ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ( Crazy Star) ಇಂದು ಮದುವೆ ಸಂಭ್ರಮ ಮನೆ ಮಾಡಿದೆ.
ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ರವಿಚಂದ್ರನ್ ಅವರ ಮದುವೆ ಇಂದು ನಡೆಯಲಿದೆ ಬೆಂಗಳೂರಿನ ಅರಮನೆ ಆವರಣದಲ್ಲಿ ಶುಭ ಕಾರ್ಯ ನೆರವೇರಲಿದೆ. ಮದುವೆ ಮುಹೂರ್ತ ಬೆಳಗ್ಗೆ 7:30 ರಿಂದ 9ಗಂಟೆಯೊಳಗೆ ನಿಗದಿಯಾಗಿದೆ.
ಸ್ಯಾಂಡಲ್ ವುಡ್‌ನ ಕಲಾವಿದರು ಹಾಗೂ ಗಣ್ಯ ರಾಜಕಾರಣಿಗಳು ಆಗಮಿಸುವ ನಿರೀಕ್ಷೆ ಇದೆ. ಮನೋರಂಜನ್ ಕೈಹಿಡಿಯುತ್ತಿರುವ ಹುಡುಗಿ ಸಂಗೀತಾ ದೀಪಕ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೇಟಲ್ಸ್‌ನಲ್ಲಿ ವಿಜೃಂಭಣೆಯ ವಿವಾಹ ಕಾರ್ಯಕ್ರಮ ನಡೆಯಲಿದ್ದು, ವಿವಾಹ ಮಂಟಪವನ್ನು ಹೂವುಗಳಿಂದ ಅಲಂಕರಿಸಲಾಗಿದೆ.