ಬೆಂಗಳೂರು : ಜೂನ್ 24ರಂದು ಕ್ರೇಜಿ ಸ್ಟಾರ್ ಅವರ ಎರಡನೇ ಮಗ ವಿಕ್ರಮ್ ಅಭಿನಯದ ತ್ರಿವಿಕ್ರಮ ಸಿನಿಮಾ (Trivikrama Cinema) ತೆರೆಗೆ ಬರಲು ಸಜ್ಜಾಗಿದೆ. ಪ್ರಮೋಷನ್ ಕೂಡ ಸಖತ್ ಆಗುತ್ತಿದ್ದು, ಈಗಾಗಲೇ ಹಲವಾರು ಸ್ಥಳಗಳಲ್ಲಿ ಚಿತ್ರತಂಡ ಪ್ರಚಾರ ಮಾಡುತ್ತಿದೆ.
ಬೆಳಗಾವಿಯ ಖಾಸಗಿ ಕಾಲೇಜ್ ಒಂದಕ್ಕೆ ಸಹ ಪ್ರಚಾರಕ್ಕೆ ಹೋಗಿದ್ದು, ಅಲ್ಲಿನ ಪ್ರಾಧ್ಯಾಪಕರೊಬ್ಬರು ಹೇಳಿರುವ ಒಂದು ಹೇಳಿಕೆ ಈಗ ಫುಲ್ ವೈರಲ್ ಆಗುತ್ತಿದೆ.
ಇದನ್ನೂ ಓದಿ | Trivikrama: ತ್ರಿವಿಕ್ರಮ ಸಾಂಗ್‌ಗೆ ಹ್ಯಾಟ್ರಿಕ್ ಹೀರೊ ಭರ್ಜರಿ ಸ್ಟೆಪ್
ಸಿನಿಮಾ ನೋಡಿದರೆ 5 ಮಾರ್ಕ್ಸ್ ಅಂತೆ
ಕಾಲೇಜಿನಲ್ಲಿ ಪ್ರಚಾರ ಕಾರ್ಯವಾಗುತ್ತಿದ್ದ ಸಂದರ್ಭದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಗ ಈ ಪ್ರಾಧ್ಯಾಪಕರು ನಿಮಗೆ ಒಂದು ದಿನ ಹಾಫ್ ಡೇ ಲೀವ್ ಕೊಡ್ತಿನಿ. ಎಲ್ಲರೂ ಹೋಗಿ ತ್ರಿವಿಕ್ರಮ ಸಿನಿಮಾ ನೋಡಿ ಬನ್ನಿ. ಸಿನಿಮಾಗೆ ಹೋಗಿರುವ ಟಿಕೆಟ್ ತಂದು ಕೊಟ್ಟರೆ 5 ಮಾರ್ಕ್ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣವಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳು ಓಹೋ ಎಂದು ಜೋರಾಗಿ ಕೂಗಿದ್ದಾರೆ. ಪ್ರಾಧ್ಯಾಪಕರು ಈ ರೀತಿ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಇದು ಟೀಕೆಗೆ ಗುರಿಯಾಗಿದೆ.
ಕೆಲವರು ಸಂತಸ ವ್ಯಕ್ತ ಪಡಿಸಿದರೆ ಸಿನಿಮಾ ನೋಡಿದರೆ ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ಹಲವಾರು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇದು ಪೋಷಕರ ಕೆಂಗಣ್ಣಿಗೂ ಸಹ ಗುರಿಯಾಗಿದ್ದು, ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವುದನ್ನು ಬಿಟ್ಟು, ಈ ರೀತಿ ಸಿನಿಮಾ ನೋಡಿದರೆ 5 ಮಾರ್ಕ್ಸ್ ನೀಡುತ್ತೇನೆ ಎಂದು ಹೇಳಿ ದಾರಿ ತಪ್ಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ತ್ರಿವಿಕ್ರಮ ನಾನಾ ಕಾರಣಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಸಿನಿಮಾಗೆ ಬರೋಬ್ಬರಿ ನಾಲ್ಕು ಪ್ರಖ್ಯಾತ ಫೈಟ್ ಮಾಸ್ಟರ್ಗಳು ಸಾಹಸ ದೃಶ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಆಕಾಂಕ್ಷ ಮತ್ತು ಅಕ್ಷರಾ ಗೌಡ ಪ್ರೇಮಕತೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ | Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್ ಅನೌನ್ಸ್!