The Kerala Story Recreate The Kashmir Files Phenomenon The Kerala Story: ʻದಿ ಕಾಶ್ಮೀರ್ ಫೈಲ್ಸ್‌ʼ ದಾಖಲೆಯನ್ನು ಮುರಿಯಲಿದೆಯೇ ʻದಿ ಕೇರಳ ಸ್ಟೋರಿʼ: ತಜ್ಞರು ಹೇಳೋದೇನು? - Vistara News

South Cinema

The Kerala Story: ʻದಿ ಕಾಶ್ಮೀರ್ ಫೈಲ್ಸ್‌ʼ ದಾಖಲೆಯನ್ನು ಮುರಿಯಲಿದೆಯೇ ʻದಿ ಕೇರಳ ಸ್ಟೋರಿʼ: ತಜ್ಞರು ಹೇಳೋದೇನು?

ʻದಿ ಕೇರಳ ಸ್ಟೋರಿʼ (The Kerala Story) ವಿವೇಕ್ ಅಗ್ನಿಹೋತ್ರಿಯವರ (Vivek Agnihotri) ʻದಿ ಕಾಶ್ಮೀರ್ ಫೈಲ್ಸ್‌ʼ (The Kashmir Files) ಸಿನಿಮಾ ರೀತಿಯಲ್ಲಿಯೇ ಸಕ್ಸೆಸ್‌ ಕಾಣಬಹುದು ಎಂದು ಅನೇಕ ಸಿನಿ ತಜ್ಞರು ಅಭಿಪ್ರಾಯ ಸೂಚಿಸಿದ್ದಾರೆ.

VISTARANEWS.COM


on

The Kerala Story Recreate The Kashmir Files Phenomenon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಪುಲ್ ಷಾ (Vipul Shah)ನಿರ್ಮಾಣದ ʻದಿ ಕೇರಳ ಸ್ಟೋರಿʼ ಸಿನಿಮಾ (The Kerala Story) ಮೇ 5ರಂದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಸ್ಲಾಂಗೆ ಮತಾಂತರಗೊಂಡ ಹಿಂದು ಮಹಿಳೆಯರ ಕಥೆಗಳ ಸುತ್ತ ಇರುವ ಸಿನಿಮಾ ಇದಾಗಿದೆ. ಇದೀಗ ಈ ಸಿನಿಮಾ ಬಿಡುಗಡೆ ಬಗ್ಗೆ ಹಲವಾರು ಅರ್ಜಿಗಳು ದಾಖಲಾಗಿವೆ. ಕೆಲವೊಂದು ಅರ್ಜಿಗಳಲ್ಲಿ ಕೇರಳದ ಮಹಿಳೆಯರು ಐಸಿಸ್‌ಗೆ (ISIS) ಸೇರುವ ಕುರಿತಾದ ಚಿತ್ರವು ಸತ್ಯವನ್ನು ಆಧರಿಸಿಲ್ಲ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚಾರ ಮಾಡುತ್ತಿವೆ ಎಂದು ಅರ್ಜಿಗಳು ಬಂದಿವೆ. ಸುದೀಪ್ತೋ ಸೇನ್ ( Sudipto Sen) ನಿರ್ದೇಶನದ ʻದಿ ಕೇರಳ ಸ್ಟೋರಿʼ ವಿವೇಕ್ ಅಗ್ನಿಹೋತ್ರಿಯವರ (Vivek Agnihotri) ʻದಿ ಕಾಶ್ಮೀರ್ ಫೈಲ್ಸ್‌ʼ (The Kashmir Files) ಸಿನಿಮಾ ರೀತಿಯಲ್ಲಿಯೇ ಸಕ್ಸೆಸ್‌ ಕಾಣಬಹುದು ಎಂದು ಅನೇಕ ಸಿನಿ ತಜ್ಞರು ಅಭಿಪ್ರಾಯ ಸೂಚಿಸಿದ್ದಾರೆ.

ʻದಿ ಕಾಶ್ಮೀರ್ ಫೈಲ್ಸ್‌ʼ ಸಿನಿಮಾ ಬಿಡುಗಡೆಯ ಸಮಯದಲ್ಲಿ ಕಾಶ್ಮೀರಿ ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದೆ ಎಂದು ಆರೋಪಿಸಿ ಬಹಿಷ್ಕಾರದ ಕರೆಗಳನ್ನು ಎದುರಿಸಿತು. ಆದರೂ, ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಮತ್ತು ಚಿತ್ರಮಂದಿರಗಳಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಯಶಸ್ವಿ ಪ್ರದರ್ಶನ ಕಂಡಿತು.

ಇದೀಗ ʻದಿ ಕಾಶ್ಮೀರ್ ಫೈಲ್ಸ್‌ʼ ಹಾಗೂ ʻದಿ ಕೇರಳ ಸ್ಟೋರಿʼ ಸಿನಿಮಾಗಳ ಕುರಿತು ತಜ್ಞರು ಅಭಿಪ್ರಾಯ ಸೂಚಿಸಿದ್ದಾರೆ. ದಿ ಕೇರಳ ಸ್ಟೋರಿಯು ಬಾಕ್ಸ್ ಆಫೀಸ್‌ನಲ್ಲಿ ಕಾಶ್ಮೀರ ಫೈಲ್ಸ್‌ನ ಹಾದಿಯಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದರ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ: The Kerala Story Review : ಲವ್‌ ಜಿಹಾದ್‌, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ

ಸಿನಿಮಾ ಕಟೆಂಟ್‌ಗಳು ಮುಖ್ಯ

“ಚಿತ್ರವೊಂದು ತನ್ನ ಸ್ಟಾರ್ ಪವರ್‌ನಿಂದ ಮಾತ್ರ ಯಶಸ್ಸು ಗಳಿಸುತ್ತವೆ ಎಂಬುವ ಕಾಲ ಈಗಿಲ್ಲ. ಇಂದು ಸಿನಿಮಾದ ಕಟೆಂಟ್‌ಗಳೇ ಬಹು ಮುಖ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಜನರು ಒಳ್ಳೆಯ ಕಥೆಗಳನ್ನು ಬಯಸುತ್ತಿದ್ದಾರೆ. ಈ ಚಿತ್ರ ಭರ್ಜರಿ ಬಜ್ ಕ್ರಿಯೇಟ್‌ ಮಾಡಿದೆ. ವಾರಾಂತ್ಯದಲ್ಲಿ ಸಿನಿಮಾ ಇನ್ನೂ ಒಳ್ಳೆಯ ಪ್ರದರ್ಶನ ಕಾಣುತ್ತದೆ. ಸಿನಿ ಉದ್ಯಮಕ್ಕೆ ಇದು ಒಳ್ಳೆಯ ಬೆಳವಳಿಗೆ ಎಂದು ನಾನು ಭಾವಿಸುತ್ತೇನೆ” ಎಂದು ನಿರ್ಮಾಪಕ ಮತ್ತು ಚಲನಚಿತ್ರ ವ್ಯವಹಾರ ತಜ್ಞ ಗಿರೀಶ್ ಜೋಹರ್ ಮಾಧ್ಯಮದೊಂದಿಗೆ ಹೇಳಿಕೆ ನೀಡಿದರು.

ಆರಂಭಿಕ ಹಂತದಲ್ಲಿ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ ಕೂಡ ನಿಧಾನಗತಿಯಲ್ಲಿ ಕಲೆಕ್ಷನ್‌

ಆರಂಭಿಕ ಹಂತದಲ್ಲಿ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ ನಿಧಾನಗತಿಯಲ್ಲಿ ಕಲೆಕ್ಷನ್‌ ಶುರು ಮಾಡಿತ್ತು. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಷಿ ಅಭಿನಯದ ಈ ಸಿನಿಮಾ ಮೊದಲ ದಿನ ಕೇವಲ 3.5 ಕೋಟಿ ರೂ ಗಳಿಕೆ ಕಂಡಿತ್ತು. ವಾರಾಂತ್ಯದಲ್ಲಿ ಸಿನಿಮಾ ಅತ್ಯುನ್ನತವಾಗಿ ಗಳಿಕೆ ಕಾಣುವಲ್ಲಿ ಯಶಸ್ವಿಯಾಯಿತು. ಎರಡನೇ ದಿನ 8.50 ಕೋಟಿ ರೂ. ಗಳಿಸಿದರೆ, 3ನೇ ದಿನದ ಕಲೆಕ್ಷನ್ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿತು. ಕೊನೆಗೆ ವಿಶ್ವಾದ್ಯಂತ 340 ಕೋಟಿ ರೂ. ಬಾಚಿತು. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು “ದಿ ಕೇರಳ ಸ್ಟೋರಿ” ದಿ ಕಾಶ್ಮೀರ್ ಫೈಲ್ಸ್‌ನಂತೆಯೇ ದೊಡ್ಡ ಸರ್‌ಪ್ರೈಸ್‌ ನೀಡಲಿದೆ ಆ ವಿಶ್ವಾಸ ತನಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ವಿಶ್ವಾದ್ಯಂತ ತೆರೆಗೆ

ದಿ ಕೇರಳ ಸ್ಟೋರಿಗೆ ಉತ್ತಮ ಪ್ರತಿಕ್ರಿಯೆ

ತರಣ್‌ ಆದರ್ಶ್‌ ಈ ಬಗ್ಗೆ ಮಾತನಾಡಿ ʻʻದಿ ಕೇರಳ ಸ್ಟೋರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ನಾನು ಸಿನಿಮಾ ನೋಡಿದೆ. ಚಿತ್ರಮಂದಿರಗಳು ತುಂಬಿತ್ತು. ದರ್ಶನಗಳು ಹೌಸ್‌ಫುಲ್ ಆಗುತ್ತಿವೆ ಎಂದು ಥಿಯೇಟರ್ ಆಡಳಿತವು ನನಗೆ ತಿಳಿಸಿದೆ. ವಾರಾಂತ್ಯದಲ್ಲಿ ಚಿತ್ರವು ಖಂಡಿತವಾಗಿಯೂ ಒಳ್ಳೆಯ ಕಲೆಕ್ಷನ್‌ ಮಾಡುತ್ತದೆ. ಚಿತ್ರವು ಕಾಶ್ಮೀರ ಫೈಲ್ಸ್ ನಂತೆಯೇ ಹೆಚ್ಚು ಗಳಿಕೆ ಕಾಣುತ್ತದೆ. ವಿಶ್ವಾಸವಿದೆʼʼಎಂದು ಹೇಳಿದರು.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್​; 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

ದಿ ಕಾಶ್ಮೀರ್ ಫೈಲ್ಸ್‌ನ ಆರಂಭಿಕ ದಾಖಲೆ ಮುರಿಯಲಿದೆ

ಚಲನಚಿತ್ರ ವ್ಯವಹಾರ ವಿಶ್ಲೇಷಕ ಅತುಲ್ ಮೋಹನ್ ಮಾತನಾಡಿ ʻʻದಿ ಕೇರಳ ಸ್ಟೋರಿ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ದಿ ಕಾಶ್ಮೀರ್ ಫೈಲ್ಸ್‌ನ ಆರಂಭಿಕ ದಾಖಲೆಯನ್ನು ಮುರಿಯಲಿದೆ. “ದಿ ಕೇರಳ ಸ್ಟೋರಿ ಮೊದಲನೇ ದಿನ 6 ರಿಂದ 7 ಕೋಟಿ ರೂ. ಗಳಿಸುವ ಸಾಧ್ಯತೆಯಿದೆʼʼಎಂದರು. ಮಾತು ಮುಂದುವರಿಸಿ ʻʻನೀವು ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿದರೆ, ಚಿತ್ರವು ಯೋಗ್ಯವಾದ ವಿಮರ್ಶೆಗಳನ್ನು ಪಡೆದಿದೆ. ವೇಶೇಷವಾಗಿ ಪ್ರೇಕ್ಷಕರಿಂದ. ಕೇರಳ ಕಥೆಯ ವಿಮರ್ಶೆಗಳು ಇಲ್ಲಿಯವರೆಗೆ ಮಿಶ್ರವಾಗಿವೆ. ಚಿತ್ರಪ್ರೇಮಿಗಳು ಅದೇ ರೀತಿಯ ಬೆಂಬಲವನ್ನು ತೋರಿಸಿದರೆ ಮಾತ್ರ ದಿ ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್‌ನಲ್ಲಿ ಕಾಶ್ಮೀರ ಫೈಲ್‌ ಸಿನಿಮಾ ಹಾದಿಯಲ್ಲಿ ಹೋಗಬಹುದು” ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Actor Prabhas: ಸದ್ಯ ವಿವಿಧ ಸಿನಿಮಾಗಳಲ್ಲಿ ನಿರತರಾಗಿರುವ ಪ್ಯಾನ್‌ ಇಂಡಿಯಾ ಸ್ಟಾರ್‌ ಬಹು ನಿರೀಕ್ಷಿತ ‘ಕಣ್ಣಪ್ಪ’ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ನಟ ವಿಷ್ಣು ಮಂಚು ನಟಿಸುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಬಾಲಿವುಡ್‌ನ ಅಕ್ಷಯ್‌ ಕುಮಾರ್‌, ಬಹುಭಾಷಾ ನಟ, ಮಾಲಿವುಡ್‌ ಸ್ಟಾರ್‌ ಮೋಹನ್‌ ಲಾಲ್‌, ಮೋಹನ್‌ ಬಾಬು, ಶರತ್‌ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದು, ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾ ಗಮನ ಸೆಳೆದಿದೆ.

VISTARANEWS.COM


on

Actor Prabhas
Koo

ಹೈದರಾಬಾದ್‌: ತೆಲುಗು ಚಿತ್ರ ‘ಕಣ್ಣಪ್ಪ’ (Kannappa) ಸದ್ಯ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ನಟ, ರಾಜಕಾರಣಿ ಡಾ. ಮೋಹನ್ ಬಾಬು ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ (Mukesh Kumar Singh) ನಿರ್ದೇಶನದ ಈ ಚಿತ್ರ ಬಹು ತಾರಾಗಣದಿಂದ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಇದೀಗ ಮತ್ತೊಬ್ಬ ಪ್ಯಾನ್‌ ಇಂಡಿಯಾ ಸ್ಟಾರ್‌ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಪ್ರಭಾಸ್‌ ʼಕಣ್ಣಪ್ಪʼ ಚಿತ್ರದ ಭಾಗವಾಗುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಕಣ್ಣಪ್ಪ’ ಸಿನಿಮಾದ ಶೂಟಿಂಗ್​ನಲ್ಲಿ ಈಗ ಪ್ರಭಾಸ್ (Actor Prabhas) ಭಾಗಿಯಾಗಿದ್ದಾರೆ.‌ ಚಿತ್ರತಂಡ ಅವರ ಪೋಸ್ಟರ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.

‘ಕಣ್ಣಪ್ಪ’ ಸಿನಿಮಾದಲ್ಲಿ ನಟ ವಿಷ್ಣು ಮಂಚು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವ ಭಕ್ತ ಕಣ್ಣಪ್ಪನಾಗಿ ಅವರು ನಟಿಸುತ್ತಿದ್ದಾರೆ. ಇವರ ಜತೆಗೆ ಬಾಲಿವುಡ್‌ನ ಅಕ್ಷಯ್‌ ಕುಮಾರ್‌, ಬಹುಭಾಷಾ ನಟ, ಮಾಲಿವುಡ್‌ ಸ್ಟಾರ್‌ ಮೋಹನ್‌ ಲಾಲ್‌, ಮೋಹನ್‌ ಬಾಬು, ಶರತ್‌ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿ ಇದ್ದಾರೆ. ಮಾತ್ರವಲ್ಲ ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪ್ರಭಾಸ್‌ ಎಂಟ್ರಿಯಾಗಿದ್ದು ಚಿತ್ರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ

ವಿಶೇಷ ಎಂದರೆ ವಿವಿಧ ಬಾಷೆಯ ಕಲಾವಿದರು ಅಭಿನಯಿಸುತ್ತಿರುವ ʼಕಣ್ಣಪ್ಪʼ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಅದ್ಧೂರಿಯಾಗಿ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ. ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಹಿಂದೆ ಬಾಲಿವುಡ್ ನಟಿ ಕೃತಿ ಸನೂನ್‌ ಸಹೋದರಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಕೆಲವು ದಿನಗಳ ಹಿಂದೆ ಕಾಳಹಸ್ತಿಯಲ್ಲಿ ನಡೆದ ಸಿನಿಮಾದ ಮುಹೂರ್ತದಲ್ಲಿಯೂ ಭಾಗಿಯಾಗಿದ್ದರು. ಆದರೆ ಚಿತ್ರದ ಶೂಟಿಂಗ್‌ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಈಗ ಹೊರ ನಡೆದಿದ್ದಾರೆ ಎನ್ನಲಾಗಿದೆ. ಹೊಸ ನಾಯಕಿಗಾಗಿ ಸಿನಿಮಾ ತಂಡ ಹುಟುಕಾಟ ನಡೆಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Vishnu Manchu: ‘ಕಣ್ಣಪ್ಪ’ ಸಿನಿಮಾ ಶೂಟಿಂಗ್ ವೇಳೆ ವಿಷ್ಣು ಮಂಚುಗೆ ಗಂಭೀರ ಗಾಯ

ಕನ್ನಡದಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌

ಶಿವಭಕ್ತ ಕಣ್ಣಪ್ಪ ಕುರಿತಾದ ಚಿತ್ರ ಕನ್ನಡದಲ್ಲಿ ಹಲವು ವರ್ಷಗಳ ಹಿಂದೆಯೇ ತಯಾರಾಗಿತ್ತು. ಡಾ. ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಎಚ್‌.ಎಲ್‌.ಎನ್‌.ಸಿಂಹ ನಿರ್ದೇಶನದ ಈ ಸಿನಿಮಾ 1954ರಲ್ಲಿ ತೆರೆ ಕಂಡಿತ್ತು. ಡಾ.ರಾಜ್‌ಕುಮಾರ್‌ ಬೇಡರ ಕಣ್ಣಪ್ಪ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಚಿತ್ರಪ್ರೇಮಿಗಳು ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಇದೀಗ ವಿಷ್ಣು ಮಂಚು ಕಣ್ಣಪ್ಪನಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದಕ್ಕೆ ತಕ್ಕಂತೆ ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ಗಳು ಗಮನ ಸೆಳೆದಿವೆ.

Continue Reading

ಮಾಲಿವುಡ್

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Aavesham Releases On OTT: ಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

VISTARANEWS.COM


on

Aavesham Releases On OTT Fahadh Faasil Hit Malayalam Film
Koo

ಬೆಂಗಳೂರು: ಫಹಾದ್ ಫಾಸಿಲ್ (Fahadh Faasil) ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ʻಆವೇಶಂʼ ಒಟಿಟಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ʻಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಇದೀಗ ಅಮೆಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಡಬ್ಬಿಂಗ್ ಆವೃತ್ತಿಗಳ ಕುರಿತು ಇನ್ನೂ ಯಾವುದೇ ಅಪಡೇಟ್‌ ಬಂದಿಲ್ಲ. ಫ್ರಂಟ್ ರೋ ಅವರ ಟ್ವೀಟ್ ಪ್ರಕಾರ, ಆವೇಶಂನ ಡಿಜಿಟಲ್ ಹಕ್ಕುಗಳು 35 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ ದುಲ್ಕರ್ ಸಲ್ಮಾನ್ ಅವರ ʻಕಿಂಗ್ ಆಫ್ ಕೋಥಾʼದ ದಾಖಲೆಯನ್ನು ಮುರಿದಿದೆ ಎಂದು ವರದಿಯಾಗಿದೆ. ʻಕಿಂಗ್ ಆಫ್ ಕೋಥಾʼ 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.

ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್‌ ಫಾಸಿಲ್‌.

ಸಂಪೂರ್ಣ ಬಿಳಿ ಉಡುಗೆಯಲ್ಲಿ, ಚಿನ್ನದ ಸರಗಳೊಂದಿಗೆ, ದಪ್ಪ ಮೀಸೆಯನ್ನು ಹೊಂದಿರುವ ಫಹಾದ್‌ ಪಾತ್ರ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಫಹಾದ್ ಅವರು ರಂಗಾ ಪಾತ್ರವನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಈ ಮುಂಚೆ ಹೇಳಿಕೊಂಡಿದ್ದರು. ʻʻನಾನು ಈ ಮೊದಲು ಅಂತಹ ಪಾತ್ರಗಳನ್ನು ಮಾಡಿಲ್ಲ. ಆದ್ದರಿಂದ ಈ ಕಥೆ ನನ್ನ ಬಳಿಗೆ ಬಂದಾಗ, ನಾನು ಹೌದು ಎಂದು ಹೇಳಿದೆ. ಈ ಹಿಂದೆ ನಾನು ಮಾಡಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಇತ್ತು. ಅಲ್ಲದೆ, ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆ ಮಾತನಾಡಬೇಕು ಎಂದು ಮನೋರಮಾ ಹೇಳಿದ್ದರುʼʼ ಎಂದರು. ಇವು 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

