Site icon Vistara News

Yash19 Title Reveal: ಯಶ್‌ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌! ವಿಡಿಯೊ ನೋಡಿ!

TOXIC yash New Movie

ಬೆಂಗಳೂರುನಟ ಯಶ್ (Actor Yash), ‘ಕೆಜಿಎಫ್’ ಹೊರತಾಗಿ (Yash19 Title Reveal) ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಫ್ಯಾನ್ಸ್‌ ಮಾತ್ರವಲ್ಲದೆ ಭಾರತದ ಸಿನಿಮಾ ಪ್ರೇಕ್ಷಕರಲ್ಲಿತ್ತು. ಇದೀಗ ಯಶ್‌ ಸಿಹಿ ಸುದ್ದಿ ಕೊಟ್ಟಾಗಿದೆ. ʻಟಾಕ್ಸಿಕ್‌ʼ -ಎ ಫೈರಿ ಟೇಲ್‌ ಫಾರ್‌ ಗ್ರೌನ್‌ʼ (TOXIC) ಎಂದು ರಿವೀಲ್‌ ಆಗಿದೆ. ಇಂಡಿಯಾ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್ ಸೇರಿದಂತೆ ಹಲವೆಡೆ ಟೈಟಲ್ ರಿವೀಲ್ ಆಗಿದೆ. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಕೂಡ ಕನ್ಫರ್ಮ್ ಆಗಿದೆ. ಗೀತು ಮೋಹನ್ ದಾಸ್ ಕಲ್ಪನೆಯ ಕತೆಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 2025ರ ಏಪ್ರಿಲ್‌ 10ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಅಗುತ್ತಿದೆ.

ರಾಕಿಂಗ್ ಜೋಡಿ ಯಶ್ – ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟಿದ್ದು ಡಿಸೆಂಬರ್ ತಿಂಗಳಲ್ಲಿ. ಹೀಗಾಗಿ ಇದೇ ತಿಂಗಳಲ್ಲಿ ಯಶ್ 19 ಅನೌನ್ಸ್ ಮಾಡಲು ಪ್ಲಾನ್ ಆಗಿತ್ತು ಎನ್ನಾಗಿದೆ. ಇದೀಗ ಯಶ್‌ 10 ಕೂಡ ಡಿಸೆಂಬರ್‌ನಲ್ಲಿಯೇ ಅನೌನ್ಸ್‌ ಅಗಿದೆ. ಇಂದು ಹಲವೆಡೆ ಅಭಿಮಾನಿಗಳು ಟೈಟಲ್ ಅನೌನ್ಸ್ ಆದ ಗಳಿಗೆಯನ್ನ ಸಂಭ್ರಮಿಸಿದ್ದಾರೆ.

ಯಶ್‌ ಸಿನಿಮಾವು ಗೋವಾದ ಡ್ರಗ್‌ ಮಾಫಿಯಾದ ಕಥೆ ಹೊಂದಿರುವ ಸೂಚನೆಗಳಿವೆ ಎಂದು ಗುಲ್ಟೆ ವರದಿ ಈ ಹಿಂದೆ ಮಾಡಿತ್ತು.

ಯಶ್ ಕೆಲವು ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡಿದ್ದು, ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಯಶ್​ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್​ಗಳು ಫೇಸ್​ಬುಕ್​ನಲ್ಲಿ ಬಂದಿತ್ತು. ‘ಲೋಡಿಂಗ್’ ಪೋಸ್ಟರ್ʼ ಹಾಗೂ ಇಂದು ಹಂಚಿಕೊಂಡ ಪೋಸ್ಟರ್‌ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್‌ ಊಹಿಸಿದ್ದರು. ಕೆವಿಎನ್‌ ಪ್ರೊಡಕ್ಷನ್‌ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: Yash Actor: ರಾಕಿಂಗ್ ಸ್ಟಾರ್ `ಯಶ್ 19′ ಬಿಗ್ ಬ್ರೇಕಿಂಗ್; ಫ್ಯಾನ್ಸ್‌ ಕಾಯುವಿಕೆಗೆ ಶೀಘ್ರವೇ ಬ್ರೇಕ್!

ಈ ಮಧ್ಯೆ ಅವರು ಬಾಲಿವುಡ್‌ ನಿರ್ದೇಶಕ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಯಶ್‌ ದಾಖಲೆಯ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಮೂಲಗಳ ಪ್ರಕಾರ ರಣಬೀರ್‌ ಕಪೂರ್‌ ರಾಮನಾಗಿ, ದಕ್ಷಿಣ ಭಾರತದ ನಾಯಕಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಲಿದ್ದಾರೆ. ಇನ್ನೊಂದು ಮುಖ್ಯ ಪಾತ್ರ ರಾವಣನಾಗಿ ಯಶ್‌ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

Exit mobile version