Site icon Vistara News

Tootu Madike Movie | ಚಿತ್ರ ಪ್ರೇಮಿಗಳಿಗೆ “ತೂತು ಮಡಿಕೆʼಯಲ್ಲಿ ಏನಿದೆ ಎಂಬ ಕುತೂಹಲ!

Tootu Madike Movie

ಬೆಂಗಳೂರು : ತೂತು ಮಡಿಕೆ- ಹೀಗೊಂದು ಶೀರ್ಷಿಕೆ (Tootu Madike Movie) ಅಡಿಯಲ್ಲಿ ಸಿನಿಮಾವೊಂದು ರಿಲೀಸ್‌ ಆಗಲು ಸಜ್ಜಾಗಿದೆ. ಜುಲೈ 8ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಪೋಸ್ಟರ್‌, ಟೀಸರ್‌ ಹಾಗೂ ಹಾಡಿನ ಮೂಲಕ ಈ ಚಿತ್ರ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದೆ.

ಸಖತ್‌ ಕಾಮಿಡಿ ಡೈಲಾಗ್‌ ಮೂಲಕ ಟ್ರೇಲರ್‌ ಗಮನ ಸೆಳೆದಿದೆ. ಈ ಚಿತ್ರದ ನಿರ್ದೇಶಕ ಮತ್ತು ನಟನ ಪಾತ್ರಗಳನ್ನು ಚಂದ್ರಕೀರ್ತಿ ನಿಭಾಯಿಸುತ್ತಿದ್ದಾರೆ. “”ಮೂರು ವರ್ಷಗಳಿಂದ ಸಿನಿಮಾ ಮುಗಿಸಿ ರಿಲೀಸ್‌ಗೆ ಎದುರು ನೋಡುತ್ತಿದ್ದೇವೆ. ಒಂದೊಂದು ಹಂತವೂ ನಮಗೆ ಕನಸಾಗಿರುತ್ತದೆ. ಆರಂಭದಿಂದಲೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದʼʼ ಎಂದು ಚಂದ್ರಕೀರ್ತಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

“”ಬಹಳ ಆಸೆಪಟ್ಟು ಸಿನಿಮಾರಂಗಕ್ಕೆ ಬಂದಿದ್ದೇನೆ. ಹಲವು ಕಿರುಚಿತ್ರ, ನಾಟಕಗಳ ನಂತರ ಕೆಲವು ಅವಕಾಶಗಳು ಸಿಗುತ್ತಿದ್ದವು. ಆದರೆ ಮಾಡಿದ ಸಿನಿಮಾಗಳು ರಿಲೀಸ್ ಆಗುತ್ತಿರಲಿಲ್ಲ. ಹಾಗಾಗಿ ನಮ್ಮ ಬಳಿ ಇರುವ ರಿಸೋರ್ಸ್ ಮೂಲಕ ಸಿನಿಮಾ ಶುರು ಮಾಡಿದೆವು. ಹೊಸ ನಿರ್ದೇಶಕನಿಗೆ ನಿರ್ಮಾಪಕರು ಸಿಗುವುದು ಕಷ್ಟದ ಕೆಲಸ. ಆದರೆ ಈ ನಿರ್ಮಾಪಕರು ನಮ್ಮ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆʼʼ ಎಂದವರು ಹೇಳಿದರು.

ನಟ ಪ್ರಮೋದ್ ಶೆಟ್ಟಿ ಮಾತಾನಾಡಿ “”ಪ್ರತಿಯೊಬ್ಬರೂ ಸಿನಿಮಾ ನೋಡಿ. ಸಿನಿಮಾದ ಆಶಯ ಟ್ರೇಲರ್ ಮೂಲಕ ರೀಚ್ ಆಗಿದೆ ಎನಿಸುತ್ತದೆ. ಹೊಸಬರ ಜತೆ ಕೆಲಸ ಮಾಡುತ್ತಾ, ಹೊಸತನನ್ನು ಕಲಿಯುತ್ತಾ ಈ ಚಿತ್ರ ರೂಪಿಸಿದ್ದೇವೆʼʼ ಎಂದರು.

ಸ್ವಾರ್ಥ, ದುರಾಸೆಯ ಸುತ್ತ ಸಾಗುವ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ನಾಯಕಿಯಾಗಿ “ಗೊಂಬೆಗಳ ಲವ್ʼ ಖ್ಯಾತಿಯ ಪಾವನಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಮತ್ತಿತರರ ತಾರಾಬಳಗ ಚಿತ್ರದಲ್ಲಿದೆ.

ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ಅಡಿಯಲ್ಲಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

ಇದನ್ನೂ ಓದಿ | Window Seat Trailer: ಭೂಮಿನೂ ರೌಂಡು, ಕಾಲಾನೂ ರೌಂಡು, ಎಲ್ಲೇ ಸುತ್ತಿದ್ರೂ ಇನ್ನೆಲ್ಲಿಗೆ ಬರ್ಬೇಕು?!

Exit mobile version