ಪ್ಯಾರಿಸ್​ ಏರ್​ಪೋರ್ಟ್​ನಲ್ಲಿಯೇ 18ವರ್ಷ ಜೀವಿಸಿದ್ದ ಇರಾನ್​ ಪ್ರಜೆ ಅಲ್ಲೇ ಸಾವು; ಹಾಲಿವುಡ್​ ಸಿನಿಮಾಕ್ಕೂ ಸ್ಫೂರ್ತಿಯಾಗಿದ್ದರು! - Vistara News

ವಿದೇಶ

ಪ್ಯಾರಿಸ್​ ಏರ್​ಪೋರ್ಟ್​ನಲ್ಲಿಯೇ 18ವರ್ಷ ಜೀವಿಸಿದ್ದ ಇರಾನ್​ ಪ್ರಜೆ ಅಲ್ಲೇ ಸಾವು; ಹಾಲಿವುಡ್​ ಸಿನಿಮಾಕ್ಕೂ ಸ್ಫೂರ್ತಿಯಾಗಿದ್ದರು!

ಮೆಹ್ರಾನ್ ಅವರು​ ಏರ್​ಪೋರ್ಟ್​ಗೆ ಬಂದು ಉಳಿದಿದ್ದೇ ಒಂದು ರೋಚಕ ಕಥೆ. ಇರಾನ್​​ನಿಂದ ಗಡೀಪಾರಾಗಿ ಇಂಗ್ಲೆಂಡ್​ಗೆ ಹೋಗಿ, ಅಲ್ಲಿಯೂ ಇರಲಾಗದೆ, ಪ್ಯಾರಿಸ್​ ಏರ್​ಪೋರ್ಟ್​ಗೆ ಬಂದಿದ್ದರು.

VISTARANEWS.COM


on

Iranian Man Who lives 18 Years in Paris airport dies
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್​​ನ ಚಾರ್ಲ್ಸ್ ಡಿ ಗೌಲ್ ಏರ್​ಪೋರ್ಟ್​​ನಲ್ಲೇ 18 ವರ್ಷಗಳ ಕಾಲ ವಾಸವಾಗಿದ್ದು, ‘ದಿ ಟರ್ಮಿನಲ್​’ ಎಂಬ ಹಾಲಿವುಡ್​ ಸಿನಿಮಾ ನಿರ್ಮಾಣಕ್ಕೆ ಸ್ಪೂರ್ತಿಯಾಗಿದ್ದ ಇರಾನ್​ ಮೂಲದ ಮೆಹ್ರಾನ್ ಕರಿಮಿ ನಾಸ್ಸೆರಿ (77) ನಿಧನರಾಗಿದ್ದಾರೆ. ಮೂಲತಃ ಇರಾನ್​ನವಾದ ನಾಸ್ಸೆರಿ 1988ರಿಂದ 2006ರವರೆಗೆ ಚಾರ್ಲ್ಸ್​ ಡಿ ಗೌಲ್​ ಏರ್​ಪೋರ್ಟ್​​ನ ಟರ್ಮಿನಲ್​ 1ರಲ್ಲಿಯೇ ವಾಸವಾಗಿದ್ದರು. ಅಲ್ಲೇ ಕುರ್ಚಿಗಳ ಮೇಲೆ ಕುಳಿತು, ಬೆಂಚ್​ ಮೇಲೆ ಮಲಗುತ್ತಿದ್ದರು. ಪುಸ್ತಕ ಓದುತ್ತಿದ್ದರು, ಅದರಲ್ಲೂ ಎಕನಾಮಿಕ್ಸ್​ ಪುಸ್ತಕಗಳನ್ನೇ ಅಧ್ಯಯನ ಮಾಡುತ್ತಿದ್ದರು. ಇದೇ ಕಾರಣಕ್ಕೆ ಜಗತ್ತಿನ ಗಮನಸೆಳೆದಿದ್ದರು. ಅದೇ ಹೊತ್ತಲ್ಲಿ ಅಮೆರಿಕದ ಖ್ಯಾತ ಚಿತ್ರನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಾಸ್ಸೆರಿ ಕತೆಯನ್ನಾಧರಿಸಿ ‘ದಿ ಟರ್ಮಿನಲ್​’ ಎಂಬ ಸಿನಿಮಾವನ್ನೇ ಮಾಡಿದ್ದರು. 2004ರಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕ ಮೆಹ್ರಾನ್ ಕರಿಮಿ ನಾಸ್ಸೆರಿ ಇನ್ನಷ್ಟು ಫೇಮಸ್​ ಆಗಿದ್ದರು.

