Site icon Vistara News

Ram Charan: ಥೈಲ್ಯಾಂಡ್‌ನಲ್ಲಿ ಆನೆ ಮರಿಗೆ ಸ್ನಾನ ಮಾಡಿಸಿದ ರಾಮ್ ಚರಣ್!

Thailand tour

ಥೈಲ್ಯಾಂಡ್‌: ನಟ (actor) ರಾಮ್ ಚರಣ್ (ram charan) ಮತ್ತು ಪತ್ನಿ (wife) ಉಪಾಸನಾ (upasana) ಅವರು ತಮ್ಮ ಮುದ್ದಿನ ಮಗಳು ಕ್ಲಿನ್‌ಕಾರಾಳೊಂದಿಗೆ (Klin Kaara) ಥೈಲ್ಯಾಂಡ್‌ನ ಪ್ರವಾಸದಲ್ಲಿದ್ದಾರೆ (Thailand tour). ಥೈಲ್ಯಾಂಡ್‌ನ ಕೊ ಸಮುಯಿಯಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ಅವರಿಗೆ ಅವರ ಮುದ್ದಿನ ನಾಯಿ ಮರಿ ರೈಮ್ (Rhyme) ಕೂಡ ಜೊತೆಯಾಗಿದೆ. ತಮ್ಮ ವಿಹಾರದ ಸುಂದರ ಕ್ಷಣಗಳ ಚಿತ್ರಗಳನ್ನು ರಾಮಚರಣ್ ಅವರು ರೈಮ್‌ನ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

ಪಾನೀಯದೊಂದಿಗೆ ಮೇಜಿನ ಮೇಲೆ ಕುಳಿತು, ಸಾಗರದಲ್ಲಿ ಈಜುತ್ತಾ ರೈಮ್ ಕೂಡ ಸಾಕಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾನೆ. ಇನ್ನು ಆನೆ ಶಿಬಿರದಲ್ಲಿ ರಾಮ್, ಉಪಾಸನಾ ಮತ್ತು ಕ್ಲಿನ್ ಆನೆ ಮರಿಯನ್ನು ಸ್ನಾನ ಮಾಡಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಈ ಚಿತ್ರಗಳಿಗೆ ಶೀರ್ಷಿಕೆಯನ್ನೂ ರೈಮ್ ನೀಡಿದ್ದಾನೆ. ಧನ್ಯವಾದಗಳು ನಾನಾ, ನನ್ನ ಸಹೋದರಿ ಕ್ಲಿನ್ ಕಾರಾ ಅವರೊಂದಿಗೆ ಸಮುಯಿಯಲ್ಲಿ ತಣ್ಣನೆಯ ವೈಬ್ ಅನ್ನು ಆನಂದಿಸಿದೆ. ಸಾಗರದಲ್ಲಿ ಈಜುವುದು ಮತ್ತು ಶಿಬಿರದಲ್ಲಿ ಆನೆ ರಕ್ಷಣೆಯ ಬಗ್ಗೆ ಕಲಿಯುವುದು ಇಷ್ಟವಾಯಿತು. ಅದ್ಭುತ ಆರೈಕೆ ಮತ್ತು ನನ್ನ ಹೊಸ ಥಾಯ್ ಕಟ್‌ಗಾಗಿ ಪುಯಿ ಮತ್ತು ಗೆಟ್ಟಿ ಅವರಿಗೆ ದೊಡ್ಡ ಧನ್ಯವಾದಗಳು! ಎಂದು ರೈಮ್‌ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ.


ಸ್ನೇಹಿತರಿಗೆ ಸಮಯ ನೀಡಿದ ನಟ

ರಾಮಚರಣ್ ಇತ್ತೀಚೆಗೆ ಈಸ್ಟರ್ ಭಾನುವಾರವನ್ನು ಸ್ನೇಹಿತರೊಂದಿಗೆ ಹೇಗೆ ಕಳೆದರು ಎಂಬುದನ್ನು ತೋರಿಸುವ ರೈಮ್‌ನ ಇನ್‌ಸ್ಟಾಗ್ರಾಮ್‌ನಿಂದ ಚಿತ್ರವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರ ಮೊದಲ ರಜೆಯ ಫೋಟೋ ಚಾರ್ಟರ್ಡ್ ಫ್ಲೈಟ್‌ನಲ್ಲಿ ರಾಮ್ ಮತ್ತು ರೈಮ್ ಅನ್ನು ಒಳಗೊಂಡಿತ್ತು.

ವೈಜಾಗ್‌ನ ಬೀಚ್‌ ನಲ್ಲಿ ಮೋಜು

ಕಳೆದ ತಿಂಗಳು ರಾಮ್ ಚರಣ್ ಆಂಧ್ರಪ್ರದೇಶದ ವೈಜಾಗ್‌ನ ಬೀಚ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಮೋಜಿನ ದಿನಗಳನ್ನು ಆನಂದಿಸಿದರು.

ಕೆಲಸದ ಒತ್ತಡದ ಮಧ್ಯೆಯೂ ರಾಮ್ ಚರಣ್ ಸಮುದ್ರ ತೀರದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಸಮುದ್ರ ತೀರದಲ್ಲಿ ಸಮಯ ಕಳೆದ ಚಿತ್ರವನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

ಗೇಮ್ ಚೇಂಜರ್ ನಲ್ಲಿ ಬ್ಯುಸಿ

ತಮ್ಮ ಮುಂಬರುವ ಚಿತ್ರ ಗೇಮ್ ಚೇಂಜರ್‌ಗಾಗಿ ಕರಾವಳಿ ತಾಣದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಅವರು ಈ ಮಧ್ಯೆ ಪತ್ನಿ ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಮತ್ತು ಮುದ್ದಿನ ರೈಮ್ ಗೂ ಸಮಯ ಮೀಸಲಿರಿಸಿದ್ದಾರೆ.

ರಾಮ್ ಚರಣ್ ಅವರ ಇನ್ನೂ ಬಿಡುಗಡೆಯಾಗದ ಆಕ್ಷನ್ ಥ್ರಿಲ್ಲರ್ ಚಿತ್ರ ಗೇಮ್ ಚೇಂಜರ್ ಅನ್ನು ಎಸ್. ಶಂಕರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.

Exit mobile version