ಬೆಂಗಳೂರು: ಹಸೀನ್ ದಿಲ್‌ರುಬಾ (Haseen Dilruba’s) ತಂಡದ ಮುಂಬರುವ ʼಫಿರ್ ಆಯಿ ಹಸೀನ್ ದಿಲ್‌ರುಬಾʼ (Phir Aayi Haseen Dilruba) ಪೋಸ್ಟರ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು (Taapsee Pannu) ಇದೀಗ ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದಾಗ ತಮ್ಮ ಅನುಭವಗಳನ್ನು, ಹಾಗೂ ಅವಮಾನಕ್ಕೊಳಗಾಗಿರುವ ಸನ್ನಿವೇಶವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಪೋಷಕರಿಗೆ ಮನವರಿಕೆ ಮಾಡಿದ್ದೆ
“2008ರಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದನ್ನು ಮುಂದುವರಿಸುವ ಷರತ್ತಿನ ಮೇಲೆ ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಪೋಷಕರಿಗೆ ಮನವರಿಕೆ ಮಾಡಿದ್ದೆ. ಸತ್ಯವನ್ನು ಹೇಳಲು ನನ್ನನ್ನು ಕೇಳಬೇಡಿ. ನಾನು ಸುಳ್ಳು ಹೇಳುವುದಿಲ್ಲ. ಆದರೆ ಸ್ಪರ್ಧಿಯಲ್ಲಿ ಏನಾಗುತ್ತದೆ ಎಂಬುದನ್ನು ನಾನು ನಿಖರವಾಗಿ ಹೇಳಲಾರೆ. ನನ್ನಿಂದ ಸಾಧ್ಯವಾಗುವುದಷ್ಟನ್ನು ನಾನು ಹೇಳುತ್ತೇನೆ, ”ಎಂದು ಮಾತು ಶುರು ಮಾಡಿದರು.
ತಾಪ್ಸಿ ಮಾತು ಮುಂದುವರಿಸಿ ʻʻನಾನು ಆಯ್ಕೆಯಾಗಿದ್ದು ಆಶ್ಚರ್ಯವಾಗಿತ್ತು. ನನಗೆ ತಿಳಿದಿತ್ತು ಟಾಪ್ 10 ಲಿಸ್ಟ್ ನಲ್ಲಿ ನನ್ನನ್ನು ಹೊರಗೆ ಹಾಕುತ್ತಾರೆ ಎಂದು. ದೇಶಾದ್ಯಂತ 28 ಮಹಿಳೆಯರು ಶಾರ್ಟ್‌ಲಿಸ್ಟ್ ಆಗಿದ್ದರು. ದಿಲ್ಲಿಯಿಂದ ಕೇವಲ ಎರಡು ಅಥವಾ ಮೂವರಲ್ಲಿ ನಾನು ಒಬ್ಬಳಾಗಿದ್ದೆ. ಇತರ ಎಲ್ಲ ಮಹಿಳೆಯರು ವೃತ್ತಿಪರ ಮಾಡೆಲ್‌ಗಳಾಗಿದ್ದರು. ನಾನು ಫೋಟೊಶೂಟ್ ಮಾತ್ರ ಮಾಡಿಸಿದ್ದೆ. ಆಗ ನಾನು ದೂರದರ್ಶನ ಜಾಹೀರಾತುಗಳನ್ನು ಮಾಡಿರಲಿಲ್ಲ. ನಾನು ರ‍್ಯಾಂಪ್ ವಾಕ್ ಮಾಡಿರಲಿಲ್ಲ., ಏಕೆಂದರೆ ಆ ಪ್ರದರ್ಶನಗಳು ರಾತ್ರಿಯಲ್ಲಿ ನಡೆಯುತ್ತಿದ್ದವು. ಆ ಕಾರಣ ನನ್ನ ತಂದೆ ನನ್ನನ್ನು ಹೋಗಲು ಬಿಟ್ಟಿರಲಿಲ್ಲʼʼ ಎಂದರು.
ಇದನ್ನೂ ಓದಿ: Taapsee Pannu: ನಟಿ ತಾಪ್ಸಿ ಪನ್ನು ತಿಂಗಳಿಗೆ ಆಹಾರತಜ್ಞರಿಗಾಗಿ 1 ಲಕ್ಷ ರೂ. ವೆಚ್ಚ ಮಾಡುತ್ತಿರುವುದೇಕೆ?