2006ರಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬಳಿಕ ಸ್ವಲ್ಪ ವರ್ಷ ಅವರು ನರ್ಸಿಂಗ್​ ಹೋಮ್​​ನಲ್ಲಿ ಇದ್ದರು. ಆದರೂ ಈ ಏರ್​ಪೋರ್ಟ್​ ನಂಟು ಬಿಟ್ಟಿರಲಿಲ್ಲ. ಶನಿವಾರ (ನ.12) ಕೂಡ ಮೆಹ್ರಾನ್​ ಕರಿಮಿ ಅವರು ಚಾರ್ಲ್ಸ್ ಡಿ ಗೌಲ್ ಏರ್​ಪೋರ್ಟ್​ನ ಟರ್ಮಿನಲ್​ 2ಎಫ್​ನಲ್ಲಿ ಇದ್ದರು. ಮಧ್ಯಾಹ್ನ ಹೊತ್ತಿಗೆ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಏರ್​ಪೋರ್ಟ್​ ವೈದ್ಯಕೀಯ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿತು. ಪೊಲೀಸರು ಅಲ್ಲಿಗೆ ಧಾವಿಸಿದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮೆಹ್ರಾನ್​ ಬದುಕುಳಿಯಲಿಲ್ಲ ಎಂದು ಹೇಳಲಾಗಿದೆ.

ಅಂದಹಾಗೇ, ಮೆಹ್ರಾನ್​ ಏರ್​ಪೋರ್ಟ್​ಗೆ ಬಂದು ಉಳಿದಿದ್ದೇ ಒಂದು ರೋಚಕ ಕಥೆ. 1977ರ ದಶಕದಲ್ಲಿ ಇರಾನ್​ ಆಡಳಿತದ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಮೆಹ್ರಾನ್​ ಕೂಡ ಭಾಗವಹಿಸಿದ್ದರು. ಮುಂಚೂಣಿಯಲ್ಲಿದ್ದ ಇವರನ್ನು ಸರ್ಕಾರ ಗಡೀಪಾರು ಮಾಡಿತ್ತು. ಇವರ ತಾಯಿ ಮೂಲತಃ ಸ್ಕಾಟ್ಲ್ಯಾಂಡ್​ನವರೇ ಆಗಿದ್ದರಿಂದ, ಇಂಗ್ಲೆಂಡ್​ಗೆ ಹೋಗಿ ನೆಲೆಸಲು ಮೆಹ್ರಾನ್ ನಿರ್ಧರಿಸಿ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು, ಹೊರಟಿದ್ದರು.

ಆದರೆ ಇಂಗ್ಲೆಂಡ್​ನಲ್ಲಿ ನೆಲೆಸಲು ಅವರು ಪಡೆದಿದ್ದ ದಾಖಲೆಗಳು ಇದ್ದ ಬ್ರೀಫ್​ಕೇಸ್ ಮಾರ್ಗಮಧ್ಯೆ ಕಳವಾಗಿತ್ತು. ಹಾಗಾಗಿ ಇಂಗ್ಲೆಂಡ್​ ಏರ್​ಪೋರ್ಟ್​ನಲ್ಲಿ ಇಳಿದರೂ, ಅವರಿಗೆ ಅಲ್ಲಿ ಉಳಿದುಕೊಳ್ಳುವ ಅವಕಾಶ ನಿರಾಕರಿಸಲಾಯಿತು. ಮತ್ತೆ ಅವರು ವಾಪಸ್​ ಫ್ರಾನ್ಸ್​ನ ಪ್ಯಾರಿಸ್​ ಏರ್​ಪೋರ್ಟ್​ಗೆ ಬಂದರು. ಇಲ್ಲಿ ಕಾನೂನು ಬದ್ಧವಾಗಿ ಏರ್​ಪೋರ್ಟ್​ ಪ್ರವೇಶ ಮಾಡಿದ್ದರೂ, ಒಬ್ಬ ನಿರಾಶ್ರಿತನಾಗಿ ಫ್ರಾನ್ಸ್​ನಲ್ಲಿ ವಾಸವಾಗಿರಲು ಅಗತ್ಯ ದಾಖಲೆ ಇರಲಿಲ್ಲ. ವಾಸಪತ್ರ ಪಡೆಯಲು ಅಗತ್ಯವಿರುವ ದಾಖಲೆಗಳೂ ಇರಲಿಲ್ಲ. ಹಾಗಾಗಿ ಏರ್​​ಪೋರ್ಟ್​ನಲ್ಲಿಯೇ ನೆಲೆಸಿದ್ದರು. ಅಲ್ಲಿನವರಿಗೂ ಮೆಹ್ರಾನ್ ಕರಿಮಿ ನಾಸ್ಸೆರಿ ಆಪ್ತರಾಗಿದ್ದರು. ಏರ್​ಪೋರ್ಟ್​ ನಿವಾಸಿಯಾಗಿಯೇ ಖ್ಯಾತರಾಗಿದ್ದರು.

ಇದನ್ನೂ ಓದಿ: Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Viral News: ಗಾಜಾದಲ್ಲಿ ಆಹಾರ ಸಿಗದೆ ನಾಣ್ಯ, ಕಲ್ಲು, ಬ್ಯಾಟರಿ ತಿನ್ನುತ್ತಿರುವ ಮಕ್ಕಳು!

