Site icon Vistara News

Nandamuri Taraka Ratna: ತೆಲುಗಿನ ಖ್ಯಾತ ನಟ ನಂದಮೂರಿ ತಾರಕರತ್ನ ಇನ್ನಿಲ್ಲ

Nandamuri Taraka Ratna

#image_title

ಬೆಂಗಳೂರು: ತೆಲುಗಿನ ಖ್ಯಾತ ನಟ, ಜೂನಿಯರ್‌ ಎನ್‌ಟಿಆರ್‌ ಅವರ ಸಂಬಂಧಿ ನಂದಮೂರಿ ತಾರಕರತ್ನ (೩೯) ಅವರು (Nandamuri Taraka Ratna) ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೀಡಾಗಿದ್ದ ತಾರಕರತ್ನ ಅವರಿಗೆ ಕಳೆದ ೨೩ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನಟನಾಗಿ, ರಾಜಕಾರಣಿಯಾಗಿ ನಂದಮೂರಿ ತಾರಕರತ್ನ ಅವರು ಛಾಪು ಮೂಡಿ ಮೂಡಿಸಿದ್ದರು. ಆಂಧ್ರಪ್ರದೇಶದ ಕುಪ್ಪಂನಲ್ಲಿ ಜನವರಿ ೨೭ರಂದು ಟಿಡಿಪಿ ಪಾದಯಾತ್ರೆ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಮೊದಲಿಗೆ ಅವರನ್ನು ಕುಪ್ಪಂನಲ್ಲಿರುವ ಪಿಇಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ೨೩ ದಿನಗಳಿಂದ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು. ಆಂಜಿಯೋಗ್ರಾಂ ಮೂಲಕ ಅವರಿಗೆ ಸ್ಟೆಂಟ್‌ ಅಳವಡಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ದಿನೇದಿನೆ ಹದಗೆಡುತ್ತಿದ್ದ ಕಾರಣ ಕೆಲ ದಿನಗಳ ಹಿಂದೆ ಜೂನಿಯರ್‌ ಎನ್‌ಟಿಆರ್‌, ನಟ ಬಾಲಕೃಷ್ಣ, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಸೇರಿ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಟಿಡಿಪಿಯ ಎನ್‌. ಚಂದ್ರಬಾಬು ನಾಯ್ಡು ಸಂತಾಪ

ಹೆಚ್ಚಿನ ಭದ್ರತೆ

ನಂದಮೂರಿ ಬಾಲಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನಾರಾಯಣ ಹೃದಯಾಲಯದ ಸುತ್ತ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಅವರ ಅಭಿಮಾನಿಗಳು ಆಸ್ಪತ್ರೆಗೆ ದೌಡಾಯಿಸುತ್ತಿರುವ ಕಾರಣ ಬದ್ರತೆ ಒದಗಿಸಲಾಗಿದೆ.

ನಟ ಚಿರಂಜೀವಿ ಕಂಬನಿ

ಒಕಟೋ ನಂಬರ್ ಕುರ್ರಾಡು ಚಿತ್ರದ ಮೂಲಕ ಅವರು ಬಣ್ಣದ ಲೋಕವನ್ನು ಪ್ರವೇಶಿಸಿದ್ದರು. 2009ರಲ್ಲಿ ಅವರಿಗೆ ಅತ್ಯುತ್ತಮ ಖಳನಾಯಕನ ಪಾತ್ರಕ್ಕೆ ನಂದಿ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: Taraka Ratna: ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರ: ಹೃದಯಾಲಯಕ್ಕೆ ಭೇಟಿ ಕೊಟ್ಟ ಜ್ಯೂ.ಎನ್‌ಟಿಆರ್‌, ಕಲ್ಯಾಣ್ ರಾಮ್

Exit mobile version