ಬೆಂಗಳೂರು : ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻವಾರಿಸುʼ ಸಿನಿಮಾ ಜನವರಿ 11ರಂದು ತೆರೆ ಕಂಡಿದೆ. ವಿಜಯ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ವರದಿ ಪ್ರಕಾರ ಭಾರತದಾದ್ಯಂತ 21-23 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಜಿತ್ ಅಭಿನಯದ ʻತುನಿವುʼ ಸಿನಿಮಾ ಕೂಡ ಒಂದೇ ದಿನ ರಿಲೀಸ್ ಆಗಿದ್ದರೂ, ʻವಾರಿಸುʼ ಸಿನಿಮಾ (Thala-Thalapathy Fans War) ಗಳಿಕೆಯಲ್ಲಿ ಮುನ್ನುಗ್ಗಿದೆ.
ʻತುನಿವುʼ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ʻವಾರಿಸುʼ ಸಿನಿಮಾ ಗಳಿಕೆಯಲ್ಲಿ ಯಶಸ್ವಿಯಾಗಿದೆ. ವಾರಿಸು ತಮಿಳು ಆವೃತ್ತಿಯು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ವಾರಾಂತ್ಯದಲ್ಲಿ ಹೆಚ್ಚಿನ ಗಳಿಕೆ ಕಾಣಬಹುದು ಎನ್ನಲಾಗಿದೆ. ವಾರಿಸು ಚಿತ್ರದ ಟ್ರೈಲರ್ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ | Thala-Thalapathy Fans War | ತಾರಕಕ್ಕೇರಿದ ಅಜಿತ್, ವಿಜಯ್ ಫ್ಯಾನ್ಸ್ ವಾರ್: ಪೋಸ್ಟರ್ ಹರಿದು ಕಿತ್ತಾಟ!
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಲ್ಲಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆರ್. ಶರತ್ಕುಮಾರ್, ಪ್ರಕಾಶ್ ರಾಜ್, ಶಾಮ್, ಶ್ರೀಕಾಂತ್, ಯೋಗಿ ಬಾಬು, ಮತ್ತು ಜಯಸುಧಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಜಿತ್ ಅಭಿನಯದ ʻತುನಿವುʼ ಸಿನಿಮಾ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. 19-21 ಕೋಟಿ ರೂ. ಮೊದಲ ದಿನ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹಲವು ಚಿತ್ರಮಂದಿರಗಳಲ್ಲಿ ತುನಿವು ಹೌಸ್ಫುಲ್ ಆಗಿತ್ತು.
ʻತುನಿವುʼ ಚಿತ್ರವನ್ನು ಎಚ್ ವಿನೋತ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಬೋನಿ ಕಪೂರ್ ನಿರ್ಮಿಸಿದ್ದಾರೆ. ಇದರಲ್ಲಿ ಮಂಜು ವಾರಿಯರ್, ಪಾವನಿ ರೆಡ್ಡಿ ,ಜಾನ್ ಕೊಕ್ಕೆನ್, ಮಮತಿ ಚಾರಿ, ವೀರ ಮತ್ತು ಬಗವತಿ ಪೆರುಮಾಳ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | Thala-Thalapathy Fans War | ಅಡ್ಡಾದಿಡ್ಡಿ ನಿರ್ದೇಶನ, ವಾಕರಿಕೆ ತರಿಸುವಂತಿದೆ ʻವಾರಿಸುʼ, ʻತುನಿವುʼ ಟ್ವೀಟ್ ವಿಮರ್ಶೆ ಇಲ್ಲಿದೆ