Site icon Vistara News

Leo Trailer: ʻಲಿಯೋʼ ಟ್ರೈಲರ್‌ ವಿಶೇಷ ಪ್ರದರ್ಶನ ವೇಳೆ ದಾಂಧಲೆ; ಚಿತ್ರಮಂದಿರಗಳ ಕುರ್ಚಿಗಳು ಪೀಸ್‌ ಪೀಸ್‌!

Rohini theater property destroyed

ಬೆಂಗಳೂರು: ದಳಪತಿ ವಿಜಯ್ (Thalapathy Vijay) ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಲಿಯೋ ಸಿನಿಮಾ (Leo Trailer) ಟ್ರೈಲರ್ ಅ.4ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಕೆಲವೇ ಗಂಟೆಯಲ್ಲಿ ಮಿಲಿಯನ್‌ ವೀಕ್ಷಣೆ ಕಂಡಿದ್ದು ಫ್ಯಾನ್ಸ್‌ ಮೆಚ್ಚಿದ್ದಾರೆ. ಆದರೆ ಈ ನಡುವೆಯೂ ಚೆನ್ನೈ ರೋಹಿಣಿ ಥಿಯೇಟರ್‌ನಲ್ಲಿ ವಿಜಯ್‌ ಫ್ಯಾನ್ಸ್‌ ಪುಂಡಾಟ ಮೆರೆದಿದ್ದಾರೆ. ವಿಜಯ್ ಅಭಿಮಾನಿಗಳು ರೋಹಿಣಿ ಚಿತ್ರಮಂದಿರದಲ್ಲಿ ಮನಸ್ಸಿಗೆ ಬಂದಂತೆ ಕುಣಿದಾಡಿದ್ದಾರೆ. ಈ ವೇಳೆ ಚಿತ್ರಮಂದಿರದ ಸೀಟುಗಳು ಮುರಿದಿದ್ದು, ಹಾನಿಯಾಗಿವೆ. ಚಿತ್ರಮಂದಿರದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಲಿಯೋ ಚಿತ್ರದ ಟ್ರೈಲರ್‌ ವಿಶೇಷ ಪ್ರದರ್ಶನಕ್ಕಾಗಿ ನೂರಾರು ಅಭಿಮಾನಿಗಳು ಚೆನ್ನೈನ ರೋಹಿಣಿ ಚಿತ್ರಂಮಂದಿರದಲ್ಲಿ ಜಮಾಯಿಸಿದ್ದರು. ದೊಡ್ಡ ಪರದೆಯಲ್ಲಿ ತಮ್ಮ ನೆಚ್ಚಿನ ನಟನನ್ನು ಕಂಡು ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಹುಚ್ಚುತನವನ್ನು ಪ್ರದರ್ಶಿಸಿದ್ದಾರೆ. ವಿಜಯ್ ಅಭಿಮಾನಿಗಳು ರೋಹಿಣಿ ಚಿತ್ರಮಂದಿರದಲ್ಲಿ ಮನಸ್ಸಿಗೆ ಬಂದಂತೆ ಕುಣಿದಾಡಿದ್ದಾರೆ. ಈ ವೇಳೆ ಚಿತ್ರಮಂದಿರದ ಸೀಟುಗಳು ಮುರಿದಿದ್ದು, ಹಾನಿಯಾಗಿವೆ.

ಸ್ಕ್ರೀನಿಂಗ್‌ಗೆ ಪೊಲೀಸ್ ಭದ್ರತೆ

ಈವೆಂಟ್‌ಗೆ ಮೊದಲು, ವರದಿಯ ಪ್ರಕಾರ, ಥಿಯೇಟರ್‌ನ ಆಡಳಿತವು ಪಾರ್ಕಿಂಗ್ ಸ್ಥಳದಲ್ಲಿ ಲಿಯೋಗಾಗಿ ಹೊರಾಂಗಣ ಪ್ರದರ್ಶನವನ್ನು ನಡೆಸಲು ಅನುಮತಿಯನ್ನು ಕೋರಿತ್ತು. ಆದರೂ, ಪೊಲೀಸರು ವಿನಂತಿಯನ್ನು ತಿರಸ್ಕರಿಸಿ, ಸ್ಕ್ರೀನಿಂಗ್‌ಗಾಗಿ ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೂ ಈ ರೀತಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: Leo Movie: ಲಿಯೋ ಟ್ರೈಲರ್ ಔಟ್… ವಿಜಯ್ ಅಭಿಮಾನಿಗಳಿಗೆ ಹಬ್ಬ! ಅ.19ಕ್ಕೆ ಸಿನಿಮಾ ರಿಲೀಸ್

ಲಿಯೋ ಸಿನಿಮಾ ಇದೇ ತಿಂಗಳು 19 ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದ್ದು, ಈಗ ಟ್ರೈಲರ್ (trailer Out) ಜೋರು ಹವಾ ಸೃಷ್ಟಿಸಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಸನ್ ಟಿವಿಯ ಅಧಿಕೃತ ಪುಟಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಲಿಯೋ ಟ್ರೈಲರ್ ಧಮಾಕಾ ಆಗಿದ್ದು, ಅರ್ಜುನ್ ಸರ್ಜಾ, ಸುನಿಲ್ ದತ್, ತ್ರಿಷಾ ಕೃಷ್ಣನ್ ಅವರನ್ನು ಕಾಣಬಹುದು. ಟ್ರೈಲರ್ ಮಾತ್ರ ಮಸ್ತ್ ಆಗಿದ್ದು, ಸಿನಿಮಾದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು.

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version