ಆಹಾರದ ಕೊರತೆಯಿಂದ ಗಾಜಾ ಪಟ್ಟಿಯಲ್ಲಿ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಒಮಾನಿ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯನ್ನು ನೀಡಿದ್ದಾರೆ. ಇದರ ವಿಡಿಯೋ ಭಾರೀ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಗಾಜಾ ಪಟ್ಟಿಯಲ್ಲಿ (Gaza strip) ಆಹಾರದ ಕೊರತೆಯಿಂದ ತೀವ್ರ ಹಸಿವಿನಿಂದ ಬಳಲುತ್ತಿರುವ ಮಕ್ಕಳು ರಸ್ತೆಯಲ್ಲಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದಾರೆ ಎಂದು ಪ್ಯಾಲೆಸ್ಟೀನಿಯಾದವರಿಗೆ (Palestinians) ಚಿಕಿತ್ಸೆ ನೀಡಲು ಗಾಜಾದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಯಂಸೇವಕರಾಗಿ ಕೆಲಸ ಮಾಡುವ ಒಮಾನಿ (omani) ವೈದ್ಯ ಖಲೀದ್ ಅಲ್-ಶಮೌಸಿ (Khaled Al-Shamousi) ಅವರು ಸಾಮಾಜಿಕ ಜಾಲತಾಣವಾದ (Viral News) ಎಕ್ಸ್ ನಲ್ಲಿ (x) ಹೇಳಿಕೊಂಡಿದ್ದಾರೆ.

ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿನ ಅವರ ಖಾತೆಯಲ್ಲಿ ಡಾ. ಖಲೀದ್ ಅಲ್-ಶಮೌಸಿ ಅವರು, ಒಂದು ಮಗು ಲೋಹದ ತುಂಡನ್ನು ನುಂಗಿತ್ತು. ಅದು ಅನ್ನನಾಳದಲ್ಲಿ ಸಿಲುಕಿಕೊಂಡಿತ್ತು ಎಂದು ವಿವರಿಸಿದ್ದಾರೆ.

ಅವರು ಪರೀಕ್ಷಿಸಿದ ಚಿಕ್ಕ ಹುಡುಗಿಯ ಎದೆಯ ಎಕ್ಸ್-ರೇ ಅನ್ನು ತೋರಿಸಿರುವ ಅವರು ಗಾಜಾದ ಮಕ್ಕಳು ತೀವ್ರ ಹಸಿವಿನಿಂದ ನಾಣ್ಯಗಳು, ಬೆಣಚುಕಲ್ಲುಗಳು ಮತ್ತು ಸಣ್ಣ ಬ್ಯಾಟರಿಗಳನ್ನು ತಿನ್ನುತ್ತಿದ್ದಾರೆ. ಅವುಗಳಲ್ಲಿ ಒಬ್ಬಾಕೆ 8 ವರ್ಷದ ಬಾಲಕಿ. ಅವಳು ಲೋಹದ ತುಂಡನ್ನು ನುಂಗಿದಳು ಮತ್ತು ಅದು ಅವಳ ಅನ್ನನಾಳದಲ್ಲಿ ಸಿಲುಕಿಕೊಂಡಿತು ಎಂದು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಅವರು ಮಗುವಿನ ಮೇಲೆ ಸೂಕ್ಷ್ಮವಾದ ಆಪರೇಷನ್ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಲೋಹದ ತುಂಡನ್ನು ತೆಗೆದುಹಾಕಿದ ಬಳಿಕ ವೈದ್ಯಕೀಯ ಸಿಬ್ಬಂದಿಯ ಚಪ್ಪಾಳೆಗಳನ್ನು ಕೇಳಿದಾಗ ಶಮೌಸಿ ತನ್ನ ಬಾಯಿಯ ಮೂಲಕ ಮಗುವಿನ ಕರುಳಿನಿಂದ ಸಣ್ಣ ಬ್ಯಾಟರಿಯನ್ನು ತೆಗೆದುಹಾಕುತ್ತಿರುವಂತೆ ಕಾಣಿಸಿಕೊಂಡರು.

