕಿರುತೆರೆ
Chaitra Hallikeri: ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಹಳ್ಳಿಕೇರಿ
Chaitra Hallikeri: ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada) ಒಟಿಟಿ ರಿಯಾಲಿಟಿ ಶೋನಲ್ಲಿ ಮನೆಮಾತಾಗಿದ್ದ ಚೈತ್ರಾ ಹಳ್ಳಿಕೇರಿ (Chaitra Hallikeri) ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಶಿಷ್ಯ ಹಾಗೂ ಖುಷಿ ಸಿನಿಮಾದಲ್ಲಿ ಅಭಿನಯಿಸಿದ ಚೈತ್ರಾ ಬಹಳ ಸಮಯದ ನಂತರ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಬರುತ್ತಿದ್ದಾರೆ. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಂತರಪಟ’ ಧಾರಾವಾಹಿಯಲ್ಲಿ ಬ್ಯುಸಿನೆಸ್ ವುಮೆನ್ ಚಾಂದಿನಿ ಪಾತ್ರದ ಮೂಲಕ ಚೈತ್ರಾ ಹಳ್ಳಿಕೇರಿ ಕಮ್ ಬ್ಯಾಕ್ ಆಗಿದ್ದಾರೆ.
ಚೈತ್ರಾ ಹಳ್ಳಿಕೇರಿ ಈ ಧಾರಾವಾಹಿಯಲ್ಲಿ ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್‌ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜತೆಗೆ “ಅಂತರಪಟ” ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.
ಸದ್ಯಕ್ಕೆ ‘ನಾಗಪಂಚಮಿ’ ಎಂಬ ತೆಲುಗು ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿರುವ ಚೈತ್ರಾ ಹಳ್ಳಿಕೇರಿ ಇದೀಗ ಕನ್ನಡಕ್ಕೆ ಮತ್ತೆ ವಾಪಸ್ ಆಗಿರುವುದು ಪ್ರೇಕ್ಷಕರಿಗಂತೂ ಖುಷಿ ತಂದಿದೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾಗೆ ಕನ್ನಡದ ಧಾರಾವಾಹಿಯಲ್ಲಿ ನಟಿಸಬೇಕೆಂಬ ಆಸೆ ಬಹುದಿನಗಳಿಂದೂ ಇತ್ತು. ಗೌಡ್ರು, ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದಲೇ ದೂರವಾದರು.
ಇದನ್ನೂ ಓದಿ: Viral News: Deepika Das: ಕಿರುತೆರೆಗೆ ಎಂಟ್ರಿ ಕೊಟ್ಟ ದೀಪಿಕಾ ದಾಸ್, ‘ಅಂತರಪಟ’ದಲ್ಲಿ ಏನಿದೆ?
‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ನಟಿಸಿದ್ದಾರೆ.
ಅಂತರಪಟ ಧಾರಾವಾಹಿಗೆ ನಾಯಕನಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರ ಪತಿ ಚಂದನ್ ಅವರ ಎಂಟ್ರಿ ಕೂಡ ಆಗಿದೆ.
ಕರ್ನಾಟಕ
Weekend With Ramesh: ಸಾಧಕರ ಕುರ್ಚಿ ಏರಿದ ಟ್ರಬಲ್ ಶೂಟರ್ ಡಿಕೆಶಿ; ಜೂ.10, 11ಕ್ಕೆ ಪ್ರಸಾರ
Weekend With Ramesh: ಜೀ ಕನ್ನಡ ವಾಹಿನಿಯಲ್ಲಿ ಜೂನ್ 10 ಮತ್ತು 11ರಂದು ಪ್ರಸಾರವಾಗಲಿರುವ ಸಂಚಿಕೆಗಳಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಲಿದ್ದಾರೆ.
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಾಗುತ್ತಿರುವ ʼವೀಕೆಂಡ್ ವಿತ್ ರಮೇಶ್ ಶೋ-5ʼ ರಲ್ಲಿ (Weekend With Ramesh) ಈ ವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಧಕರ ಕುರ್ಚಿ ಏರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜ್ಯ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿ ಅವರು ಜೂನ್ 10 ಮತ್ತು 11ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿರುವ ಸಂಚಿಕೆಗಳಲ್ಲಿ ತಮ್ಮ ರಾಜಕೀಯ ಜೀವನದ ಏಳು ಬೀಳುಗಳ ಬಗ್ಗೆ ಮಾತನಾಡಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೀವನದ ಸಂಪೂರ್ಣ ಚಿತ್ರಣ ಕಟ್ಟಿಕೊಡಲಿರುವ ಕಾರ್ಯಕ್ರಮದ ಟ್ರೇಲರ್ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ವಿವಿಧ ರಾಜಕಾರಣಿಗಳು, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್‌ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ | Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್ 16ರಂದು ರಿಲೀಸ್
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ಅವರ ಪೂರ್ಣ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ .ಯಾವುದೇ ಕುಟುಂಬ ರಾಜಕೀಯದ ಹಿನ್ನೆಲೆ ಹೊಂದಿಲ್ಲ. ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ ಇವರು.
