ಬೆಂಗಳೂರು: ಚಿಯಾನ್ ವಿಕ್ರಮ್ (Chiyaan Vikram) ಅವರ ಜನುಮದಿನದ ಅಂಗವಾಗಿ ʻʻತಂಗಲಾನ್ʼʼ (Thangalaan)ಚಿತ್ರತಂಡ ಏಪ್ರಿಲ್ 17ರಂದು ಮೇಕಿಂಗ್ ವಿಡಿಯೊವನ್ನು ಬಿಡುಗಡೆ ಮಾಡಿದೆ. ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್ ವಿಕ್ರಮ್.
ಪಾ ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರು ಟ್ವೀಟರ್ನಲ್ಲಿ ಹೊಸ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೊ ಬಿಡುಗಡೆ ಮಾಡಿದ್ದಾರೆ. “ನನ್ನ ತಂಗಲಾನ್ ಅವರಿಗೆ ಜನ್ಮದಿನದ ಶುಭಾಶಯಗಳು, ಚಿಯಾನ್ ಸರ್. ತಂಗಲನ್ ಮೇಕಿಂಗ್ ವಿಡಿಯೊವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ತಂಗಲಾನ್ನಲ್ಲಿನ ಈ ಪಾತ್ರಕ್ಕಾಗಿಯೇ ವಿಕ್ರಮ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್ʼʼ ಹೇಳುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್, ಮಾಳವಿಕಾ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೂಲಕ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ರಂಜಿತ್.
ಇದನ್ನೂ ಓದಿ: Chiyaan Vikram | ರಿಯಲ್ ಕೆಜಿಎಫ್ ಕಥೆಯ ಶೀರ್ಷಿಕೆ ರಿವೀಲ್: ರಗಡ್ ಲುಕ್ನಲ್ಲಿ ನಟ ಚಿಯಾನ್ ವಿಕ್ರಮ್!
ಪಾ ರಂಜಿತ್ ಟ್ವೀಟ್
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಲಿದೆ. ಈಗಾಗಲೇ ವಿಕ್ರಮ್ ನಟನೆಯ ಕಾಲಿವುಡ್ ಸಿನಿಮಾ ʻಕೋಬ್ರಾʼ ಹಾಗೂ ʻಪೊನ್ನಿಯಿನ್ ಸೆಲ್ವನ್ʼ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದೆ.