ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಉಪೇಂದ್ರ, ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.
1995ರಲ್ಲಿ ಉಪೇಂದ್ರ ನಿರ್ದೇಶನದಲ್ಲಿ, ಶಿವರಾಜ್‌ಕುಮಾರ್ ನಟನೆಯಲ್ಲಿ ತೆರೆಕಂಡ “ಓಂ”, ಕನ್ನಡದ ಎವರ್‌ಗ್ರೀನ್ ಚಿತ್ರಗಳಲ್ಲಿ ಒಂದು.
1998ರ A ಚಲನಚಿತ್ರದಲ್ಲಿ ಶಿವಾಜಿ ಪಾತ್ರದಲ್ಲಿ ನಟಿಸುವುದರ ಮೂಲಕ ಮೊದಬಾರಿಗೆ ನಾಯಕನಟನಾಗಿ ನಟಿಸಿದರು.
2003ರ ಡಿಸೆಂಬರ್ 14ರಂದು ಪ್ರಿಯಾಂಕಾ ತ್ರಿವೇದಿ ಅವರನ್ನು ವಿವಾಹವಾದರು. ಐಶ್ವರ್ಯಾ ಮತ್ತು ಆಯುಶ್ ಎಂಬ ಮಕ್ಕಳಿದ್ದಾರೆ.
ರಾಜಕೀಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ 2018ರಲ್ಲಿ ಉತ್ತಮ ಪ್ರಜಾಕೀಯ ಪಕ್ಷವನ್ನು ಪ್ರಾರಂಭಿಸಿದರು.
ತ್ರಿಶೂಲಂ, ಬುದ್ಧಿವಂತ-2, ಕಬ್ಜಾ, UI ಉಪೇಂದ್ರ ಅವರ ಮುಂಬರಲಿರುವ ಚಲನಚಿತ್ರಗಳು.
ಇದನ್ನೂ ಓದಿ| 32ನೇ ಜನುಮ ದಿನಕ್ಕೆ ಕಾಲಿಟ್ಟ ತ್ರಿಭಾಷಾ ನಟಿ ಇಶಿತಾ ದತ್ತಾ