ಬೆಂಗಳೂರು: ಕಿರುತೆರೆ ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ಇಬ್ಬರ ನಿಶ್ಚಿತಾರ್ಥದ ಫೋಟೊ ವೈರಲ್ ಆಗುತ್ತಿದ್ದಂತೆ ನಟಿಯೊಬ್ಬರು ವಿದ್ಯಾಭರಣ್ ಮೇಲೆ ಆರೋಪದ ಆಡಿಯೋ ಹರಿಬಿಟ್ಟಿದ್ದು, ಗಡಬಡಿಸಿ ಎಚ್ಚೆತ್ತುಕೊಂಡಿರುವ ವಿದ್ಯಾಭರಣ್ ಈಗ ವೈಷ್ಣವಿಗೂ ತಮಗೂ ಎಂಗೇಜ್‌ಮೆಂಟ್ ಆಗಿಯೇ ಇಲ್ಲ ಎಂದು ಹೇಳಿದ್ದಾರೆ.
ನಿನ್ನೆ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಹಾರ ಹಾಕಿಕೊಂಡು ಕುಟುಂಬಸ್ಥರ ಜತೆಗೆ ನಿಂತಿರುವ ಫೋಟೋ ವೈರಲ್ ಆಗಿತ್ತು. ಇದಾದ ಕೂಡಲೇ ವಿದ್ಯಾಭರಣ್ ತಮಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಒಬ್ಬರು ನಟಿ ಆಡಿಯೋ ಹರಿಬಿಟ್ಟಿದ್ದರು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ನಟ ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Vaishnavi Gowda | ʻಅಗ್ನಿಸಾಕ್ಷಿʼ ಖ್ಯಾತಿಯ ವೈಷ್ಣವಿ ಗೌಡ ನಿಶ್ಚಿತಾರ್ಥ: ಮದುವೆಗೆ ಒಪ್ಪಿಲ್ಲ ಅಂತಿದ್ದಾರಂತೆ ನಟಿ?
ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಷ್ಟೇ ಆಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಅಗಿದೆ ಅನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಸಂಚು ನಡೆದಿದೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪ ಮಾಡಬಹುದಿತ್ತು. ನನ್ನ ಮೊದಲ ಫಿಲಂ ಬಂದಾಗಲೇ ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾರೆ. ಆರೋಪದ ಬದಲು ದೂರು ನೀಡಬಹುದಿತ್ತು. ಇದು ನಮ್ಮ ಏಳಿಗೆ ಸಹಿಸಲು ಸಾಧ್ಯವಾಗದಿರುವ ಹಿತಶತ್ರುಗಳ ಸಂಚು ಎಂದು ವಿದ್ಯಾಭರಣ್ ಆರೋಪಿಸಿದ್ದಾರೆ.
ನಾಳೆ ಕಮೀಷನರ್‌ಗೆ ನಾನು ದೂರು ನೀಡಲಿದ್ದೇನೆ. ನಾನು ಇನ್ಸ್ಟಾಗ್ರಾಂ ಮೊದಲೇ ಹ್ಯಾಕ್ ಆಗಿದ್ದುದರಿಂದ ಅದನ್ನು ಮೊದಲೇ ಡಿಲೀಟ್ ಮಾಡಿದ್ದೇನೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ಼. ನನ್ನ ರೀತಿ ಬೇರೆ ಯಾವ ಹುಡುಗನಿಗೂ ಹೀಗೆ ಅಗಬಾರದು. ಇವತ್ತು ಬುದ್ಧಿ ಕಲಿಸದೆ ಹೋದರೆ ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಆಗುತ್ತದೆ. ನಾನು ಮೂರು ತಿಂಗಳು ಯಾವ ಹುಡುಗಿಯನ್ನು ಕೂಡ ಕರೆದುಕೊಂಡು ಬಂದಿಲ್ಲ. ನೇರವಾಗಿ ಬಂದು ದೂರು ಕೊಡದೇ ಈ ರೀತಿ ಮಾಡಿರುವುದು ತುಂಬಾ ಬೇಸರವಾಗಿದೆ ಎಂದು ವಿದ್ಯಾಭರಣ್ ಹೇಳಿದ್ದಾರೆ.
ಇದನ್ನೂ ಓದಿ | Vaishnavi Gowda | ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ್ರಾ? ಶಂಕರ್ ಬಿದರಿಯೂ ಇದ್ದಾರೆ ಫೋಟೋದಲ್ಲಿ!