ಬೆಂಗಳೂರು : ತಮಿಳು ಚಿತ್ರರಂಗದ ಪ್ರಸಿದ್ಧ ಯುವ ಚಲನಚಿತ್ರ ನಿರ್ದೇಶಕ ಲೋಕೇಶ್ ಕನಕರಾಜ್ ಬ್ಯಾಕ್-ಟು-ಬ್ಯಾಕ್ ಬ್ಲಾಕ್ಬಸ್ಟರ್ ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಲೋಕೇಶ್ ಕನಕರಾಜ್ ಅವರ ಮುಂಬುರುವ ಚಿತ್ರ ದಳಪತಿ 67 ಟೀಸರ್ (Thalapathy 67) ಜನವರಿ 26, ಗುರುವಾರ ಬಿಡುಗಡೆಯಾಗಲಿದೆ ಎಂದು ವರದಿಯಾಗಿತ್ತು. ಇದರಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಯೋಜನೆ ತಾತ್ಕಾಲಿಕವಾಗಿ ದಳಪತಿ 67 ಎಂದು ಹೆಸರಿಡಲಾಗಿದೆ. ಆದರೆ, ಈಗ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಲೋಕೇಶ್ ಕನಕರಾಜ್ ಸ್ಪಷ್ಟನೆ ನೀಡಿದ್ದಾರೆ.
ಕೊಯಮತ್ತೂರಿನ ಪ್ರಸಿದ್ಧ ಕಾಲೇಜಿನಲ್ಲಿ ನಡೆದ ಮೈಕೆಲ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕೇಶ್ ಕನಕರಾಜ್, ದಳಪತಿ 67 ಟೀಸರ್ ಬಿಡುಗಡೆಯು ಜನವರಿಯಲ್ಲಿ ನಡೆಯುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ಈ ವರ್ಷದ ಫೆಬ್ರುವರಿ ಮೊದಲ ವಾರದಲ್ಲಿ ಟೀಸರ್ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಟೀಸರ್ ಬಿಡುಗಡೆ ವಿಳಂಬಕ್ಕೆ ನಿಜವಾದ ಕಾರಣವನ್ನು ನಿರ್ದೇಶಕರು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ನಿರ್ದೇಶಕನಿಗೆ ʼಲೈಫ್ ಟೈಮ್ ಸೆಟಲ್ಮೆಂಟ್ʼ ಮಾಡಿದ ಕಮಲ್ ಹಾಸನ್
ಹೇಗಿರಲಿದೆ ದಳಪತಿ 67?
ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಮಯದಲ್ಲಿ, ಲೋಕೇಶ್ ಕನಕರಾಜ್ ಅವರು ದಳಪತಿ 67 ಕಥಾಹಂದರದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್ ಅವರನ್ನು ರೊಮ್ಯಾಂಟಿಕ್ ಅವತಾರದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂದು ವಿದ್ಯಾರ್ಥಿಗಳು ನಿರ್ದೇಶಕರನ್ನು ಕೇಳಿದಾಗ, ಹೌದು ಎಂದು ಉತ್ತರಿಸಿದ್ದಾರೆ. 40ರ ಹರೆಯದ ದರೋಡೆಕೋರನ ಪಾತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ತ್ರಿಶಾ ಕೃಷ್ಣನ್ ಈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಹೀಗಾಗಿ ಬಹಳ ಗ್ಯಾಪ್ ನಂತರ ವಿಜಯ್ ಜತೆ ಮತ್ತೆ ಒಂದಾಗುತ್ತಿದ್ದಾರೆ.
ಇದನ್ನೂ ಓದಿ: Rashmika Mandanna | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಕಾಂಬಿನೇಶನ್ ಸಿನಿಮಾಗೆ ನೋಟಿಸ್
ಜನಪ್ರಿಯ ಬಾಲಿವುಡ್ ನಟ ಸಂಜಯ್ ದತ್ ಈ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ನಟ-ನಿರ್ದೇಶಕ ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಅರ್ಜುನ್ ದಾಸ್ ಮತ್ತು ಇತರರು ಸೇರಿದಂತೆ ತಾರಾಬಳಗವನ್ನು ಒಳಗೊಂಡಿದೆ. ಕಮಲ್ ಹಾಸನ್ ಮತ್ತು ಚಿಯಾನ್ ವಿಕ್ರಮ್ ಸಹ ಸಿನಿಮಾದ ಭಾಗವಾಗಿದ್ದಾರೆ ಎಂದು ಹೇಳಲಾಗುತ್ತಿದೆ.