ಬಳಿಕ ಈ ಕುರಿತು ಎಕ್ಸ್ ನಲ್ಲಿ ಹೇಳಿರುವ ಅವರು, ತೀವ್ರವಾದ ಹಸಿವು,ಆಹಾರ ಪದಾರ್ಥಗಳ ಸರಬರಾಜುಗಳ ಕೊರತೆ ಮತ್ತು ಸುತ್ತಮುತ್ತಲಿನ ದೇಶಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಬ್ಯಾಟರಿಗಳನ್ನು ಮಿಠಾಯಿಗಳೆಂದು ಭಾವಿಸಿ ನುಂಗಿದರು. ಇಲ್ಲಿ ನಾವು ಗಾಜಾದಲ್ಲಿ ಮಗು ನುಂಗಿದ ಬ್ಯಾಟರಿಯನ್ನು ಹೊರತೆಗೆದಿದ್ದೇವೆ ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲಿ ಅನೇಕರು ಈ ಗೊಂದಲದ ದೃಶ್ಯಗಳ ಬಗ್ಗೆ ತಮ್ಮ ಕೋಪ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆಹಾರ ಪೂರೈಕೆ ಇಲ್ಲ

ಕಳೆದ ವಾರದಿಂದ ದಕ್ಷಿಣ ಗಾಜಾದ ಎರಡು ಪ್ರಮುಖ ಪ್ರದೇಶಗಳಿಗೆ ಯಾವುದೇ ಆಹಾರ ಪೂರೈಕೆಯಾಗಿಲ್ಲ. ಗಾಜಾದಲ್ಲಿ ಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯಾದವರು ಹಸಿವಿನಿಂದ ಕಂಗೆಟ್ಟಿದ್ದಾರೆ. ಹಸಿವಿನ ದುರಂತದ ಮಟ್ಟವನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ ಮತ್ತು ಯುಎನ್ ಪ್ರಕಾರ ಉತ್ತರದಲ್ಲಿ “ಪೂರ್ಣ ಕ್ಷಾಮ” ಉಂಟಾಗಿದೆ ಎನ್ನಲಾಗಿದೆ.

ದಕ್ಷಿಣ ಮತ್ತು ಉತ್ತರ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಸ್ಥಳಾಂತರಗೊಂಡಿದ್ದಾರೆ. ಕಳೆದ ವಾರದಲ್ಲಿ ಸುಮಾರು 4,50,000 ಪ್ಯಾಲೆಸ್ಟೀನಿಯನ್ನರನ್ನು ಗಾಜಾದ ದಕ್ಷಿಣದಲ್ಲಿರುವ ರಫಾದಿಂದ ಹೊರಹಾಕಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇದನ್ನೂ ಓದಿ: Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

ಇಸ್ರೇಲ್ ನಗರಕ್ಕೆ ತಳ್ಳುವ ಮೊದಲು ರಫಾದಲ್ಲಿ ಸುಮಾರು 1.3 ಮಿಲಿಯನ್ ಜನರು ಆಶ್ರಯ ಪಡೆದಿದ್ದರು. ಇದು ಕೊನೆಯ ಹಮಾಸ್ ಭದ್ರಕೋಟೆ ಎಂದು ಇಸ್ರೇಲ್ ಹೇಳುತ್ತದೆ.

ಗಾಜಾದಲ್ಲಿ ಏಳು ತಿಂಗಳ ಇಸ್ರೇಲಿ ಬಾಂಬ್ ದಾಳಿ ಮತ್ತು ನೆಲದ ಕಾರ್ಯಾಚರಣೆಗಳು 35,000 ಕ್ಕೂ ಹೆಚ್ಚು ಜನರನ್ನು ಕೊಂದಿವೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ವಿದೇಶ

America: ಶ್ವೇತಭವನದಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ..ವಿಡಿಯೋ ನೋಡಿ

America:ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೊಹಮ್ಮದ್ ಇಕ್ಬಾಲ್ ಬರೆದ ದೇಶಭಕ್ತಿ ಗೀತೆಯನ್ನು ವಾರ್ಷಿಕ ಕಾರ್ಯಕ್ರಮಕ್ಕೆ ಅಧ್ಯಕ್ಷರಿಂದ ಆಹ್ವಾನಿಸಲ್ಪಟ್ಟ ಭಾರತೀಯ ಅಮೆರಿಕನ್ನರ ಕೋರಿಕೆಯ ಮೇರೆಗೆ ಶ್ವೇತಭವನದ ಮೆರೈನ್ ಬ್ಯಾಂಡ್ ಎರಡು ಬಾರಿ ನುಡಿಸಿತು. ಇದೊಂದು ಹೆಮ್ಮೆಯ ವಿಚಾರವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವು ಭಾರತೀಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

