Site icon Vistara News

Thala-Thalapathy Fans War | ಅಡ್ಡಾದಿಡ್ಡಿ ನಿರ್ದೇಶನ, ವಾಕರಿಕೆ ತರಿಸುವಂತಿದೆ ʻವಾರಿಸುʼ, ʻತುನಿವುʼ ಟ್ವೀಟ್‌ ವಿಮರ್ಶೆ ಇಲ್ಲಿದೆ

Thala-Thalapathy Fans War

ಬೆಂಗಳೂರು : ಅಜಯ್‌ ಅಭಿನಯದ ʻತುನಿವುʼ ಹಾಗೂ ದಳಪತಿ ವಿಜಯ್‌ ನಟನೆಯ ʻವಾರಿಸುʼ ಸಿನಿಮಾ (Thala-Thalapathy Fans War ) ಒಂದೇ ದಿನ ಜನವರಿ 11ರಂದು ಬಿಡುಗಡೆಯಾಗಿದೆ. ಎಂಟು ವರ್ಷಗಳ ನಂತರ ಇಬ್ಬರು ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಎರಡೂ ಸಿನಿಮಾಗಳ ಬಗ್ಗೆ ಟ್ವೀಟ್‌ನಲ್ಲಿ ಪ್ರೇಕ್ಷಕರು ವಿಮರ್ಶೆ ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ʻವಾರಿಸುʼ ಮತ್ತು ʻತುನಿವುʼ ಸಿನಿಮಾಗಳು ಕೇವಲ ಅವರ ಅಭಿಮಾನಿಗಳಿಗೆ ಎಂದು ಹೇಳಿಕೊಂಡಿದ್ದಾರೆ.

ತುನಿವು ಕುರಿತು ಟ್ವೀಟ್‌ನಲ್ಲಿ ಒಬ್ಬರು ʻʻಮೊದಲಾರ್ಧವು ಸಂಪೂರ್ಣವಾಗಿ ಚೆನ್ನಾಗಿದೆ. ಅಜೀತ್‌ ಅವರದ್ದು ಶಕ್ತಿಯುತ ಪ್ರದರ್ಶನವಾಗಿದೆ. ಮಂಜು ವಾರಿಯರ್ ಮತ್ತು ಪಿ ಸಮುದ್ರಕನಿ ಇಬ್ಬರ ಅಭಿನಯವೂ ಅದ್ಭುತವಾಗಿದೆ ಮತ್ತು ಇತರ ಪೋಷಕ ಪಾತ್ರಗಳು ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆʼʼ ಎಂದಿದ್ದಾರೆ.

ಇದನ್ನೂ ಓದಿ | Thala-Thalapathy Fans War | ತಾರಕಕ್ಕೇರಿದ ಅಜಿತ್‌, ವಿಜಯ್‌ ಫ್ಯಾನ್ಸ್‌ ವಾರ್‌: ಪೋಸ್ಟರ್ ಹರಿದು ಕಿತ್ತಾಟ!

ಯೂಟ್ಯೂಬರ್ ಅನ್ಮೋಲ್ ಜಮ್ವಾಲ್ ಟ್ವೀಟ್ ಮಾಡಿ “ಎಚ್ ವಿನೋತ್ ಅವರ ನಿರ್ದೇಶನವು ನಿರಾಶಾದಾಯಕವಾಗಿದ್ದರೂ ಸನ್ನಿವೇಶಗಳು ಫಾಸ್ಟ್ ಆಗಿ ಮೂವ್ ಆಗುತ್ತವೆ. ಕಳಪೆ ಬಿಜಿಎಂ ಮತ್ತು ಎಡಿಟಿಂಗ್‌ನಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಚಿತ್ರವು ದ್ವಿತೀಯಾರ್ಧದಲ್ಲಿ ಅಷಾಗಿ ಚೆನ್ನಾಗಿಲ್ಲ. ಅಡ್ಡಾದಿಡ್ಡಿ ನಿರ್ದೇಶನದ ಸಂಕಲನವು ವಾಕರಿಕೆ ತರುತ್ತದೆʼʼ ಎಂದು ಅವರು ಹೇಳಿದ್ದಾರೆ.

ಚಲನಚಿತ್ರ ವಿಮರ್ಶಕ ಮತ್ತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ತುನಿವುಗೆ ನಾಲ್ಕು ಸ್ಟಾರ್ ರೇಟಿಂಗ್ ನೀಡಿದ್ದಾರೆ. ʻʻಅಜಿತ್ ಕುಮಾರ್ ಅವರ ಅಭಿನಯವು ಅವರ ಅಭಿಮಾನಿಗಳಿಗೆ ಇಂಪ್ರೆಸ್‌ ಆಗಿದೆ. ಮಂಜು ವಾರಿಯರ್ ಅವರ ನಟನೆಯೂ ಉತ್ತಮವಾಗಿದೆʼʼ. ಎಂದು ಹೇಳಿದರು.

