Site icon Vistara News

Mission Impossible 7: ಮಿಷನ್‌ ಇಂಪಾಸಿಬಲ್‌ 7 ಟ್ರೈಲರ್‌ ಔಟ್;‌ ಹೇಗಿದೆ ನೋಡಿ ಟಾಮ್‌ ಕ್ರೂಸ್‌ ಆ್ಯಕ್ಷನ್

Mission Impossible

Mission Impossible

ವಾಷಿಂಗ್ಟನ್‌: ಟಾಮ್‌ ಕ್ರೂಸ್‌ ಅಭಿನಯದ, ವಿಶ್ವಾದ್ಯಂತ ಕೋಟ್ಯಂತರ ಸಿನಿ ಪ್ರೇಮಿಗಳನ್ನು ಸೆಳೆದಿರುವ ಮಿಷನ್‌ ಇಂಪಾಸಿಬಲ್‌ ಸರಣಿಯ ಏಳನೇ (Mission Impossible 7) ಭಾಗವಾದ, ‘ಮಿಷನ್‌ ಇಂಪಾಸಿಬಲ್‌ ಡೆಡ್‌ ರಾಕನಿಂಗ್‌ ಪಾರ್ಟ್‌ ಒನ್‌” (Mission: Impossible – Dead Reckoning Part One) ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಜಗತ್ತಿನಾದ್ಯಂತ ಸಿನಿಮಾ ಅಭಿಮಾನಿಗಳನ್ನು ಸೆಳೆದಿದೆ.

ಇಲ್ಲಿದೆ ಟ್ರೈಲರ್‌

ಡೆಡ್‌ ರಾಕನಿಂಗ್‌ ಎಂದು ಹೆಸರಿಟ್ಟಿರುವುದಕ್ಕೂ, ಟಾಮ್‌ ಕ್ರೂಸ್‌ ಅವರು ಬೈಕ್‌ ಸವಾರಿ ಮೂಲಕ ಸ್ಟಂಟ್‌ ಮಾಡಿರುವುದಕ್ಕೂ ಸರಿಹೊಂದಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲೂ ಟಾಮ್‌ ಕ್ರೂಸ್‌ ಅವರು ಸ್ಪೈ ಆಗಿಯೇ ನಟಿಸಿದ್ದಾರೆ. ಮಿಷನ್‌ ಇಂಪಾಸಿಬಲ್‌ ಸರಣಿಯೇ ಸ್ಪೈ ಸಿನಿಮಾಗಳಿಂದ ಕೂಡಿರುವುದರಿಂದ ಇಲ್ಲೂ ಹೆಚ್ಚಿನ ನಿರೀಕ್ಷೆ ಇದೆ.

ಇದನ್ನೂ ಓದಿ: Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ

ಕ್ರಿಸ್ಟೋಫರ್‌ ಮ್ಯಾಕ್‌ಕ್ವಾರಿ ಅವರು ಮಿಷನ್‌ ಇಂಪಾಸಿಬಲ್‌ ಸರಣಿಯ ಏಳನೇ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಟಾಮ್‌ ಕ್ರೂಸ್‌ ಜತೆಗೆ ವಿಂಗ್‌ ರ‍್ಹೇಮ್ಸ್‌, ಸೈಮನ್‌ ಪೆಗ್‌, ರೆಬೆಕ್ಕಾ ಫರ್ಗ್ಯೂಸನ್‌, ಹೆನ್ರಿ ಜೆರ್ನಿ, ವೆನೆಸ್ಸಾ ಕಿರ್ಬಿ, ಫೆಡೆರ‍್ರಿಕ್‌ ಶಿಮಿಟ್‌ ಸೇರಿ ಹಲವರು ಸಿನಿಮಾಗೆ ಮೆರುಗು ತಂದಿದ್ದಾರೆ. ಜುಲೈ 12ರಂದು ಸಿನಿಮಾ ತೆರೆಗೆ ಬರಲಿದೆ. ಮಿಷನ್‌ ಇಂಪಾಸಿಬಲ್‌ ಸರಣಿಯ ಮೊದಲ ಸಿನಿಮಾ 1996ರಲ್ಲಿ ಬಿಡುಗಡೆಯಾಗಿ, ಜಗತ್ತಿನಾದ್ಯಂತ ಹಿಟ್‌ ಆಗಿತ್ತು. ಇದೇ ಸರಣಿಯ ನಂತರದ ಸಿನಿಮಾಗಳು ಕೂಡ ಮೆಚ್ಚಗೆಗೆ ಪಾತ್ರವಾಗಿವೆ.

Exit mobile version