America
Koo

ವಾಷಿಂಗ್ಟನ್‌: ಅಮೆರಿಕ(America)ದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತದ ದೇಶಭಕ್ತಿಗೀತೆ ಸಾರಾ ಜಹಾನ್‌ ಸೇ ಅಚ್ಛಾ ಹಾಡು ಮೊಳಗಿದೆ. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ (AANHPI) ಪಾರಂಪರ್ಯ ಮಾಸಾಚರಣೆ(Heritage Month) ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden) ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್‌(Kamala Harris) ಭಾಗಿಯಾಗಿದ್ದರು. ಈ ವೇಳೆ ಶ್ವೇತಭವನದ ಮೆರೈನ್ ಬ್ಯಾಂಡ್ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ(Sare Jahan Se Achha Hindustan Hamara) ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೊಹಮ್ಮದ್ ಇಕ್ಬಾಲ್ ಬರೆದ ದೇಶಭಕ್ತಿ ಗೀತೆಯನ್ನು ವಾರ್ಷಿಕ ಕಾರ್ಯಕ್ರಮಕ್ಕೆ ಅಧ್ಯಕ್ಷರಿಂದ ಆಹ್ವಾನಿಸಲ್ಪಟ್ಟ ಭಾರತೀಯ ಅಮೆರಿಕನ್ನರ ಕೋರಿಕೆಯ ಮೇರೆಗೆ ಶ್ವೇತಭವನದ ಮೆರೈನ್ ಬ್ಯಾಂಡ್ ಎರಡು ಬಾರಿ ನುಡಿಸಿತು. ಇದೊಂದು ಹೆಮ್ಮೆಯ ವಿಚಾರವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವು ಭಾರತೀಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದ ರೋಸ್‌ ಗಾರ್ಡನ್‌ ಪ್ರದೇಶದಲ್ಲಿ AANHPI ಪಾರಂಪರಿಕ ಮಾಸಾಚರಣೆಯನ್ನು ಬಹಳ ಅದ್ಭುತವಾಗಿ ಆಚರಣೆ ಮಾಡಲಾಗಿತ್ತು. ಅತ್ಯುತ್ತಮ ಭಾಗವೆಂದರೆ, ನಾನು ಶ್ವೇತಭವನಕ್ಕೆ ಕಾಲಿಟ್ಟಾಗ, ಸಂಗೀತಗಾರರು ನನ್ನನ್ನು ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ನುಡಿಸುತ್ತಾ ಸ್ವಾಗತಿಸಿದರು. ಇಡೀ ವಿಶ್ವಕ್ಕಿಂತ ಉತ್ತಮವಾದುದು ನಮ್ಮ ಹಿಂದೂಸ್ತಾನ್” ಎಂದು ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ರೋಸ್ ಗಾರ್ಡನ್ ಸ್ವಾಗತದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿ ಶ್ವೇತಭವನದಲ್ಲಿ ಜನಪ್ರಿಯ ಭಾರತೀಯ ದೇಶಭಕ್ತಿ ಗೀತೆಯನ್ನು ನುಡಿಸಲಾಗಿದೆ. ಕಳೆದ ವರ್ಷ ಜೂನ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಯ ಸಮಯದಲ್ಲಿ ದೇಶಭಕ್ತಿಗೀತೆಯನ್ನು ಹಾಡಲಾಗಿತ್ತು.

ಇದನ್ನೂ ಓದಿ:Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

ಇನ್ನು ಅಜಯ್‌ ಜೈನ್‌ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಕೂಡ ಮಾಡಿದ್ದು, ಶ್ವೇತಭವನದಲ್ಲಿ ಜೋ ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ ಇದ್ದ ಕಾರ್ಯಕ್ರಮದಲ್ಲಿ ಭಾರತೀಯ ದೇಶಭಕ್ತಿಗೀತೆ ಸಾರಾ ಜಹಾನ್‌ ಸೇ ಅಚ್ಛಾ ಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ದೇಶೀಯ ಆಹಾರವಾದ ಪಾನಿಪುರಿ ಮತ್ತು ಖೋಯಾಗಳನ್ನು ಸರ್ವ್‌ ಮಾಡಲಾಯಿತು. ಭಾರತ ಮತ್ತು ಅಮೆರಿಕದ ನಂಟು ಭದ್ರವಾಗಿದೆ ಎಂದು ಹೇಳಿದರು.

Continue Reading

ವಿದೇಶ

US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

US sanction: ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಇನ್ನೂ ಮುಂದುವರೆಯಲಿದೆ. ಇದು ಭಾರತಕ್ಕೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದೆ. ಕೆಲವು ದಿನಗಳ ಹಿಂದೆ ಇರಾನ್‌ ಜೊತೆ ವ್ಯಾಪಾರ ಸಂಬಂದ ಹೊಂದಿದ್ದ ಸಂಸ್ಥೆಗಳು, ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ಹೇಳಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಹೀಗಾಗಿ ಇರಾನ್‌ ಜೊತೆಗೆ ಸಂಬಂಧ ಬೆಳೆಸಿ ನಿರ್ಬಂಧದ ರಿಸ್ಕ್‌ ಅನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅಮೆರಿಕ ಹೇಳಿದೆ.