ಕಥೆ ಸಾಮಾನ್ಯವಾಗಿದ್ದರೂ, ಎಚ್ ವಿನೋತ್ ಮತ್ತು ಅಜಿತ್ ಅವರ ಚಿತ್ರಕಥೆ ಅದ್ಭುತವಾಗಿದೆ ಎಂದು ಇತರ ಬಳಕೆದಾರರು ಹೇಳಿದ್ದಾರೆ. “ಸಾಮಾನ್ಯ ಕಥೆ, ಆದರೆ ಹೆಚ್ ವಿನೋತ್ ಅವರ ಅದ್ಭುತ ಚಿತ್ರಕಥೆ ಮತ್ತು ಅಜೀತ್‌ ಅವರ ಸೊಗಸಾದ ಪರದೆಯ ಉಪಸ್ಥಿತಿ. ಹಾಲಿವುಡ್ ಶೈಲಿಯ ಮೇಕಿಂಗ್‌ನೊಂದಿಗೆ ಈ ಸಿನಿಮಾವಿದೆ ” ಎಂದಿದ್ದಾರೆ.

ವಾರಿಸು ಕುರಿತು ಒಬ್ಬ ಬಳಕೆದಾರರು “ವಾರಿಸು ಒಂದು ಸಂಪೂರ್ಣ ಕುಟುಂಬದ ಭಾವನೆಯೊಂದಿಗೆ ಕೊನೆಗೊಳ್ಳುತ್ತದೆ. ನಟನಾಗಿ ವಿಜಯ್ ಅವರ ವೃತ್ತಿಜೀವನದಲ್ಲಿ ಒಂದು ಅತ್ಯುತ್ತಮ ಚಿತ್ರ. BGM ಮತ್ತು ಸಂಗೀತದ ಮೂಲಕ ತಮನ್ ಚಿತ್ರದ ಬೆನ್ನೆಲುಬು. ವಂಶಿ ಪೈಡಿಪಲ್ಲಿ ನಿರ್ದೇಶಕರಾಗಿ ಗೆದ್ದಿದ್ದೀರಿ. 4 ರೇಟಿಂಗ್‌ ನೀಡುತ್ತೇನೆ” ಎಂದಿದ್ದಾರೆ.

ರಮೇಶ್ ಬಾಲಾ ಅವರು ಚಿತ್ರಕ್ಕೆ 5 ರಲ್ಲಿ 3.25 ಸ್ಟಾರ್ ರೇಟಿಂಗ್ ನೀಡಿದರು .ಇದು ಒನ್ ಮ್ಯಾನ್ ಶೋ ಎಂದಿದ್ದಾರೆ. ಮುಖ್ಯವಾಗಿ ದಳಪತಿ ವಿಜಯ್ ಅವರ ವರ್ಚಸ್ಸು ಮತ್ತು ಸ್ಕ್ರೀನ್ ಪ್ರೆಸೆನ್ಸ್‌ನಿಂದ ಕೆಲಸ ಮಾಡುತ್ತದೆ. ಫ್ಯಾಮಿಲಿ ಎಂಟರ್‌ಟೈನರ್‌ನ ಎಲ್ಲಾ ಅಂಶಗಳನ್ನು ಹೊಂದಿದೆʼʼ ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, “ವಾರಿಸು ಮತ್ತು ತುನಿವು ಎರಡೂ ಕೇವಲ ಅವರೇಜ್‌ ಸಿನಿಮಾಗಳು ಎಂದು ನಾನು ಭಾವಿಸುತ್ತೇನೆ.” ಎಂದಿದ್ದಾರೆ.

ತುನಿವು ಇಲ್ಲಿಯವರೆಗೆ 8.0/10 IMDb ರೇಟಿಂಗ್ ಅನ್ನು ಹೊಂದಿದೆ. ಚಿತ್ರದಲ್ಲಿ ಅಜಿತ್, ಮಂಜು ವಾರಿಯರ್, ಸಮುದ್ರಕಣಿ, ಪಾವನಿ ರೆಡ್ಡಿ ಮತ್ತು ಬಾಗವತಿ ಪೆರುಮಾಳ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಾರಿಸು ಇಲ್ಲಿಯವರೆಗೆ 7.7/10 IMDb ರೇಟಿಂಗ್ ಅನ್ನು ಹೊಂದಿದೆ. ಇದರಲ್ಲಿ ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಆರ್ ಶರತ್‌ಕುಮಾರ್, ಪ್ರಕಾಶ್ ರಾಜ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ | Ajith Kumar | `ತುನಿವು’ ಸಿನಿಮಾ ಬಿಡುಗಡೆ ವೇಳೆ ಟ್ರಕ್‌ನಿಂದ ಬಿದ್ದು ಅಜಿತ್‌ ಅಭಿಮಾನಿ ಸಾವು

Exit mobile version