ಬೆಂಗಳೂರು: ವಿಪುಲ್ ಷಾ (Vipul Shah)ನಿರ್ಮಾಣದ ʻದಿ ಕೇರಳ ಸ್ಟೋರಿʼ ಸಿನಿಮಾ (The Kerala Story) ಮೇ 5ರಂದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಸ್ಲಾಂಗೆ ಮತಾಂತರಗೊಂಡ ಹಿಂದು ಮಹಿಳೆಯರ ಕಥೆಗಳ ಸುತ್ತ ಇರುವ ಸಿನಿಮಾ ಇದಾಗಿದೆ. ಇದೀಗ ಈ ಸಿನಿಮಾ ಬಿಡುಗಡೆ ಬಗ್ಗೆ ಹಲವಾರು ಅರ್ಜಿಗಳು ದಾಖಲಾಗಿವೆ. ಕೆಲವೊಂದು ಅರ್ಜಿಗಳಲ್ಲಿ ಕೇರಳದ ಮಹಿಳೆಯರು ಐಸಿಸ್‌ಗೆ (ISIS) ಸೇರುವ ಕುರಿತಾದ ಚಿತ್ರವು ಸತ್ಯವನ್ನು ಆಧರಿಸಿಲ್ಲ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚಾರ ಮಾಡುತ್ತಿವೆ ಎಂದು ಅರ್ಜಿಗಳು ಬಂದಿವೆ. ಸುದೀಪ್ತೋ ಸೇನ್ ( Sudipto Sen) ನಿರ್ದೇಶನದ ʻದಿ ಕೇರಳ ಸ್ಟೋರಿʼ ವಿವೇಕ್ ಅಗ್ನಿಹೋತ್ರಿಯವರ (Vivek Agnihotri) ʻದಿ ಕಾಶ್ಮೀರ್ ಫೈಲ್ಸ್ʼ (The Kashmir Files) ಸಿನಿಮಾ ರೀತಿಯಲ್ಲಿಯೇ ಸಕ್ಸೆಸ್ ಕಾಣಬಹುದು ಎಂದು ಅನೇಕ ಸಿನಿ ತಜ್ಞರು ಅಭಿಪ್ರಾಯ ಸೂಚಿಸಿದ್ದಾರೆ.
ʻದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ಬಿಡುಗಡೆಯ ಸಮಯದಲ್ಲಿ ಕಾಶ್ಮೀರಿ ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದೆ ಎಂದು ಆರೋಪಿಸಿ ಬಹಿಷ್ಕಾರದ ಕರೆಗಳನ್ನು ಎದುರಿಸಿತು. ಆದರೂ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಮತ್ತು ಚಿತ್ರಮಂದಿರಗಳಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಯಶಸ್ವಿ ಪ್ರದರ್ಶನ ಕಂಡಿತು.
ಇದೀಗ ʻದಿ ಕಾಶ್ಮೀರ್ ಫೈಲ್ಸ್ʼ ಹಾಗೂ ʻದಿ ಕೇರಳ ಸ್ಟೋರಿʼ ಸಿನಿಮಾಗಳ ಕುರಿತು ತಜ್ಞರು ಅಭಿಪ್ರಾಯ ಸೂಚಿಸಿದ್ದಾರೆ. ದಿ ಕೇರಳ ಸ್ಟೋರಿಯು ಬಾಕ್ಸ್ ಆಫೀಸ್‌ನಲ್ಲಿ ಕಾಶ್ಮೀರ ಫೈಲ್ಸ್‌ನ ಹಾದಿಯಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದರ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: The Kerala Story Review : ಲವ್ ಜಿಹಾದ್, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ
ಸಿನಿಮಾ ಕಟೆಂಟ್‌ಗಳು ಮುಖ್ಯ
“ಚಿತ್ರವೊಂದು ತನ್ನ ಸ್ಟಾರ್ ಪವರ್‌ನಿಂದ ಮಾತ್ರ ಯಶಸ್ಸು ಗಳಿಸುತ್ತವೆ ಎಂಬುವ ಕಾಲ ಈಗಿಲ್ಲ. ಇಂದು ಸಿನಿಮಾದ ಕಟೆಂಟ್‌ಗಳೇ ಬಹು ಮುಖ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಜನರು ಒಳ್ಳೆಯ ಕಥೆಗಳನ್ನು ಬಯಸುತ್ತಿದ್ದಾರೆ. ಈ ಚಿತ್ರ ಭರ್ಜರಿ ಬಜ್ ಕ್ರಿಯೇಟ್ ಮಾಡಿದೆ. ವಾರಾಂತ್ಯದಲ್ಲಿ ಸಿನಿಮಾ ಇನ್ನೂ ಒಳ್ಳೆಯ ಪ್ರದರ್ಶನ ಕಾಣುತ್ತದೆ. ಸಿನಿ ಉದ್ಯಮಕ್ಕೆ ಇದು ಒಳ್ಳೆಯ ಬೆಳವಳಿಗೆ ಎಂದು ನಾನು ಭಾವಿಸುತ್ತೇನೆ” ಎಂದು ನಿರ್ಮಾಪಕ ಮತ್ತು ಚಲನಚಿತ್ರ ವ್ಯವಹಾರ ತಜ್ಞ ಗಿರೀಶ್ ಜೋಹರ್ ಮಾಧ್ಯಮದೊಂದಿಗೆ ಹೇಳಿಕೆ ನೀಡಿದರು.