VISTARANEWS.COM


on

US Sanction
Koo

ವಾಷಿಂಗ್ಟನ್‌: ಇರಾನ್‌(Iran) ಜೊತೆಗೆ ಭಾರತ ಚಬಾಹರ್‌ ಬಂದರು(Chabahar port) ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಅಮೆರಿಕ ನಿರ್ಬಂಧ(US sanction) ಹೇರುವ ಎಚ್ಚರಿಕೆ ನೀಡಿದೆ. ಇರಾನ್‌ ಜೊತೆಗೆ ವ್ಯಾಪಾರ-ವಹಿವಾಟಿಗಳನ್ನು ಮುಂದುವರೆಸಿದರೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅಮೆರಿಕ ಎಲ್ಲಾ ದೇಶಗಳಿಗೆ ಎಚ್ಚರಿಸಿದೆ. ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಉಪ ವಕ್ತಾರ ವೇದಾಂತ್‌ ಪಟೇಲ್‌(State Department Deputy Spokesperson Vedant Patel) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಚಬಾಹರ್‌ ಬಂದರಿಗೆ ಸಂಬಂಧಿಸಿದಂತೆ ಭಾರತ-ಇರಾನ್‌ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಇರಾನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನದೇ ಆದ ವಿದೇಶಾಂಗ ನೀತಿ ಅನುಸರಿಸಲು ಭಾರತ ಮುಕ್ತವಾಗಿದೆ. ಆದರೆ ಇರಾನ್‌ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದನ್ನು ಭಾರತ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಇನ್ನೂ ಮುಂದುವರೆಯಲಿದೆ. ಇದು ಭಾರತಕ್ಕೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದೆ. ಕೆಲವು ದಿನಗಳ ಹಿಂದೆ ಇರಾನ್‌ ಜೊತೆ ವ್ಯಾಪಾರ ಸಂಬಂದ ಹೊಂದಿದ್ದ ಸಂಸ್ಥೆಗಳು, ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ಹೇಳಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಹೀಗಾಗಿ ಇರಾನ್‌ ಜೊತೆಗೆ ಸಂಬಂಧ ಬೆಳೆಸಿ ನಿರ್ಬಂಧದ ರಿಸ್ಕ್‌ ಅನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅಮೆರಿಕ ಹೇಳಿದೆ.

ಎರಡು ವಾರಗಳ ಹಿಂದೆ ಇರಾನಿಯನ್‌ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಇದರಲ್ಲಿ ಭಾರತ ಮೂರು ಕಂಪನಿಗಳು(Indian based firms) ಸೇರಿದ್ದವು. ರಷ್ಯಾ-ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್‌(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಹೇಳಿತ್ತು.

ಇನ್ನು ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್‌ ಪ್ರಮುಖವಾಗಿದೆ. ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್‌ ಶಿಪ್ಪಿಂಗ್‌, ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸೀ ಆರ್ಟ್‌ ಶಿಪ್‌ ಮ್ಯಾನೇಜ್‌ಮೆಂಟ್‌(OPC) ಪ್ರೈವೆಟ್‌ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.

ಸಹಾರಾ ಥಂಡರ್‌ ಕಂಪನಿ ಇರಾನ್‌ ಸೇನೆಯ ಪರವಾಗಿ ಇರಾನಿಯನ್‌ ಸರಕುಗಳನ್ನು ಚೀನಾ, ರಷ್ಯಾ ಮತ್ತು ವೆನೆಜುವೆಲಾಗಳಿಗೆ ಸಾಗಾಟ ಮಾಡುತ್ತಿದೆ. ಇದೀಗ ಈ ಕಂಪನಿ ಯುಎಇ ಮೂಲದ ಸೇಫ್ ಸೀಸ್ ಶಿಪ್ ಮ್ಯಾನೇಜ್‌ಮೆಂಟ್ ಎಫ್‌ಜೆಇನ ಕುಕ್ ಐಲ್ಯಾಂಡ್ಸ್-ಫ್ಲ್ಯಾಗ್ಡ್ ನೌಕೆ CHEM (IMO 9240914) ಗಾಗಿ ಭಾರತ ಮೂಲದ ಝೆನ್ ಶಿಪ್ಪಿಂಗ್ ಮತ್ತು ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತ ಮೂಲದ ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಮತ್ತು ಯುಎಇ ಮೂಲದ ಕಂಪನಿ ಟ್ರಾನ್ಸ್ ಗಲ್ಫ್ ಏಜೆನ್ಸಿ LLC ಸಹಾರಾ ಥಂಡರ್‌ಗೆ ಬೆಂಬಲವಾಗಿ ಹಡಗು ನಿರ್ವಹಣಾ ಸೇವೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅಮೆರಿಕ ಹೇಳಿದೆ.

