ಬಾಲಿವುಡ್
Taapsee Pannu: ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದಾಗ ಅವಮಾನಕ್ಕೊಳಗಾಗಿದ್ದೆ: ತಾಪ್ಸಿ ಪನ್ನು
ಮಿಸ್ ಇಂಡಿಯಾ (Taapsee Pannu) ಸ್ಪರ್ಧಿಯಾಗಿದ್ದಾಗ ತಮ್ಮ ಅನುಭವಗಳನ್ನು, ಹಾಗೂ ಅವಮಾನಕ್ಕೊಳಗಾಗಿರುವ ಸನ್ನಿವೇಶವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು: ಹಸೀನ್ ದಿಲ್‌ರುಬಾ (Haseen Dilruba’s) ತಂಡದ ಮುಂಬರುವ ʼಫಿರ್ ಆಯಿ ಹಸೀನ್ ದಿಲ್‌ರುಬಾʼ (Phir Aayi Haseen Dilruba) ಪೋಸ್ಟರ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು (Taapsee Pannu) ಇದೀಗ ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದಾಗ ತಮ್ಮ ಅನುಭವಗಳನ್ನು, ಹಾಗೂ ಅವಮಾನಕ್ಕೊಳಗಾಗಿರುವ ಸನ್ನಿವೇಶವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಪೋಷಕರಿಗೆ ಮನವರಿಕೆ ಮಾಡಿದ್ದೆ
“2008ರಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದನ್ನು ಮುಂದುವರಿಸುವ ಷರತ್ತಿನ ಮೇಲೆ ಮಿಸ್ ಇಂಡಿಯಾ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಪೋಷಕರಿಗೆ ಮನವರಿಕೆ ಮಾಡಿದ್ದೆ. ಸತ್ಯವನ್ನು ಹೇಳಲು ನನ್ನನ್ನು ಕೇಳಬೇಡಿ. ನಾನು ಸುಳ್ಳು ಹೇಳುವುದಿಲ್ಲ. ಆದರೆ ಸ್ಪರ್ಧಿಯಲ್ಲಿ ಏನಾಗುತ್ತದೆ ಎಂಬುದನ್ನು ನಾನು ನಿಖರವಾಗಿ ಹೇಳಲಾರೆ. ನನ್ನಿಂದ ಸಾಧ್ಯವಾಗುವುದಷ್ಟನ್ನು ನಾನು ಹೇಳುತ್ತೇನೆ, ”ಎಂದು ಮಾತು ಶುರು ಮಾಡಿದರು.
ತಾಪ್ಸಿ ಮಾತು ಮುಂದುವರಿಸಿ ʻʻನಾನು ಆಯ್ಕೆಯಾಗಿದ್ದು ಆಶ್ಚರ್ಯವಾಗಿತ್ತು. ನನಗೆ ತಿಳಿದಿತ್ತು ಟಾಪ್ 10 ಲಿಸ್ಟ್ ನಲ್ಲಿ ನನ್ನನ್ನು ಹೊರಗೆ ಹಾಕುತ್ತಾರೆ ಎಂದು. ದೇಶಾದ್ಯಂತ 28 ಮಹಿಳೆಯರು ಶಾರ್ಟ್‌ಲಿಸ್ಟ್ ಆಗಿದ್ದರು. ದಿಲ್ಲಿಯಿಂದ ಕೇವಲ ಎರಡು ಅಥವಾ ಮೂವರಲ್ಲಿ ನಾನು ಒಬ್ಬಳಾಗಿದ್ದೆ. ಇತರ ಎಲ್ಲ ಮಹಿಳೆಯರು ವೃತ್ತಿಪರ ಮಾಡೆಲ್‌ಗಳಾಗಿದ್ದರು. ನಾನು ಫೋಟೊಶೂಟ್ ಮಾತ್ರ ಮಾಡಿಸಿದ್ದೆ. ಆಗ ನಾನು ದೂರದರ್ಶನ ಜಾಹೀರಾತುಗಳನ್ನು ಮಾಡಿರಲಿಲ್ಲ. ನಾನು ರ‍್ಯಾಂಪ್ ವಾಕ್ ಮಾಡಿರಲಿಲ್ಲ., ಏಕೆಂದರೆ ಆ ಪ್ರದರ್ಶನಗಳು ರಾತ್ರಿಯಲ್ಲಿ ನಡೆಯುತ್ತಿದ್ದವು. ಆ ಕಾರಣ ನನ್ನ ತಂದೆ ನನ್ನನ್ನು ಹೋಗಲು ಬಿಟ್ಟಿರಲಿಲ್ಲʼʼ ಎಂದರು.