ಇನ್ನು ಫಹಾದ್‌ ಫಾಸಿಲ್‌ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್‌ ಇಂಡಿಯಾ ಚಿತ್ರ ‌ʼಪುಷ್ಪ 2: ದಿ ರೂಲ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್‌ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರದಲ್ಲಿ ಫಹಾದ್‌ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌- ಅಮಿತಾಭ್‌ ಬಚ್ಚನ್‌ ಅವರ ʼವೆಟ್ಟೈಯನ್‌ʼ ಸಿನಿಮಾದಲ್ಲಿ ಫಹಾದ್‌ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್‌ ಮಲಯಾಳಂನ ʼಆವೇಶಮ್‌ʼ, ʼಪಾಟ್ಟುʼ, ʼಹನುಮಾನ್‌ ಗೇರ್‌ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

ಟಾಲಿವುಡ್

Rashmika Mandanna: ಸಲ್ಮಾನ್ ಖಾನ್ ಜತೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ರೊಮ್ಯಾನ್ಸ್‌!

Rashmika Mandanna: ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು ಸಲ್ಮಾನ್ ಖಾನ್ (Salman Khan).ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

VISTARANEWS.COM


on

Rashmika Mandanna Signed Salman Khan Sikandar
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಮೇ.8ರಂದು ಇನ್‌ಸ್ಟಾ ಮೂಲಕ ಖಚಿತಪಡಿಸಿದ್ದಾರೆ. “ನೀವು ಬಹಳ ಸಮಯದಿಂದ ಮುಂದಿನ ಅಪ್‌ಡೇಟ್‌ ಬಗ್ಗೆ ನನ್ನನ್ನು ಕೇಳುತ್ತಿದ್ದೀರಿ. ಇದೀಗ ನಿಮ್ಮ ಮುಂದೆ. ʻಸಿಕಂದರ್‌ ಸಿನಿಮಾ ಭಾಗವಾಗಿರುವುದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು ಗೌರವಿಸುತ್ತೇನೆʼʼಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ ರಶ್ಮಿಕಾ. ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಈದ್ ದಿನವೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದರು ಸಲ್ಮಾನ್ ಖಾನ್ (Salman Khan).ಎಆರ್ ಮುರುಗದಾಸ್ (AR Murugadoss) ಜತೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದು, ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದರು. ಮಾರ್ಚ್ 12ರಂದು, ಸಲ್ಮಾನ್ ಖಾನ್ ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಪ್ರತಿಭಾವಂತರಾದ ಎಆರ್ ಮುರುಗದಾಸ್ ನನ್ನ ಸ್ನೇಹಿತ, ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವಾಗಿದೆ. ಈ ಸಹಯೋಗ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು.

ಸೊನಾಕ್ಷಿ ಸಿನ್ಹಾ ನಟನೆಯ ‘ಅಕಿರಾ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಸ್ಟಾಲಿನ್’ ಚಿತ್ರವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು.

ʻಸಿಖಂದರ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ. 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಕೊನೆಯದಾಗಿ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading

ಮಾಲಿವುಡ್

Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan dies ಸಂಗೀತ್ ಶಿವನ್ ಮೂಲತಃ ಕೇರಳದ ತಿರುವನಂತಪುರಂನವರು. 1989 ರಲ್ಲಿ ಆಮೀರ್ ಖಾನ್-ನ ಅಭಿನಯದ ರಾಖ್‌ಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು.

VISTARANEWS.COM


on

Sangeeth Sivan dies Riteish Deshmukh Tusshar Kapoor pay tribute
Koo

ಬೆಂಗಳೂರು: ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ (Sangeeth Sivan dies) ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸಂಗೀತ್ ಶಿವನ್ ಅವರಿಗೆ 61 ವರ್ಷ ವಯಸ್ಸಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಸಂಗೀತ್ ಶಿವನ್ ಮೂಲತಃ ಕೇರಳದ ತಿರುವನಂತಪುರಂನವರು. 1989 ರಲ್ಲಿ ಆಮೀರ್ ಖಾನ್ ಅಭಿನಯದ ರಾಖ್‌ಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1990ರಲ್ಲಿ ಮಲಯಾಳಂನ ‘ವ್ಯೂಹಂ’ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದರು. ಮೋಹನ್​ಲಾಲ್​ ನಟನೆಯ ‘ಯೋಧ’ ಸಿನಿಮಾಗೆ ನಿರ್ದೇಶನ ಮಾಡಿ ಅವರು ಗುರುತಿಸಿಕೊಂಡರು.

