Site icon Vistara News

Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್‌ ಅನೌನ್ಸ್!

ಬೆಂಗಳೂರು : ಸ್ಯಾಂಡಲ್‌ ವುಡ್ ನಲ್ಲಿ ಒಂದರ ಮೇಲೊಂದು ಸ್ಪರ್ಧೆಯಲ್ಲಿ ರಿಲೀಸ್‌ ಡೇಟ್ಸ್‌ ಘೋಷಣೆ ಮಾಡುತ್ತಿದ್ದಾರೆ. ಇದೀಗ ಕ್ರೇಜಿ ಸ್ಟಾರ್‌ ರವಿಚಂದ್ರನ್ ಅವರ ಮಗ ವಿಕ್ರಮ್‌ ರವಿಚಂದ್ರನ್ ಅವರ ʼತ್ರಿವಿಕ್ರಮʼ‌ ಸಿನಿಮಾ ರಿಲೀಸ್ ಡೇಟ್‌ ಫಿಕ್ಸ್‌ ಆಗಿದೆ. ‌ ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರದ ಬಿಡುಗಡೆಯ ಕುರಿತು ಸೋಷಿಯಲ್‌ ಮೀಡಿಯಾ ಮೂಲಕ ರಿಲೀಸ್‌ ಡೇಟ್‌ ಘೋಷಣೆ ಮಾಡಲಾಗಿದೆ. ಜೂನ್ 24ರಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

ಇತ್ತೀಚಿಗಷ್ಟೇ ಲಢಾಕ್‌ ಮತ್ತು ಕಾಶ್ಮೀರದಲ್ಲಿ ಶೂಟಿಂಗ್‌ ಮಾಡಲಾಗಿತ್ತು. ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಿನಿಮಾ ಆಸಕ್ತರನ್ನು ಸೆಳೆದಿತ್ತು.  ಅರ್ಜುನ್‌ ಜನ್ಯ ಸಂಗೀತ ನಿರ್ದೇಶಿಸಿದ್ದು, ಶ್ರೇಯಾ ಘೋಷಲ್‌, ಶ್ರೀರಾಮ್‌, ವಿಜಯ್‌ ಪ್ರಕಾಶ್‌ ಮತ್ತು ಹರಿ ಚರಣ್‌, ಸಂಜೀತ್‌ ಹೆಗಡೆ ಹಾಡುಗಳನ್ನು ಚಿತ್ರದಲ್ಲಿ ಹಾಡಿದ್ದಾರೆ. ಕೆ.ಎಮ್‌ ಪ್ರಕಾಶ್‌ ಸಂಕಲನ ಮಾಡಿದ್ದು, ಸಂತೋಷ್‌ ರೈ ಪತಾಜೆ ಛಾಯಾಗ್ರಹಣ ಮಾಡಿದ್ದಾರೆ.

ನಟರಾದ ಆಕಾಂಶಾ ಶರ್ಮಾ, ಅಕ್ಷರ ಗೌಡ, ಶಿವಮಣಿ, ರೋಹಿತ್ ರಾಯ್, ಫೈಸಲ್ ಖಾನ್, ಜಯಪ್ರಕಾಶ್, ತುಳಸಿ ಶಿವಮಣಿ ಮತ್ತು ಚಿಕ್ಕಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version