ಬೆಂಗಳೂರು: 2021ರಲ್ಲಿ ಬಿಡುಗಡೆಯಾದ ‘ಮಾಸ್ಟರ್’ ಸಿನಿಮಾದಲ್ಲಿ ದಳಪತಿ ವಿಜಯ್ (Thalapathy Vijay) ಮತ್ತು ಲೋಕೇಶ್ ಕನಕರಾಜ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಎರಡು ವರ್ಷಗಳ ನಂತರ, ನಟ-ನಿರ್ದೇಶಕ ಜೋಡಿ ಮತ್ತೆ ಒಂದಾಗಿದೆ. ಅದೇ ‘ಲಿಯೋ’ ಸಿನಿಮಾಗಾಗಿ. ಹುಟ್ಟುಹಬ್ಬದ ಪ್ರಯುಕ್ತ ಜೂನ್ 21ರ ಮಧ್ಯರಾತ್ರಿಯೇ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಜಯ್ ಅವರಿಗೆ ಶುಭಾಶಯ ಕೋರಿದ್ದರು. ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.
‘ನಾ ರೆಡಿದಾ ವರವಾ’ ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡಿಗೆ ವಿಜಯ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್ ಸಾಹಿತ್ಯ ರಚಿಸಿದ್ದು, ವಿಜಯ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ದಳಪತಿ ವಿಜಯ್ ಅಭಿನಯದ ‘ಲಿಯೋ’ ಚಿತ್ರದ ‘ನಾ ರೆಡಿ’ ಹಾಡು ದಳಪತಿ ವಿಜಯ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ ಎಂದು ಲೋಕೇಶ್ ಕನಕರಾಜ್ ಈ ಹಿಂದೆ ಬಹಿರಂಗಪಡಿಸಿದ್ದರು. ಹಾಡಿನ ಅಧಿಕೃತ ಪೋಸ್ಟರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದರು.
ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಯೋ ಚಿತ್ರ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಪ್ರಮುಖ ತಾರಾಗಣವನ್ನು ಹೊಂದಿದೆ. ಈ ಚಿತ್ರವನ್ನು ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ.
ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ಅಭಿನಯದ ʻಲಿಯೋʼ ಫಸ್ಟ್ ಲುಕ್ ಪೋಸ್ಟರ್ ಔಟ್!
#NaaReady is all yours now!
— Lokesh Kanagaraj (@Dir_Lokesh) June 22, 2023
Thank you for making this a special one @actorvijay nahttps://t.co/LKksHYMCY5
#Leo 🔥🧊 pic.twitter.com/jH8opfyJVI
ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. 40 ವರ್ಷದ ದರೋಡೆಕೋರನ ಪಾತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. 14 ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ವಿಜಯ್ ಹಾಗೂ ತ್ರಿಶಾ ತೆರೆ ಮೆಲೆ ಮತ್ತೆ ಒಂದಾಗುತ್ತಿದ್ದಾರೆ. ಸಂಜಯ್ ದತ್ ಸಿನಿಮಾದಲ್ಲಿ ವಿಲನ್ ಪಾತ್ರ ನಿಭಾಯಿಸುತ್ತಿದ್ದು, ಚಿತ್ರದಲ್ಲಿ ವಿಜಯ್ ಅವರ ತಂದೆಯ ಪಾತ್ರವನ್ನು ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ.