Site icon Vistara News

Lust Stories 2: ಹಸಿಬಿಸಿ ದೃಶ್ಯಗಳನ್ನು ಮಾತ್ರ ನೋಡೋರಿಗೆ ಟೈಮ್ ಕೂಡ ರಿವೀಲ್‌; ತಮನ್ನಾ, ಮೃಣಾಲ್ ವಿಡಿಯೊ ವೈರಲ್‌!

Timings Of Lust Stories 2

ಬೆಂಗಳೂರು: ಲಸ್ಟ್ ಸ್ಟೋರೀಸ್ 2 (Lust Stories 2) ನೆಟ್‌ಫ್ಲಿಕ್ಸ್‌ನಲ್ಲಿ ಜೂನ್‌ 29ರಿಂದ ಪ್ರೀಮಿಯರ್ ಆಗುತ್ತಿದೆ. ಸಿನಿಮಾ ನೋಡಿದ ವೀಕ್ಷಕರಿಗೆ ತಮನ್ನಾ ಹಾಗೂ ಮೃಣಾಲ್‌ ಠಾಕೂರದ್ದೇ ಮಾತು. ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಸಖತ್‌ ಟ್ರೋಲ್‌ ಮಾಡುತ್ತಿದ್ದಾರೆ. ಇದೀಗ ನೆಟ್ಟಿಗರೊಬ್ಬರು ಸಿನಿಮಾದಲ್ಲಿ ಯಾವ್ಯಾವ ಟೈಮ್‌ನಲ್ಲಿ ತಮನ್ನಾ, ಮೃಣಾಲ್ ಠಾಕೂರ್ ಹಾಗೂ ಕಾಜೊಲ್ ಈ ಮೂವರ ಹಸಿಬಿಸಿ ದೃಶ್ಯಗಳು ಬರುತ್ತವೆ ಎನ್ನುವುದನ್ನು ಲಿಸ್ಟ್ ಕೂಡ ಮಾಡಿ ಬಿಟ್ಟಿದ್ದಾರೆ. ಇದೀಗ ಈ ಟೈಮ್‌ ಕೋಡ್‌ ಸಖತ್‌ ವೈರಲ್‌ ಆಗುತ್ತಿದೆ.

ಲಸ್ಟ್‌ ಸ್ಟೋರೀಸ್‌ 2 ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿತ್ತು. ಹಲವು ಸಿನಿರಸಿಕರಿಗೆ ವಿಜಯ್‌ ವರ್ಮಾ ಮತ್ತು ತಮನ್ನಾ ಹಾಟ್‌ ದೃಶ್ಯಗಲು ಹೇಗರಲಿದೆ ಎಂಬ ಕುತೂಹಲ ಕೂಡ ಇತ್ತು. ಇದೀಗ ಸಿನಿಮಾ ಪ್ರೀಮಿಯರ್‌ ಆದ ಬಳಿಕ ತಮನ್ನಾ ಮತ್ತು ಮೃಣಾಲ್‌ದೇ ಸುದ್ದಿ. ನೆಟ್ಟಿಗರೊಬ್ಬರು ‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ಯಾವ್ಯಾವ ಟೈಮ್‌ನಲ್ಲಿ ತಮನ್ನಾ, ಮೃಣಾಲ್ ಠಾಕೂರ್ ಹಾಗೂ ಕಾಜೊಲ್ ಈ ಮೂವರ ಹಸಿಬಿಸಿ ದೃಶ್ಯಗಳು ಬರುತ್ತವೆ ಎನ್ನುವುದನ್ನು ಲಿಸ್ಟ್ ಮಾಡಿದ್ದಾರೆ. ಟೈಮ್ ಕೋಡ್ ಪೋಸ್ಟ್ ಮಾಡಿ, ರೊಮ್ಯಾಂಟಿಕ್ ಸೀನ್‌ಗಳನ್ನು ಮಾತ್ರ ನೋಡಲು ಇಚ್ಛಿಸುವವರಿಗೆ ಈ ರೀತಿ ಸಹಾಯ ಮಾಡಿದ್ದಾರೆ.

ತಮನ್ನಾ ಹಾಗೂ ವಿಜಯ್ ವರ್ಮಾ ಅವರ ಹಸಿಬಿಸಿ ದೃಶ್ಯಗಳ ಫೋಟೊಗಳು ಟ್ವೀಟ್‌ನಲ್ಲಿ ವೈರಲ್‌ ಆಗಿವೆ. ಸೀತಾ ರಾಮಂ ಮೂಲಕ ಮೃಣಾಲ್‌ಗೆ ಪ್ರೇಕ್ಷಕರು ಮನಸೋತಿದ್ದರು. ಆದರೆ, ಸಿನಿಮಾ ರಿಲೀಸ್ ಆದ ಬಳಿಕ ಮೃಣಾಲ್ ಠಾಕೂರ್ ಇನ್‌ಸ್ಟಾಗ್ರಾಂನಲ್ಲಿ ಬಿಂದಾಸ್ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಇದಕ್ಕೆ ನೆಟ್ಟಿಗರು ನೆಗೆಟಿವ್ ಕಮೆಂಟ್‌ಗಳನ್ನು ಮಾಡಿದ್ದರು. ಈಗ ‘ಲಸ್ಟ್ ಸ್ಟೋರೀಸ್ 2’ನಲ್ಲಿ ಬೆಡ್ ರೂಮ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Lust Stories 2: ಹೆಣ್ಣಿನ ʻಕಾಮ ಸಂತೃಪ್ತಿʼಯನ್ನು ಸಹಜವಾಗಿ ನೋಡಿ ಎಂದ ನಟಿ ಕಾಜೋಲ್‌

‘ಲಸ್ಟ್ ಸ್ಟೋರೀಸ್ 2’ ಸಿನಿಮಾವನ್ನು ನಾಲ್ವರು ನಿರ್ದೇಶನ ಮಾಡಿದ್ದಾರೆ. ಆರ್ ಬಾಲ್ಕಿ, ಸುಜಯ್ ಘೋಷ್, ಅಮಿತ್ ಶರ್ಮಾ ಹಾಗೂ ಕೊಂಕಣ್ ಸೇನ್ ಶರ್ಮಾ. ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಫಿಲ್ಮ್ಸ್ ಮತ್ತು ಆಶಿ ದುವಾ ಅವರ ಫ್ಲೈಯಿಂಗ್ ಯುನಿಕಾರ್ನ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಅಮೃತಾ ಸುಭಾಷ್, ನೀನಾ ಗುಪ್ತಾ, ಅಂಗದ್ ಬೇಡಿ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ.

Exit mobile version