ಇದನ್ನೂ ಓದಿ:Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಇರಾನ್‌, ರಷ್ಯಾಗೆ ತನ್ನ ಬೆಂಬಲ ಸೂಚಿಸಿತ್ತು. ಅಲ್ಲದೇ ಇದೀಗ ಇಸ್ರೇಲ್‌ ಮೇಲೂ ದಾಳಿ ಮಾಡುವ ಮೂಲಕ ತನ್ನ ಉದ್ದಟತನ ಮೆರೆದಿದೆ. ಡ್ರೋನ್‌, ಯುದ್ಧ ಸಾಮಾಗ್ರಿಗಳು ಉಗ್ರರ ಕೈಗೆ ಸುಲಭವಾಗಿ ಸಿಗುವಂತೆ ಮಾಡುವ ಮೂಲಕ ವಿನಾಶಕಾರಿಯಾಗಿ ಇರಾನ್‌ ಬೆಳೆಯುತ್ತಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

Continue Reading

ವಿದೇಶ

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

Israel-Hamas Conflict: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಈ ಮಧ್ಯೆ ಗಾಜಾದಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಸಂಸ್ಥೆಯ ಭಾರತೀಯ ಸಿಬ್ಬಂದಿಯೊಬ್ಬರು ರಫಾದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತ ಸಿಬ್ಬಂದಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯ (DSS) ಸದಸ್ಯರಾಗಿದ್ದರು. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ ಅವರು ಭಾರತದಿಂದ ಮೂಲದವರು ಮತ್ತು ಭಾರತೀಯ ಮಾಜಿ ಸೇನಾ ಸಿಬ್ಬಂದಿ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Israel-Hamas Conflict
Koo

ಗಾಜಾ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel-Hamas Conflict) ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್‌ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್‌ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಈ ಮಧ್ಯೆ ಗಾಜಾದಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಸಂಸ್ಥೆಯ ಭಾರತೀಯ ಸಿಬ್ಬಂದಿಯೊಬ್ಬರು ರಫಾದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತ ಸಿಬ್ಬಂದಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯ (DSS) ಸದಸ್ಯರಾಗಿದ್ದರು. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ ಅವರು ಭಾರತದಿಂದ ಮೂಲದವರು ಮತ್ತು ಭಾರತೀಯ ಮಾಜಿ ಸೇನಾ ಸಿಬ್ಬಂದಿ ಎಂದು ಮೂಲಗಳು ತಿಳಿಸಿವೆ.

ʼʼಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ಬಳಿಕ ಗಾಜಾದಲ್ಲಿ ಮೊದಲ ಬಾರಿ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ರಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಅವರಿದ್ದ ವಾಹನ ಅಪಘಾತಕ್ಕೆ ಈಡಾಗಿ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಮತ್ತೊಬ್ಬ ಡಿಎಸ್ಎಸ್ ಸಿಬ್ಬಂದಿ ಗಾಯಗೊಂಡಿದ್ದಾರೆʼʼ ಎಂದು ವರದಿಯೊಂದು ತಿಳಿಸಿದೆ.

ಸಂತಾಪ

ಘಟನೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ʼʼವಿಶ್ವಸಂಸ್ಥೆಯ ಸುರಕ್ಷತಾ ಮತ್ತು ಭದ್ರತಾ ಇಲಾಖೆಯ ಸಿಬ್ಬಂದಿಯೊಬ್ಬರು ಸೋಮವಾರ ಬೆಳಿಗ್ಗೆ ರಾಫಾದ ಯುರೋಪಿಯನ್ ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದಾಗ ಮೃತಪಟ್ಟಿದ್ದಾರೆ ಎನ್ನುವ ವಿಚಾರ ತಿಳಿದು ತೀವ್ರ ದುಃಖವಾಗಿದೆʼʼ ಎಂದು ಬರೆದುಕೊಂಡು ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ವಿಶ್ವಸಂಸ್ಥೆಯ ಸಿಬ್ಬಂದಿಯ ಮೇಲಿನ ಎಲ್ಲ ದಾಳಿಗಳನ್ನು ಗುಟೆರೆಸ್ ಖಂಡಿಸಿದ್ದಾರೆ ಮತ್ತು ಸಂಪೂರ್ಣ ತನಿಖೆಗೆ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಜಾದಲ್ಲಿನ ಸಂಘರ್ಷವು ನಾಗರಿಕರ ಮೇಲೆ ಮಾತ್ರವಲ್ಲದೆ ಮಾನವೀಯ ಕಾರ್ಯಕರ್ತರ ಮೇಲೂ ಭಾರಿ ಹಾನಿಯನ್ನುಂಟು ಮಾಡುತ್ತಿರುವುದು ಖಂಡನೀಯ. ಮಾನವೀಯ ಕದನ ವಿರಾಮಕ್ಕಾಗಿ ಮತ್ತು ಎಲ್ಲ ಒತ್ತೆಯಾಳುಗಳ ಬಿಡುಗಡೆಗಾಗಿ ಆಗ್ರಹಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2023ರ ಅಕ್ಟೋಬರ್ 7ರಂದು ಆರಂಭವಾದ ಸಂಘರ್ಷದಲ್ಲಿ ಇದುವರೆಗೆ ಇಸ್ರೇಲ್‌ನಲ್ಲಿ 33 ಮಕ್ಕಳು ಸೇರಿದಂತೆ 1,200ಕ್ಕೂ ಹೆಚ್ಚು ಇಸ್ರೇಲಿಗಳು ಮತ್ತು ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆ. ಜತೆಗೆ ಗಾಜಾದಲ್ಲಿ ಕನಿಷ್ಠ 35,091 ಪ್ಯಾಲೆಸ್ತೀನ್‌ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 78,827 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (Coordination of Humanitarian Affairs) ತಿಳಿಸಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿದಾಗ ಗಾಜಾದಲ್ಲಿ ಯುದ್ಧ ಪ್ರಾರಂಭವಾಗಿತ್ತು. ಹಮಾಸ್‌ ಉಗ್ರರು 1,200 ಜನರನ್ನು ಕೊಂದು 253 ಒತ್ತೆಯಾಳುಗಳನ್ನು ವಶಪಡಿಸಿಕೊಂಡಿದೆ ಎಂದು ಇಸ್ರೇಲ್‌ ಹೇಳಿದೆ.

