Site icon Vistara News

Thalapathy Vijay: ಇನ್‌ಸ್ಟಾಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್‌: ಒಂದೇ ದಿನದಲ್ಲಿ 41 ಲಕ್ಷ ಫಾಲೋವರ್ಸ್‌

Thalapathy Vijay Instagram debut fastest to 4 million followers

ಬೆಂಗಳೂರು: ಕಾಲಿವುಡ್‌ ನಟ ದಳಪತಿ ವಿಜಯ್‌ (Thalapathy Vijay) ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟಿವ್‌ ಇಲ್ಲದೇ ಇರುವ ನಟ ಇದೀಗ ಇನ್‌ಸ್ಟಾ ಖಾತೆಯನ್ನು ತೆರದಿದ್ದಾರೆ. ಈಗಾಗಲೇ ಅವರು ಫೇಸ್​ಬುಕ್ ಹಾಗೂ ಟ್ವಿಟ್ಟರ್​ನಲ್ಲಿ ಇದ್ದಾದರೂ ಹೆಚ್ಚು ಟ್ವೀಟ್ ಮಾಡುವುದಿಲ್ಲ .ಇನ್​ಸ್ಟಾಗ್ರಾಂನಿಂದ ದೂರವಿದ್ದ ನಟ ವಿಜಯ್ ಏಪ್ರಿಲ್‌ 2ರಂದು ಇನ್​ಸ್ಟಾಗ್ರಾಂ (Instagram) ಖಾತೆ ತೆರೆದಿದ್ದು, ಕೇವಲ 99 ನಿಮಿಷಗಳಲ್ಲಿ 1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಇದೀಗ ಇಂದಿಗೆ (ಎಪ್ರಿಲ್‌ 3) 41 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌​ಗಳನ್ನು ಪಡೆದಿದ್ದಾರೆ.

ದಳಪತಿ ವಿಜಯ್‌ ಕೊನೆಯದಾಗಿ ವಾರಿಸು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟ ಏಪ್ರಿಲ್‌ 3ರಂದು ಮೊದಲ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರವನ್ನು ನಟ ಹಂಚಿಕೊಂಡು “ಹಲೋ ಸ್ನೇಹಿತರೆʼʼ ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ಗೆ ಪದಾರ್ಪಣೆ ಮಾಡುವ ಮೊದಲು, ನಟ ಟ್ವೀಟರ್‌‌ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು. 2020 ರಲ್ಲಿ ತಮ್ಮ ಅಭಿಮಾನಿಗಳೊಟ್ಟಿಗೆ ವಿಜಯ್ ಸೆಲ್ಫಿಯೊಂದನ್ನು ತೆಗೆದುಕೊಂಡು ಅದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು, ಅದು ಆ ವರ್ಷದ ಅತಿ ಹೆಚ್ಚು ಲೈಕ್ಸ್ ಪಡೆದ ರೀಟ್ವೀಟ್ ಆದ ಚಿತ್ರವೆಂದು ದಾಖಲೆಯಾಗಿತ್ತು. ವಿಜಯ್​ಗೆ ಟ್ವಿಟರ್​ನಲ್ಲಿ 44 ಲಕ್ಷ ಫಾಲೋವರ್​ಗಳಿದ್ದಾರೆ, ಆದರೆ ವಿಜಯ್ ಯಾರನ್ನೂ ಫಾಲೋ ಮಾಡುವುದಿಲ್ಲ. ಇನ್ನು ಫೇಸ್​ಬುಕ್​ನಲ್ಲಿ 78 ಲಕ್ಷ ಜನ ಫಾಲೋವರ್ಸ್‌​ಗಳಿದ್ದಾರೆ.

ಇದನ್ನೂ ಓದಿ; Thalapathy Vijay: ಲೀಕ್‌ ಆಯ್ತು ದಳಪತಿ ವಿಜಯ್‌ ಅಭಿನಯದ ʻಲಿಯೋʼ ಶೂಟಿಂಗ್‌ ವಿಡಿಯೊ

ವಿಜಯ್‌ ಅವರ ಮೊದಲ ಇನ್‌ಸ್ಟಾಗ್ರಾಮ್‌ ಪೋಸ್ಟ್‌

ವಿಜಯ್ ಅವರ ಮುಂದಿನ ಯೋಜನೆ

ಕೆಲಸದ ಮುಂಭಾಗದಲ್ಲಿ, ವಿಜಯ್ ಪ್ರಸ್ತುತ ʻಲಿಯೋʼ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ. ಇದರಲ್ಲಿ ಸಂಜಯ್ ದತ್ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದೆ.

ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದ್ದಾರೆ. ಈ ಚಿತ್ರವನ್ನು ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ. ಅನಿರುಚ್ ರವಿಚಂದರ್ ಸಂಗೀತ ನೀಡಲಿದ್ದಾರೆ.

ವರದಿಗಳ ಪ್ರಕಾರ, ದಳಪತಿ ವಿಜಯ್ ಅವರು ಲಿಯೋ ನಂತರ ನಾಲ್ಕನೇ ಬಾರಿಗೆ ನಿರ್ದೇಶಕ ಅಟ್ಲೀ ಅವರೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version