Site icon Vistara News

ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ʼThank Godʼ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ, ವಿಕ್ರಾಂತ್‌ ರೋಣ ಫಿಕ್ಸ್‌

Thank Godʼ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ

ಬೆಂಗಳೂರು : ಕಿಚ್ಚ ಸುದೀಪ್‌ ಅವರ ವಿಕ್ರಾಂತ್‌ ರೋಣ ಇದೇ ಜುಲೈ 28ಕ್ಕೆ ರಿಲೀಸ್‌ ಆಗುತ್ತಿದೆ. ಅಂತೆಯೇ ರಕ್ಕಮ್ಮ ಸಾಂಗ್‌ ಕೂಡ ಸಕತ್‌ ಹವಾ ಕೂಡ ಮಾಡುತ್ತಾ ಇದೆ. ಈ ಬಗ್ಗೆ ಈ ಹಿಂದೆ ಅಧಿಕೃತವಾಗಿ ಹೇಳಿಕೊಂಡಿದ್ದ ತಂಡ ಇದೀಗ ಇನ್ಸ್‌ಟಾ ರೀಲ್ಸ್‌ನಲ್ಲಿ ರಕ್ಕಮ್ಮ ಹಾಡು ಸದ್ದು ಮಾಡುತ್ತಾ ಇದೆ.

ಅಜಯ್‌ ದೇವಗನ್‌ ಅವರ ʼಥ್ಯಾಂಕ್‌ ಗಾಡ್‌ʼ (Thank God ) ಸಿನಿಮಾ ಕೂಡ ಜುಲೈ 28ಕ್ಕೆ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಅಜಯ್‌ ದೇವಗನ್‌ ಹಿಂದೆ ಸರಿದಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

3ಡಿಯಲ್ಲಿ ವಿಕ್ರಾಂತ್ ರೋಣ (Vikrant Rona)

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. 

ಇದನ್ನೂ ಓದಿ | ಇನ್ನೊಮ್ಮೆ ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ಜುಲೈನಲ್ಲಿ ʼವಿಕ್ರಾಂತ್‌ ರೋಣʼ, ʼಥ್ಯಾಂಕ್‌ ಗಾಡ್‌ʼ ಸ್ಟಾರ್‌ ವಾರ್..!

ರಾಷ್ಟ್ರ ಭಾಷೆ ಕುರಿತ ವಾರ್‌

ತಿಂಗಳ ಹಿಂದೆಯಷ್ಟೇ ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರ ಕಮೆಂಟ್‌ಗೆ ಬಾಲಿವುಡ್‌ ನಟ ಅಜಯ್‌ ದೇವಗನ್ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್‌ ಹೇಳಿದ ಮಾತಿಗೆ ರಿಪ್ಲೈ ಮಾಡಿದ್ದ ದೇವಗನ್‌, ಹಾಗಾದರೆ ಹಿಂದಿ ಭಾಷೆಯಲ್ಲಿ ಏಕೆ ಡಬ್‌ ಮಾಡುತ್ತೀರಿ ಎಂದು ಹಿಂದಿಯಲ್ಲೇ ಸಂಪೂರ್ಣ ಟ್ವೀಟ್‌ ಬರೆದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಸುದೀಪ್‌ ವಿನಯದಿಂದಲೇ ಖಡಕ್‌ ಉತ್ತರ ನೀಡಿದ್ದರು. ಈ ವಿಚಾರ ವ್ಯಾಪಕ ಚರ್ಚೆಗೀಡಾಗಿ ನಂತರ ವಿಚಾರ ತಣ್ಣಗೆ ಆಗಿತ್ತು.

ವಿಎಫ್‌ಎಕ್ಸ್‌ (VFX) ಕೆಲಸಗಳು ಬಾಕಿ ಇರುವುದರಿಂದ ಸ್ವಲ್ಪ ತಡವಾಗಿ ಸಿನಿಮಾ ರಿಲೀಸ್‌ ಮಾಡುವುದಾಗಿ ʼಥ್ಯಾಂಕ್‌ ಗಾಡ್‌ ʼನಿರ್ಮಾಪಕ ಭೂಷಣ್‌  ಹೇಳಿದ್ದಾರೆ. “ನನ್ನ ಬಳಿ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಬಾಕಿ ಇವೆ. ಆಕ್ಷನ್ ಹೀರೋ ಆಯುಷ್ಮಾನ್ ಖುರಾನಾ ಜೊತೆ , ಅಜಯ್ ಸರ್ ಜೊತೆ ಭೋಲಾ ಮತ್ತು ದೃಶ್ಯಂ 2, ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಜೊತೆ ವಿಕ್ರಮ್ ವೇದಾ, ರಣಬೀರ್ ಕಪೂರ್ ಜೊತೆ ಲವ್ ರಂಜನ್ ಚಿತ್ರವಿದೆ. ನಾವು ರಾಜ್‌ಕುಮಾರ್ ರಾವ್ ಅವರೊಂದಿಗೆ  ಮಲ್ಟಿಪಲ್‌ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದೇನೆʼ ಅದನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಭೂಷಣ್‌ ಹೇಳಿದರು.

ಅಜಯ್‌ ದೇವಗನ್‌ ಅವರ ಥ್ಯಾಂಕ್‌ ಗಾಡ್‌ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ. ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ರಾಕುಲ್‌ ಪ್ರೀತ್‌ ಸಿಂಗ್‌ ಅಭಿನಯಿಸುತ್ತಿರುವುದು ಇನ್ನೂ ವಿಶೇಷ.

ಕಿಚ್ಚ ಸುದೀಪ್‌ ಇದೀಗ ವಿಕ್ರಾಂತ್‌ ರೋಣ ಸಾಂಗ್‌ನ ಮೊದಲ ಬಾರಿ ರೀಲ್ಸ್‌ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ನಾವೆಲ್ಲರೂ ಭಾರತೀಯರೇ ಅಲ್ವಾ ಸರ್‌ !: ಹಿಂದಿಗೇಕೆ ಡಬ್‌ ಮಾಡುತ್ತೀರ ಎಂದ ಅಜಯ್‌ ದೇವಗನ್‌ಗೆ ಕಿಚ್ಚ ಉತ್ತರ

Exit mobile version