Site icon Vistara News

Thalapathy Vijay: ಇದ್ದಕ್ಕಿದ್ದಂತೆ ದಳಪತಿ ವಿಜಯ್‌ ಪೋಷಕರತ್ತ ಧಾವಿಸಿದ್ದೇಕೆ?

Thalapathy Vijay with his parents

ಬೆಂಗಳೂರು: ನಿರ್ದೇಶಕ ವೆಂಕಟ್ ಪ್ರಭು ಅವರ ‘ದಳಪತಿ 68’ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪೂರ್ಣಗೊಳಿಸಿದ ನಂತರ ದಳಪತಿ ವಿಜಯ್ (Thalapathy Vijay) ಇತ್ತೀಚೆಗೆ ಅಮೆರಿಕದಿಂದ ತವರಿಗೆ ಬಂದಿದ್ದಾರೆ. ಚೆನ್ನೈನಲ್ಲಿ ತಂದೆ ತಾಯಿಯನ್ನು ಭೇಟಿ ಮಾಡಿದ್ದಾರೆ. ಶೋಭಾ ಮತ್ತು ಎಸ್‌ಎ ಚಂದ್ರಶೇಖರ್ ಜತೆ ವಿಜಯ್‌ ಫೋಟೊ ಕ್ಲಿಕ್ಕಿಸಿಕೊಂಡಿರುವುದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವರದಿಯ ಪ್ರಕಾರ, ಎಸ್‌ಎ ಚಂದ್ರಶೇಖರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ವಿಜಯ್‌ ಶೂಟಿಂಗ್‌ ಮುಗಿದ ಕೂಡಲೇ ಪೋಷಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

‘ಲಿಯೋ’ ಚಿತ್ರದಲ್ಲಿ ದಳಪತಿ ವಿಜಯ್

ಲೋಕೇಶ್ ಕನಕರಾಜ್ ಅವರ ನಿರ್ದೇಶನದ ‘ಲಿಯೋ’ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅವರು ನಿರ್ದೇಶಕ ವೆಂಕಟ್ ಪ್ರಭು ಅವರ ಮುಂಬರುವ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿ ‘ದಳಪತಿ 68’ ಎಂದು ಹೆಸರಿಸಲಾಗಿರುವ ಈ ಚಿತ್ರವು ‘ಲಿಯೋ’ ಬಿಡುಗಡೆಯ ನಂತರ ಸೆಟ್ಟೇರಲಿದೆ.

ಇದನ್ನೂ ಓದಿ: Thalapathy Vijay: ನಿರ್ದೇಶನಕ್ಕಿಳಿದ ದಳಪತಿ ವಿಜಯ್ ಪುತ್ರ; ಲೈಕಾ ಬಂಡವಾಳ!

ಲಿಯೋ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಬಿಡುಗಡೆಗೆ (Leo Movie) ಇನ್ನೂ ಒಂದು ತಿಂಗಳ ಕಾಲಾವಕಾಶವಿದ್ದು, ಇಂದಿನಿಂದಲೇ (10k tickets booked) ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಿದೆ. ಅಹಿಂಸಾ ಎಂಟರ್‌ಟೈನ್‌ಮೆಂಟ್ ಕಂಪನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕಂಪನಿಯ ಪ್ರಕಾರ, ‘ಲಿಯೋ’ ಜಾಗತಿಕ ಬಿಡುಗಡೆಗೆ 42 ದಿನಗಳ ಮೊದಲು ಒಂದೇ ದಿನದಲ್ಲಿ ಚಿತ್ರಕ್ಕಾಗಿ ಈಗಾಗಲೇ 10,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡ ಬುಕ್ಕಿಂಗ್‌ ಮಾಡಲಾಗಿದೆ. ಚಿತ್ರದಲ್ಲಿ ನಟ ದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ಲಿಯೋ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ಮಾಸ್ಟರ್ʼ ಸಿನಿಮಾ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ.

ಇದನ್ನೂ ಓದಿ: Weather report : ಬೆಂಗಳೂರಲ್ಲಿ ಸಂಜೆಗೆ ಮಳೆ ಅಬ್ಬರ; ಕರಾವಳಿಗೆ ಯೆಲ್ಲೋ ಅಲರ್ಟ್‌!

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ, ಲಿಯೋ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version