ಟ್ರಯಲ್ಸ್‌ನಲ್ಲಿ ಅವಮಾನಕ್ಕೊಳಗಾದೆ
ʻʻಮಿಸ್ ಇಂಡಿಯಾ ಟ್ರಯಲ್ಸ್‌ನಲ್ಲಿ ಎಲ್ಲರ ಮುಂದೆ ನಾನು ಅವಮಾನಕ್ಕೊಳಗಾಗಿದ್ದೇ. ಇದು ನಾನು ಮಾಡಬಹುದಾದ ಕೆಲಸವಲ್ಲ ಎಂದು ‘ಗ್ರೂಮಿಂಗ್ ಅವಧಿಯಲ್ಲಿ’ ನಾನು ಅರಿತುಕೊಂಡೆ. ಹೇಮಂತ್ ತ್ರಿವೇದಿ ಆ ಸಮಯದಲ್ಲಿ ಎಕ್ಸ್‌ಪರ್ಟ್ ಶಿಕ್ಷಕರಾಗಿದ್ದರು. ನನ್ನನ್ನು ಅವಮಾನಿಸಿದ್ದರು. ಆ ಸಮಯದಲ್ಲಿ ನನಗೆ ಅವರು ನನಗೆ ಹೇಳಿದ್ದು ಏನೆಂದರೆ ‘ ಒಂದು ವೇಳೆ ಇದು ನನ್ನ ಕೈಯಲ್ಲಿದ್ದಿದ್ದರೆ ನೀವು ಟಾಪ್ 28ರೊಳಗೆ ಇರುತ್ತಿರಲಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ಮಿಥಾಲಿ ರಾಜ್ ಅವರನ್ನು ‘ಲೇಡಿ ಸಚಿನ್ʼ ಅಂತ ಯಾಕೆ ಹೇಳ್ಬೇಕು? ಅವರಿಗೆ ಐಡೆಂಟಿಟಿ ಇಲ್ವಾ?: ತಾಪ್ಸಿ ಪನ್ನು ಪ್ರಶ್ನೆ
ʻʻನನಗೆ ತಿಳಿದಿತ್ತು. ಇಲ್ಲಿ ತುಂಬ ಫೇವರಿಸಮ್ ನಡೆಯುತ್ತಿದೆ ಎಂದು. ಸ್ಪರ್ಧಿಗಳು ಮೂರು ವರ್ಷಗಳವರೆಗೆ ತಮ್ಮ ಎಲ್ಲಾ ಗಳಿಕೆಯ 30% ಅನ್ನು ಸ್ಪರ್ಧೆಗೆ ನೀಡಬೇಕು ಎಂದು ಕಟ್ಟುನಿಟ್ಟಾಗಿ ಷರತ್ತು ವಿಧಿಸಿದ ಒಪ್ಪಂದಗಳಿಗೆ ಜನರನ್ನು ಸಹಿ ಹಾಕಿಸಿಕೊಳ್ಳುತ್ತಿದ್ದರು. ಇದೆಲ್ಲ ಮುಗಿದ ನಂತರ, ನಾವು ಪಾರ್ಟಿಗೆ ಹೋದೆವು, ರಾಷ್ಟ್ರೀಯ ನಿರ್ದೇಶಕರು ಅಲ್ಲಿದ್ದರು ಮತ್ತು ಅವರು ತುಂಬಾ ಸೌಜನ್ಯದಿಂದ ಶುಭ ಹಾರೈಸಿದರು.
ʻʻಭಾರತೀಯರೊಬ್ಬರು ಜಾಗತಿಕ ಸ್ಪರ್ಧೆಯನ್ನು ಗೆದ್ದು ಸುಮಾರು ಒಂದು ದಶಕ ಕಳೆದಿದೆ. ಭಾರತಕ್ಕೆ ಯಾವುದೇ ಅವಕಾಶವಿಲ್ಲʼʼ ಎಂದು ತಾಪ್ಸಿ ರಾಷ್ಟ್ರೀಯ ನಿರ್ದೇಶಕರಿಗೆ ತಿಳಿಸಿರುವುದು ಹೇಳಿಕೊಂಡಿದ್ದಾರೆ. ʻʻನಾನು ಈ ರೀತಿ ಅವರಿಗೆ ಏಕೆ ಹೇಳಿದೆ ಎಂದು ನನಗೆ ತಿಳಿದಿಲ್ಲ. ಆದರೆ ನನಗೆ ಆ ಸಮಯಕ್ಕೆ ಧೈರ್ಯ ಬಂದಿತ್ತುʼʼಎಂದು ಹೇಳಿಕೊಂಡಿದ್ದಾರೆ.