Site icon Vistara News

Thalapathy Vijay: ಮತ್ತೆ ಒಂದಾಗುತ್ತಿದ್ದಾರೆ ಅಟ್ಲೀ-ವಿಜಯ್‌ ದಳಪತಿ; ʻಜವಾನ್‌ʼ ಸೀಕ್ವೆಲ್‌ ಬರುತ್ತಾ?

Thalapathy Vijay and Atlee

ಬೆಂಗಳೂರು: ವಿಜಯ್ ದಳಪತಿ (Thalapathy Vijay) ಮತ್ತು ಅಟ್ಲೀ (Director Atlee) ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಟ-ನಿರ್ದೇಶಕ ಜೋಡಿಗಳಲ್ಲಿ ಒಂದು. ಥೇರಿ, ಮೆರ್ಸಲ್ ಮತ್ತು ಬಿಗಿಲ್ ಈ ಜೋಡಿಯ ಈ ಎಲ್ಲ ಸಿನಿಮಾಗಳೂ ಹಿಟ್‌ ಆಗಿವೆ. ಈ ಜೋಡಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಇದೀಗ ಮತ್ತೆ ಹೊಸ ಸಿನಿಮಾ ಮೂಲಕ ದಳಪತಿ ವಿಜಯ್ ಮತ್ತು ಅಟ್ಲೀ ಒಂದಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಜವಾನ್ ನಿರ್ದೇಶಕ ಅಟ್ಲೀ ನಾಲ್ಕನೇ ಬಾರಿಗೆ ವಿಜಯ್ ಜತೆ ಮತ್ತೆ ಸಿನಿಮಾ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ.

ಈ ಬಗ್ಗೆ ಅಟ್ಲೀ ಮಾಧ್ಯಮವೊಂದರಲ್ಲಿ ಮಾತನಾಡಿ ʻನಾನು ಕೇವಲ 5 ಸಿನಿಮಾಗಳನ್ನು ಮಾಡಿದ್ದು, ಅದರಲ್ಲಿ 3 ವಿಜಯ್ ಅವರೊಂದಿಗೆ ಮಾಡಿರುವುದಾಗಿದೆ. ಹಾಗಾಗಿ, ಸಮಯ ಬಂದಾಗ ಮತ್ತೆ ಅವರ ಜತೆ ಸಿನಿಮಾ ಮಾಡುತ್ತೇನೆʼʼ ಎಂದು ಖಚಿತಪಡಿಸಿದ್ದಾರೆ.

ʻʻಜವಾನ್ ಕೇವಲ ಶಾರುಖ್ ಅವರಿಗಾಗಿಯೇ ನಿರ್ಮಿಸಲಾಗಿದೆ” ಎಂದೂ ಅಟ್ಲಿ ಬಹಿರಂಗಪಡಿಸಿದ್ದಾರೆ. ʻʻಈ ಸಿನಿಮಾ ಯಾರು ಮಾಡುತ್ತಾರೆ ಎಂಬ ಬಗ್ಗೆ ನನಗೆ ಬೇರೆ ಆಲೋಚನೆ ಇರಲಿಲ್ಲ. ಮೊದಲ ದಿನದಿಂದ ಸ್ಕ್ರಿಪ್ಟ್, ದೃಶ್ಯಗಳು, ಹಾಗೇ ಸಿನಿಮಾದಲ್ಲಿ ಏನು ಮಾಡುತ್ತೇನೆ ಎಂಬುದರ ಬಗ್ಗೆ ನಾನು ಚರ್ಚೆ ಮಾಡಿದ್ದು ವಿಜಯ್ ಸರ್ ಜತೆ. ಅವರು ನನಗೆ ಸಹೋದರನ ತರಹ. ಅವರು ಕೂಡ ತಮ್ಮ ಸಿನಿಮಾಗಳ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಯಾವಾಗಲೂ ನನಗೆ ಬೆನ್ನೆಲುಬಾಗಿದ್ದರು. ನಾವು ಜವಾನ್‌ನಲ್ಲಿ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದೇವೆʼʼ ಎಂದರು.

ಇದನ್ನೂ ಓದಿ: Thalapathy Vijay: ಇದ್ದಕ್ಕಿದ್ದಂತೆ ದಳಪತಿ ವಿಜಯ್‌ ಪೋಷಕರತ್ತ ಧಾವಿಸಿದ್ದೇಕೆ?

ʻʻನಾನು ಜವಾನ್‌ ಎರಡನೇ ಭಾಗವನ್ನು ಮಾಡುತ್ತೇನೆ. ಈಗ ಅಥವಾ ನಂತರದ ಮುಂದುವರಿದ ಭಾಗದೊಂದಿಗೆ ಬರಬಹುದು. ಆದರೆ ಖಂಡಿತ ಮುಂದೊಂದು ದಿನ ಜವಾನ್‌ನ ಸೀಕ್ವೆಲ್ ಬರಲಿದೆʼʼ ಎಂದವರು ಹೇಳಿದರು.

ʼಲಿಯೋ’ ಜಾಗತಿಕ ಬಿಡುಗಡೆಗೆ 42 ದಿನಗಳ ಮೊದಲು ಒಂದೇ ದಿನದಲ್ಲಿ ಚಿತ್ರಕ್ಕಾಗಿ ಈಗಾಗಲೇ 10,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ. ಚಿತ್ರದಲ್ಲಿ ನಟ ದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 19ರಂದು ʼಲಿಯೋʼ ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ದಳಪತಿ ವಿಜಯ್, ತ್ರಿಶಾ, ಸಂಜಯ್ ದತ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್ ಮತ್ತು ಮ್ಯಾಥ್ಯೂ ಥಾಮಸ್ ತಾರಾಗಣವನ್ನು ಒಳಗೊಂಡಿದೆ.

ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ಜೋಡಿಯ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ಮಾಸ್ಟರ್ʼ ಸಿನಿಮಾ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ.

Exit mobile version