ಆರಂಭಿಕ ಹಂತದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೂಡ ನಿಧಾನಗತಿಯಲ್ಲಿ ಕಲೆಕ್ಷನ್
ಆರಂಭಿಕ ಹಂತದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿಧಾನಗತಿಯಲ್ಲಿ ಕಲೆಕ್ಷನ್ ಶುರು ಮಾಡಿತ್ತು. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಷಿ ಅಭಿನಯದ ಈ ಸಿನಿಮಾ ಮೊದಲ ದಿನ ಕೇವಲ 3.5 ಕೋಟಿ ರೂ ಗಳಿಕೆ ಕಂಡಿತ್ತು. ವಾರಾಂತ್ಯದಲ್ಲಿ ಸಿನಿಮಾ ಅತ್ಯುನ್ನತವಾಗಿ ಗಳಿಕೆ ಕಾಣುವಲ್ಲಿ ಯಶಸ್ವಿಯಾಯಿತು. ಎರಡನೇ ದಿನ 8.50 ಕೋಟಿ ರೂ. ಗಳಿಸಿದರೆ, 3ನೇ ದಿನದ ಕಲೆಕ್ಷನ್ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿತು. ಕೊನೆಗೆ ವಿಶ್ವಾದ್ಯಂತ 340 ಕೋಟಿ ರೂ. ಬಾಚಿತು. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು “ದಿ ಕೇರಳ ಸ್ಟೋರಿ” ದಿ ಕಾಶ್ಮೀರ್ ಫೈಲ್ಸ್‌ನಂತೆಯೇ ದೊಡ್ಡ ಸರ್‌ಪ್ರೈಸ್ ನೀಡಲಿದೆ ಆ ವಿಶ್ವಾಸ ತನಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ವಿಶ್ವಾದ್ಯಂತ ತೆರೆಗೆ
ದಿ ಕೇರಳ ಸ್ಟೋರಿಗೆ ಉತ್ತಮ ಪ್ರತಿಕ್ರಿಯೆ
ತರಣ್ ಆದರ್ಶ್ ಈ ಬಗ್ಗೆ ಮಾತನಾಡಿ ʻʻದಿ ಕೇರಳ ಸ್ಟೋರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ನಾನು ಸಿನಿಮಾ ನೋಡಿದೆ. ಚಿತ್ರಮಂದಿರಗಳು ತುಂಬಿತ್ತು. ದರ್ಶನಗಳು ಹೌಸ್‌ಫುಲ್ ಆಗುತ್ತಿವೆ ಎಂದು ಥಿಯೇಟರ್ ಆಡಳಿತವು ನನಗೆ ತಿಳಿಸಿದೆ. ವಾರಾಂತ್ಯದಲ್ಲಿ ಚಿತ್ರವು ಖಂಡಿತವಾಗಿಯೂ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ಚಿತ್ರವು ಕಾಶ್ಮೀರ ಫೈಲ್ಸ್ ನಂತೆಯೇ ಹೆಚ್ಚು ಗಳಿಕೆ ಕಾಣುತ್ತದೆ. ವಿಶ್ವಾಸವಿದೆʼʼಎಂದು ಹೇಳಿದರು.
ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್; 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ
ದಿ ಕಾಶ್ಮೀರ್ ಫೈಲ್ಸ್‌ನ ಆರಂಭಿಕ ದಾಖಲೆ ಮುರಿಯಲಿದೆ
ಚಲನಚಿತ್ರ ವ್ಯವಹಾರ ವಿಶ್ಲೇಷಕ ಅತುಲ್ ಮೋಹನ್ ಮಾತನಾಡಿ ʻʻದಿ ಕೇರಳ ಸ್ಟೋರಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ದಿ ಕಾಶ್ಮೀರ್ ಫೈಲ್ಸ್‌ನ ಆರಂಭಿಕ ದಾಖಲೆಯನ್ನು ಮುರಿಯಲಿದೆ. “ದಿ ಕೇರಳ ಸ್ಟೋರಿ ಮೊದಲನೇ ದಿನ 6 ರಿಂದ 7 ಕೋಟಿ ರೂ. ಗಳಿಸುವ ಸಾಧ್ಯತೆಯಿದೆʼʼಎಂದರು. ಮಾತು ಮುಂದುವರಿಸಿ ʻʻನೀವು ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿದರೆ, ಚಿತ್ರವು ಯೋಗ್ಯವಾದ ವಿಮರ್ಶೆಗಳನ್ನು ಪಡೆದಿದೆ. ವೇಶೇಷವಾಗಿ ಪ್ರೇಕ್ಷಕರಿಂದ. ಕೇರಳ ಕಥೆಯ ವಿಮರ್ಶೆಗಳು ಇಲ್ಲಿಯವರೆಗೆ ಮಿಶ್ರವಾಗಿವೆ. ಚಿತ್ರಪ್ರೇಮಿಗಳು ಅದೇ ರೀತಿಯ ಬೆಂಬಲವನ್ನು ತೋರಿಸಿದರೆ ಮಾತ್ರ ದಿ ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್‌ನಲ್ಲಿ ಕಾಶ್ಮೀರ ಫೈಲ್ ಸಿನಿಮಾ ಹಾದಿಯಲ್ಲಿ ಹೋಗಬಹುದು” ಎಂದು ಹೇಳಿದರು.