ಇದನ್ನೂ ಓದಿ: Israel Palestine War: ಗಾಜಾದಲ್ಲಿ ರಕ್ತದೋಕುಳಿ; ಆಹಾರಕ್ಕಾಗಿ ಬಂದವರ ಮೇಲೆ ದಾಳಿ; ಕನಿಷ್ಠ 104 ಮಂದಿ ಸಾವು

ಅಪೌಷ್ಟಿಕತೆ

ಗಾಜಾ ಪಟ್ಟಿಯಾದ್ಯಂತ ಜನಸಂಖ್ಯೆಯ ಕಾಲು ಭಾಗದಷ್ಟು ಜನರು- ವಿನಾಶಕಾರಿ ಮಟ್ಟದ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಕ್ಷಾಮದ ಅಪಾಯದಲ್ಲಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಎಂದು ವಿಶ್ವಸಂಸ್ಥೆಯ ಹಿರಿಯ ನೆರವು ಅಧಿಕಾರಿಯೊಬ್ಬರು ಈ ಹಿಂದೆ ಎಚ್ಚರಿಸಿದ್ದರು.

Continue Reading
Advertisement
Swati Maliwal
ಪ್ರಮುಖ ಸುದ್ದಿ2 mins ago

Swati Maliwal : ಸ್ವಾತಿ ಮಾಲಿವಾಲ್​​ ಮೇಲೆ ಕೇಜ್ರಿವಾಲ್ ಸಹಾಯಕನಿಂದ ಹಲ್ಲೆ; ಆಪ್​​ನಿಂದ ತಪ್ಪೊಪ್ಪಿಗೆ

Karnataka weather Man from Siddapura killed in lightning Heavy rain warning for four more days
ಕರ್ನಾಟಕ21 mins ago

Karnataka weather: ಸಿಡಿಲಿಗೆ ಸಿದ್ದಾಪುರದ ವ್ಯಕ್ತಿ ಬಲಿ; ಇನ್ನೂ ನಾಲ್ಕು ದಿನ ಇದೆ ಭಾರಿ ಮಳೆ ಎಚ್ಚರಿಕೆ!

Manjappa Magodi
ಚಿತ್ರದುರ್ಗ52 mins ago

Manjappa Magodi: ಕೆಇಎಸ್‌ ಅಧಿಕಾರಿ ಮಂಜಪ್ಪ ಮಾಗೊದಿಗೆ ಕುವೆಂಪು ವಿವಿಯಿಂದ ಡಾಕ್ಟರೇಟ್

Viral News
ವಿದೇಶ55 mins ago

Viral News: ಗಾಜಾದಲ್ಲಿ ಆಹಾರ ಸಿಗದೆ ನಾಣ್ಯ, ಕಲ್ಲು, ಬ್ಯಾಟರಿ ತಿನ್ನುತ್ತಿರುವ ಮಕ್ಕಳು!

Narendra Modi
ಪ್ರಮುಖ ಸುದ್ದಿ1 hour ago

Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Viral Video
ವೈರಲ್ ನ್ಯೂಸ್1 hour ago

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

Chaya Singh
ಕರ್ನಾಟಕ2 hours ago

Chaya Singh: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ಕದ್ದಿದ್ದ ಮನೆಕೆಲಸದಾಕೆ ಬಂಧನ

former MLC Arun Shahapur latest Statement
ಬೆಂಗಳೂರು2 hours ago

Bengaluru News: ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ; ಅರುಣ್ ಶಹಾಪುರ ಆರೋಪ

HD Revanna Released first reaction after release will be acquitted of all charges
ರಾಜಕೀಯ2 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

Income Tax office
ಪ್ರಮುಖ ಸುದ್ದಿ2 hours ago

Income Tax Office : ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ; ಒಂದು ಸಾವು; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Released first reaction after release will be acquitted of all charges
ರಾಜಕೀಯ2 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20247 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ8 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು9 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ16 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ1 day ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

ಟ್ರೆಂಡಿಂಗ್‌