ʻಜೋರ್ʼ, ʻಕ್ಯಾ ಕೂಲ್ ಹೈ ಹಮ್ʼ, ʻಅಪ್ನಾ ಸಪ್ನಾ ಮನಿ ಮನಿʼ ಮತ್ತು ʻಯಮ್ಲಾ ಪಗ್ಲಾ ದೀವಾನಾ 2ʼ ಮುಂತಾದ ಹಿಂದಿ ಚಲನಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಮಲಯಾಳಂನ ‘ರೋಮಾಂಚಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಅವರು ಮುಂದಾಗಿದ್ದರು. ಆ ಕೆಲಸ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರು ನಿಧನರಾಗಿರಾಗಿದ್ದಾರೆ.

ರಿತೇಶ್ ದೇಶ್‌ಮುಖ್ ಅವರು ಎಕ್ಸ್‌ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. “ಸಂಗೀತ್ ಶಿವನ್ ಸರ್ ಇನ್ನಿಲ್ಲ ಎಂದು ಗೊತ್ತಾದಾಗ ತೀವ್ರ ದುಃಖ ಮತ್ತು ಆಘಾತವಾಯಿತು.ಮೃದು ಮಾತು, ಸೌಮ್ಯ ಮತ್ತು ಅದ್ಭುತ ಮನುಷ್ಯ.ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ, ಪತ್ನಿ, ಮಕ್ಕಳು, ಸಹೋದರರಿಗೆ ನನ್ನ ಸಂತಾಪʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

ಸುನೀಲ್​ ಶೆಟ್ಟಿ, ರಿತೇಶ್​ ದೇಶಮುಖ್​, ಜಾಕಿ ಶ್ರಾಫ್​, ಸೆಲಿನಾ ಜೇಟ್ಲಿ, ಚಂಕಿ ಪಾಂಡೆ, ರಾಜ್​ಪಾಲ್​ ಯಾದವ್​, ತುಷಾರ್​ ಕಪೂರ್​, ಇಶಾ ಕೊಪ್ಪಿಕರ್​, ನೇಹಾ ದೂಪಿಯಾ, ಅನುಪಮ್​ ಖೇರ್​ ಮುಂತಾದ ಸೆಲೆಬ್ರಿಟಿಗಳ ಜೊತೆ ಸಂಗೀತ್​ ಶಿವನ್​ ಕೆಲಸ ಮಾಡಿದ್ದರು.

Continue Reading
Advertisement
Dietary Guidelines
Latest2 mins ago

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Lover refused to marriage Young woman committed suicide in kalaburagi
ಕಲಬುರಗಿ6 mins ago

Self Harming: ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

Jay Shah
ಪ್ರಮುಖ ಸುದ್ದಿ6 mins ago

Jay Shah : ”ನಾನವನಲ್ಲ, ನಾನವನಲ್ಲ”; ಶ್ರೇಯಸ್​, ಇಶಾನ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಜಯ್​ ಶಾ

Naxals K
ದೇಶ10 mins ago

Naxals Encounter: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 12 ನಕ್ಸಲರ ಹತ್ಯೆ

Veg v/s Non Veg Thali
ಆರೋಗ್ಯ14 mins ago

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

Maruti Suzuki
ಆಟೋಮೊಬೈಲ್16 mins ago

Maruti Suzuki: ಶೀಘ್ರ ರಸ್ತೆಗಿಳಿಯಲಿದೆ ಬರೋಬ್ಬರಿ 26 ಕಿ.ಮೀ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್​; ಶುರುವಾಗಿದೆ ಬುಕಿಂಗ್​

Prajwal Revanna Case
ಕರ್ನಾಟಕ24 mins ago

Prajwal Revanna Case: ರೇವಣ್ಣ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಸ್ಥಳ ಮಹಜರು

Arvind Kejriwal
ದೇಶ25 mins ago

Arvind Kejriwal: ಪ್ರಜಾಪ್ರಭುತ್ವ ಉಳಿಸಲು ಹೋರಾಟ; ಜೈಲಿಂದ ಬಿಡುಗಡೆ ಬಳಿಕ ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್!

Xiaomi Smart Phone
ಗ್ಯಾಜೆಟ್ಸ್43 mins ago

Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

Rahul Dravid
Latest53 mins ago

Rahul Dravid : ವಿಶ್ವ ಕಪ್​ ಬಳಿಕ ದ್ರಾವಿಡ್​ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ5 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ7 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ8 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ14 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ21 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ23 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ23 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