- 7 ಬಾರಿ ಶಾಸಕರಾಗಿ ಆಯ್ಕೆ
- 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್. ಡಿ.ದೇವೇಗೌಡರ ವಿರುದ್ಧ ಸೋಲು
- 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ
- 1989ರ ಸಾತನೂರು ಕ್ಷೇತ್ರದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ
- 1991ರಲ್ಲಿ ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಸಚಿವರಾಗಿ ನೇಮಕ
- 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಜಯ
- 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆ
- 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಸಚಿವರಾಗಿ ಸೇವೆ
- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರದಿಂದ ಸ್ಪರ್ಧಿಸಿ ಗೆಲುವು
- 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿ ಆಯ್ಕೆ
- 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ
- 2020ರ ಮಾರ್ಚ್ 11ರಂದು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ನೇಮಕ
South Cinema
Kollam Sudhi: ಮಲಯಾಳಂ ಖ್ಯಾತ ಕಿರುತೆರೆ ನಟ ಕಾರು ಅಪಘಾತದಲ್ಲಿ ನಿಧನ; ಕಾರು ನಜ್ಜುಗುಜ್ಜು!
ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಂಗಳೂರು: ಮಲಯಾಳಂನಲ್ಲಿ ಹಾಸ್ಯ ಪಾತ್ರಗಳ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ, ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ (Kollam Sudhi) ಕಾರು ಅಪಘಾತದಲ್ಲಿ ಜೂನ್ 5ರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೈಪಮಂಗಲದಲ್ಲಿ ಟ್ರಕ್ಗೆ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು 39 ವರ್ಷದ ನಟ ಮೃತಪಟ್ಟಿದ್ದಾರೆ. ಇನ್ನು ಮೂವರು ಮಿಮಿಕ್ರಿ ಕಲಾವಿದರಾದ ಬಿನು ಅಡಿಮಲಿ, ಉಲ್ಲಾಸ್ ಮತ್ತು ಮಹೇಶ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ವರದಿಯ ಪ್ರಕಾರ, ಸುಧಿ ಮತ್ತು ಇತರ ಕಲಾವಿದರು ತಮ್ಮ ಟಿವಿ ಕಾರ್ಯಕ್ರಮದ ನಂತರ ಮನೆಗೆ ಹಿಂತಿರುಗುತ್ತಿದ್ದರು. ಸುಧಿಯವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ತಲೆಗೆ ತೀವ್ರ ಪೆಟ್ಟಾಗಿರುವ ಕಾರಣದಿಂದ ಉಳಿಸಿಕೊಳ್ಳಲಾಗಲಿಲ್ಲ ಎಂದು ವರದಿಯಾಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಅವರು ಈ ಹಿಂದೆ ನಟ ಜಗದೀಶ್ ಅವರ ಅನುಕರಣೆ ಮೂಲಕ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದರು.
ಸ್ಟಾರ್ ಮ್ಯಾಜಿಕ್‌ಗೆ ಪ್ರವೇಶಿಸಿದ ನಂತರ ಮಲಯಾಳಂ ಟಿವಿ ವೀಕ್ಷಕರಲ್ಲಿ ಮನೆಮಾತಾದರು. ನಟನ ಸಾವಿಗೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ಮರಣವು ಕುಟುಂಬದವರಿಗೆ ಹಾಗೂ ಫ್ಯಾನ್ಸ್ಗೆ ಅತೀವ ದುಃಖ ತಂದಿದೆ.
ಇದನ್ನೂ ಓದಿ: Gufi Paintal : ಮಹಾಭಾರತದ ‘ಶಕುನಿ ಮಾಮಾ’ ಇನ್ನಿಲ್ಲ
ಸ್ಟೇಜ್ ಶೋಗಳು ಮತ್ತು ಟಿವಿ ಕಾರ್ಯಮಗಳ ಜತೆಗೆ, ಸುಧಿ ಚಲನಚಿತ್ರಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. 2015ರಲ್ಲಿ ‘ಕಾಂತಾರಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಕಟ್ಟಪ್ಪಣ್ಣ’, ‘ಆ್ಯನ್ ಇಂಟರ್ನ್ಯಾಷನಲ್ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
-
ಪ್ರಮುಖ ಸುದ್ದಿ16 mins ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ23 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್20 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್19 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ16 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್17 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ15 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema17 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