Site icon Vistara News

The Hunt for Veerappan: ವೀರಪ್ಪನ್ ಡಾಕ್ಯುಮೆಂಟರಿ ಟೀಸರ್ ಔಟ್‌!

Veerappan

ಬೆಂಗಳೂರು: ‘ಭಾರತದ ರಾಬಿನ್ ಹುಡ್’ ಎಂದು ಕರೆಯಲ್ಪಡುವ ವೀರಪ್ಪನ್ ಕುರಿತು ಡಾಕ್ಯುಮೆಂಟರಿಯನ್ನು ನೆಟ್​ಫ್ಲಿಕ್ಸ್ ನಿರ್ಮಿಸಿದ್ದು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ. ಜುಲೈ 27ರಂದು ನೆಟ್​ಫ್ಲಿಕ್ಸ್​ ವೀರಪ್ಪನ್ ಕುರಿತಾದ ‘ದಿ ಹಂಟ್ ಫಾರ್ ವೀರಪ್ಪನ್’ (The Hunt for Veerappan) ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಿದೆ. ನಾಲ್ಕು ಭಾಗಗಳ ಡಾಕ್ಯುಮೆಂಟ್ ಸರಣಿಯನ್ನು ಸೆಲ್ವಮಣಿ ಸೆಲ್ವರಾಜ್ ಅವರು ನಿರ್ದೇಶಿಸಿದ್ದಾರೆ .

ಟೀಸರ್​ನಲ್ಲಿನ ಹಿನ್ನೆಲೆ ಧ್ವನಿ, ”ಆಧುನಿಕ ಜಗತ್ತು ಈ ರೀತಿಯ ಒಬ್ಬ ಅಪರಾಧಿಯನ್ನು ನೋಡೇ ಇಲ್ಲ. ವೀರಪ್ಪನ್​ನಂಥಹ ಒಬ್ಬ ವ್ಯಕ್ತಿ ಅಥವಾ ಅಪರಾಧಿ ಭೂಮಿಯ ಮೇಲಿಲ್ಲʼʼ ಎಂದಿದೆ. ‘ಆತ ಎರಡು ರಾಜ್ಯಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಅವನದ್ದು ಭಯೋತ್ಪಾದನೆ ಅಲ್ಲ, ದಂಗೆ ಅಲ್ಲ. ‘ವೀರಪ್ಪನ ಮಾದರಿ’ ಎಂಬ ಪ್ರತ್ಯೇಕ ಮಾದರಿಯಿಂದಲೇ ಅವನ ಕುಕೃತ್ಯಗಳನ್ನು ಗುರುತಿಸಬೇಕು” ಎಂದಿದೆ.

ವೀರಪ್ಪನ್‌ನ ಕುಖ್ಯಾತಿಯ ಬಗ್ಗೆ ನಾವು ಹಲವಾರು ವರ್ಷಗಳಿಂದ ಕಥೆಗಳನ್ನು ಕೇಳಿದ್ದೇವೆ, ಆದರೆ ಅವನು ಯಾವ ರೀತಿಯ ಕ್ರಿಮಿನಲ್ ಆಗಿ ಮಾರ್ಪಟ್ಟಿದ್ದನೆಂದು ಯಾರಿಗೂ ತಿಳಿದಿಲ್ಲ ಎನ್ನುವುದ ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ ಮಾತು. “ಈ ಡಾಕ್ಯುಮೆಂಟ್-ಸಿರೀಸ್‌ನಲ್ಲಿ ಸಂಶೋಧನೆಯ ಮೂಲಕ ಹಲವು ವಿಚಾರಗಳನ್ನು ಹೊರತೆಗೆಯಲು ಸಾಧ್ಯವಾಯಿತು. ಹೇಳಲಾಗದ ಕಥೆಗಳನ್ನು ಇಲ್ಲಿ ಬಹಿರಂಗಪಡಿಸಿದ್ದೇವೆʼʼಎಂದರು.

ಮೂಲತಃ ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾದ ಡಾಕ್ಯು-ಸಿರೀಸ್‌ ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿಯೂ ಲಭ್ಯವಿರುತ್ತದೆ. ಇದು ಆಗಸ್ಟ್ 4 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ವೀರಪ್ಪನ್ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದ ಹಾಗೂ ತಮಿಳುನಾಡಿನ ಅಧಿಕಾರಿಗಳ ಸಂದರ್ಶನಗಳು, ಹೇಳಿಕೆಗಳು ಸಹ ಡಾಕ್ಯುಮೆಂಟರಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಈಗ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ಲಾಲ್ ಕೃಷ್ಣ ಅಡ್ವಾಣಿ ವೀರಪ್ಪನ್ ಬಗ್ಗೆ ಮಾತನಾಡಿರುವ ದೃಶ್ಯದ ತುಣುಕು ಸೇರಿದಂತೆ ವೀರಪ್ಪನ್​ನ ಹಲವು ವಿಡಿಯೊ ದೃಶ್ಯಗಳು ಸಹ ಇವೆ.

ಇದನ್ನೂ ಓದಿ: Veerappan Aide Dead: ಪರಪ್ಪನ ಅಗ್ರಹಾರದಲ್ಲಿ ವೀರಪ್ಪನ್‌ ಸಹಚರ ಸಾವು

ವೀರಪ್ಪನ್ ನೆನೆದರೆ ಕನ್ನಡಿಗರಿಗೆ ಮೊದಲು ನೆನಪಾಗುವುದು ಡಾ ರಾಜ್​ಕುಮಾರ್ ಅಪಹರಣ. 108 ದಿನಗಳ ಕಾಲ ರಾಜ್​ಕುಮಾರ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವೀರಪ್ಪನ್ ವಿದೇಶಗಳಲ್ಲಿಯೂ ಸುದ್ದಿಯಾಗಿಬಿಟ್ಟಿದ್ದ. ಆ ವಿಷಯ, ವಿಡಿಯೋಗಳು ಸಹ ಡಾಕ್ಯುಮೆಂಟರಿಯಲ್ಲಿ ಇರಲಿವೆ ಎಂಬುದು ಸುಲಭದ ಊಹೆ. ವೀರಪ್ಪನ್ ಬಗ್ಗೆ ಈ ಹಿಂದೆ ಕೆಲವಾರು ಸಿನಿಮಾಗಳು ಬಂದಿವೆ.

Exit mobile version