ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK Season 10) ಹಲವು ವಿಚಾರಗಳಿಂದ ಚರ್ಚೆಗೆ ಕಾರಣವಾಗಿತ್ತು. ಕೃಷಿಕ ವರ್ತೂರು ಸಂತೋಷ್ (Varthur Santhosh)ಮದುವೆಯ ವಿಚಾರಕ್ಕೂ ಸುದ್ದಿಯಲ್ಲಿದ್ದರು. ಹುಲಿ ಉಗುರು ಹೊಂದಿರುವ ಆರೋಪ ಬಂದು ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಸಂತೋಷ್ ಮದುವೆ ಬಗ್ಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆಯೂ ಅವರಿಗೆ ಪ್ರಶ್ನೆ ಎದುರಾಗಿದೆ. ಆದರೀಗ ಹಳ್ಳಿಕಾರ್ ಸಂತೋಷ್ ಅವರು ಈ ಬಗ್ಗೆ ʻʻಇದು ಪರ್ಸನಲ್ ವಿಚಾರ. ಅದನ್ನು ತಂದು ಪಬ್ಲಿಕ್ನಲ್ಲಿ ಹೇಳುವ ಮುಠಾಳ ನಾನಲ್ಲʼʼಎಂದು ಗರಂ ಆಗಿಯೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಹಳ್ಳಿಕಾರ್ ರೇಸ್ ಬಗ್ಗೆ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ನಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಗರಂ ಆಗಿದ್ದಾರೆ. ಈ ಬಗ್ಗೆ ವರ್ತೂರ್ ಮಾತನಾಡಿ ʻʻಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್ನಲ್ಲಿ ಹೇಳುವ ಮುಠಾಳ ನಾನಲ್ಲ. ಯಾರೋ ಮುಠಾಳರು, ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆʼʼ ಎಂದು ಗರಂ ಆಗಿಯೇ ಹೇಳಿದ್ದಾರೆ.
ಇದನ್ನೂ ಓದಿ: Varthur Santhosh: ವೇದಿಕೆಯಲ್ಲಿ ವರ್ತೂರ್ ಸಂತೋಷ್ ʻಸೀಕ್ರೆಟ್ʼ ರೀವಿಲ್ ಮಾಡಿ ಹೊಗಳಿದ ಕಿಚ್ಚ!
ಬಿಗ್ ಬಾಸ್ ಮನೆಯೊಳಗೆ ವರ್ತೂರ್ ವೈಯಕ್ತಿಕ ಜೀವನ ಬಗ್ಗೆ ಹೇಳಿದ್ದೇನು?
ವರ್ತೂರ್ ಸಂತೋಷ್ ಮಾತನಾಡಿ ʻʻಒಳಗಡೆ ಏನು ಇದೆ ಎನ್ನುವುದು ನಾನು ಈಗ ಹೇಳ್ತಾ ಇದ್ದೀನಿ. ನನ್ನ ದೊಡ್ಡಪ್ಪಂಗೆ ಮುಂಚೆ ಹೇಳಿದ್ದೆ. ನೀನು ಹೋಗಿ ಇಂತಹವರಿಗೆ ತಾಳಿ ಕಟ್ಟು ಎಂದರೆ ಕಟ್ಟುತ್ತೇನೆ ಎಂದು. ನಾನು ಮಾತು ಕೊಟ್ಟು ಒಪ್ಪಿಕೊಂಡೆ. ಹಾಗೇ ಆಗ್ತಾ ಆಗ್ತಾ ನನ್ನ ಅಮ್ಮನನ್ನು ಕಡೆಗಣಿಸಲು ಆರಂಭಿಸಿದರು. ನಾನು ಸಂಪಾದನೆ ಮಾಡಿರುವ ಜನ, ಅವರೆಲ್ಲರನ್ನು ತೊರೆದು ಅವರ ಹಿಂದೆ ಹೋಗಬೇಕು ಎಂದರೆ ಸಾಧ್ಯವಿಲ್ಲ. ಹೋಗ್ತೀನಿ ಅವರ ಮನೆ ಹತ್ರ. ನನ್ನ ಮಾತಿನ ಪ್ರಕಾರ ಬಂದರೆ, ನೀನು ರಾಣಿನೇ ಇವತ್ತಿಗುನೂ. ಬಾ ಅಂತ ಕರೀತಿನಿ. ಫಸ್ಟ್ ಗೇಟ್‌ನಿಂದ ಆಚೆಗೆ ಹೋಗು ಅಂತಾರೆ ನನ್ನ. ಅವತ್ತು ಮಾತು ಕೊಟ್ಟು ಬಂದಿದ್ದೀನಿ. ಇವತ್ತು ಆ ಮಾತಿಗೆ ನಿಂತಿದ್ದೀನಿʼʼ ಎಂದಿದ್ದರು.
ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು.
ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದರು.