Site icon Vistara News

Thalapathy Vijay: ಲೀಕ್‌ ಆಯ್ತು ದಳಪತಿ ವಿಜಯ್‌ ಅಭಿನಯದ ʻಲಿಯೋʼ ಶೂಟಿಂಗ್‌ ವಿಡಿಯೊ

Thalapathy Vijay Thalapathy Vijay

ಬೆಂಗಳೂರು: ದಳಪತಿ ವಿಜಯ್‌ (Thalapathy Vijay) ಅಭಿನಯದ ʻಲಿಯೋʼ ಚಿತ್ರತಂಡ ಪ್ರಸ್ತುತ ಕಾಶ್ಮೀರದಲ್ಲಿ ಶೂಟಿಂಗ್‌ನಲ್ಲಿದೆ. ಇದೀಗ ಲಿಯೋ ಚಿತ್ರೀಕರಣದ ಕೆಲವು ದೃಶ್ಯಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಕೊಡೈಕೆನಾಲ್‌ನಲ್ಲಿ ಶೂಟಿಂಗ್‌ ಮುಗಿದ ಬಳಿಕ ಕಾಶ್ಮೀರದಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ ಎನ್ನಲಾಗಿದೆ. 15 ದಿನಗಳವರೆಗೆ ಕಾಶ್ಮೀರದಲ್ಲಿಯೇ ಶೂಟಿಂಗ್‌ ನಡೆಯಲಿದೆ ಎಂದು ವರದಿಯಾಗಿದೆ. ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ.

ಲಿಯೋ ಶೂಟಿಂಗ್ ಸ್ಪಾಟ್‌ನಿಂದ ದಳಪತಿ ವಿಜಯ್ ಅವರ ವಿಡಿಯೊ ಲೀಕ್!

ದಳಪತಿ ವಿಜಯ್, ತ್ರಿಶಾ ಮತ್ತು ಲಿಯೋ ಅವರ ಇಡೀ ತಂಡವು ಕಾಶ್ಮೀರದಲ್ಲಿದೆ. ಇತ್ತೀಚೆಗಷ್ಟೇ, ಚಿತ್ರೀಕರಣದ ನಂತರ ತಂಡವು ದೀಪೋತ್ಸವವನ್ನು ಆನಂದಿಸುತ್ತಿರುವ ಫೋಟೊವನ್ನು ಲೋಕೇಶ್ ಹಂಚಿಕೊಂಡಿದ್ದಾರೆ. ಇದೀಗ ಚಿತ್ರದ ಶೂಟಿಂಗ್ ಸ್ಪಾಟ್‌ನ ವಿಡಿಯೊವೊಂದು ವೈರಲ್ ಆಗಿದೆ. ಸೋರಿಕೆಯಾದ ವಿಡಿಯೊದಲ್ಲಿ, ವಿಜಯ್ ಬಿಳಿ ಶರ್ಟ್‌ನಲ್ಲಿ ಟ್ರಾಫಿಕ್ ಜಾಮ್ ಮಧ್ಯೆ ನಡೆಯುವುದನ್ನು ಕಾಣಬಹುದು. ವಿಜಯ್ ಅವರ ಕೆಲವು ಅಭಿಮಾನಿ ಸಂಘಗಳು ಶೂಟಿಂಗ್ ಸ್ಪಾಟ್ ಕ್ಲಿಪ್‌ಗಳನ್ನು ಹಂಚಿಕೊಳ್ಳದಂತೆ ಮನವಿಯನ್ನೂ ಮಾಡುತ್ತಿವೆ.

ಇದನ್ನೂ ಓದಿ: Actor Dhanush | ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಧನುಷ್‌ 50ನೇ ಚಿತ್ರ ಘೋಷಣೆ

https://twitter.com/Jilla__Ajay/status/1624733716286435328?s=20&t=ecLY9ayO0JjQn0obmzMymQ

ಇದನ್ನೂ ಓದಿ: Vijay And Sangeetha: 22 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಕೀರ್ತಿ ಸುರೇಶ್‌ ಜತೆ ಹಸೆಮಣೆ ಏರಲಿದ್ದಾರಾ ವಿಜಯ್‌ ದಳಪತಿ?

ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಯೋ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದ್ದಾರೆ. ಈ ಚಿತ್ರವನ್ನು ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ. ಅನಿರುಚ್ ರವಿಚಂದರ್ ಸಂಗೀತ ನೀಡಲಿದ್ದಾರೆ.

Exit mobile version