ಬೆಂಗಳೂರು : ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಸಿನಿಮಾ (Titanic Film) ಬಿಡುಗಡೆಯಾಗಿ 25 ವರ್ಷಗಳಾಗಿವೆ. ಇದೀಗ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಫೆಬ್ರವರಿ 10ರಂದು ಟೈಟಾನಿಕ್ 4ಕೆ 3ಡಿ ತಂತ್ರಜ್ಞಾನದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.
ಇದೀಗ ಚಿತ್ರದ 4ಕೆ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಲಿಯೊನಾರ್ಡೊ ಡಿ’ಕಾಪ್ರಿಯೊ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ. 1997ರಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿ ಸಿನಿಮಾರಂಗದಲ್ಲೇ ಪ್ರಶಂಸೆಗೆ ಪಾತ್ರವಾಗಿತ್ತು. ಜಾಕ್ ಹಾಗೂ ರೋಸ್ ನಡುವೆ ನಡೆಯುವ ಪ್ರೇಮ, ರೋಸ್ ಪೋಷಕರ ವಿರುದ್ಧ ಕೊನೆಗೆ ನಡೆಯುವ ಹಡಗಿನ ದುರಂತ ಹೀಗೆ ಕಥೆಯನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದರು.
ಇದನ್ನೂ ಓದಿ | ಪ್ಯಾರಿಸ್ ಏರ್ಪೋರ್ಟ್ನಲ್ಲಿಯೇ 18ವರ್ಷ ಜೀವಿಸಿದ್ದ ಇರಾನ್ ಪ್ರಜೆ ಅಲ್ಲೇ ಸಾವು; ಹಾಲಿವುಡ್ ಸಿನಿಮಾಕ್ಕೂ ಸ್ಫೂರ್ತಿಯಾಗಿದ್ದರು!
ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಹನ್ನೊಂದು ಆಸ್ಕರ್ಗಳನ್ನು ಪಡೆದುಕೊಂಡ ಚಿತ್ರ ಇದಾಗಿದೆ. ಜೇಮ್ಸ್ ಕ್ಯಾಮರೂನ್ ಅವರ “ಅವತಾರ್” ಸಿನಿಮಾಗೂ ಮುಂಚೆ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿತ್ತು.
ಇದನ್ನೂ ಓದಿ | Avatar 3 | ಅವತಾರ್-2 ಸಕ್ಸೆಸ್ ಬೆನ್ನಲ್ಲೇ ಅವತಾರ್-3 ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮರೂನ್!