ಇದನ್ನೂ ಓದಿ: Taapsee Pannu: ನಟಿ ತಾಪ್ಸಿ ಪನ್ನು ತಿಂಗಳಿಗೆ ಆಹಾರತಜ್ಞರಿಗಾಗಿ 1 ಲಕ್ಷ ರೂ. ವೆಚ್ಚ ಮಾಡುತ್ತಿರುವುದೇಕೆ?
ಟ್ರಯಲ್ಸ್‌ನಲ್ಲಿ ಅವಮಾನಕ್ಕೊಳಗಾದೆ
ʻʻಮಿಸ್ ಇಂಡಿಯಾ ಟ್ರಯಲ್ಸ್‌ನಲ್ಲಿ ಎಲ್ಲರ ಮುಂದೆ ನಾನು ಅವಮಾನಕ್ಕೊಳಗಾಗಿದ್ದೇ. ಇದು ನಾನು ಮಾಡಬಹುದಾದ ಕೆಲಸವಲ್ಲ ಎಂದು ‘ಗ್ರೂಮಿಂಗ್ ಅವಧಿಯಲ್ಲಿ’ ನಾನು ಅರಿತುಕೊಂಡೆ. ಹೇಮಂತ್ ತ್ರಿವೇದಿ ಆ ಸಮಯದಲ್ಲಿ ಎಕ್ಸ್‌ಪರ್ಟ್ ಶಿಕ್ಷಕರಾಗಿದ್ದರು. ನನ್ನನ್ನು ಅವಮಾನಿಸಿದ್ದರು. ಆ ಸಮಯದಲ್ಲಿ ನನಗೆ ಅವರು ನನಗೆ ಹೇಳಿದ್ದು ಏನೆಂದರೆ ‘ ಒಂದು ವೇಳೆ ಇದು ನನ್ನ ಕೈಯಲ್ಲಿದ್ದಿದ್ದರೆ ನೀವು ಟಾಪ್ 28ರೊಳಗೆ ಇರುತ್ತಿರಲಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ಮಿಥಾಲಿ ರಾಜ್ ಅವರನ್ನು ‘ಲೇಡಿ ಸಚಿನ್ʼ ಅಂತ ಯಾಕೆ ಹೇಳ್ಬೇಕು? ಅವರಿಗೆ ಐಡೆಂಟಿಟಿ ಇಲ್ವಾ?: ತಾಪ್ಸಿ ಪನ್ನು ಪ್ರಶ್ನೆ
ʻʻನನಗೆ ತಿಳಿದಿತ್ತು. ಇಲ್ಲಿ ತುಂಬ ಫೇವರಿಸಮ್ ನಡೆಯುತ್ತಿದೆ ಎಂದು. ಸ್ಪರ್ಧಿಗಳು ಮೂರು ವರ್ಷಗಳವರೆಗೆ ತಮ್ಮ ಎಲ್ಲಾ ಗಳಿಕೆಯ 30% ಅನ್ನು ಸ್ಪರ್ಧೆಗೆ ನೀಡಬೇಕು ಎಂದು ಕಟ್ಟುನಿಟ್ಟಾಗಿ ಷರತ್ತು ವಿಧಿಸಿದ ಒಪ್ಪಂದಗಳಿಗೆ ಜನರನ್ನು ಸಹಿ ಹಾಕಿಸಿಕೊಳ್ಳುತ್ತಿದ್ದರು. ಇದೆಲ್ಲ ಮುಗಿದ ನಂತರ, ನಾವು ಪಾರ್ಟಿಗೆ ಹೋದೆವು, ರಾಷ್ಟ್ರೀಯ ನಿರ್ದೇಶಕರು ಅಲ್ಲಿದ್ದರು ಮತ್ತು ಅವರು ತುಂಬಾ ಸೌಜನ್ಯದಿಂದ ಶುಭ ಹಾರೈಸಿದರು.
ʻʻಭಾರತೀಯರೊಬ್ಬರು ಜಾಗತಿಕ ಸ್ಪರ್ಧೆಯನ್ನು ಗೆದ್ದು ಸುಮಾರು ಒಂದು ದಶಕ ಕಳೆದಿದೆ. ಭಾರತಕ್ಕೆ ಯಾವುದೇ ಅವಕಾಶವಿಲ್ಲʼʼ ಎಂದು ತಾಪ್ಸಿ ರಾಷ್ಟ್ರೀಯ ನಿರ್ದೇಶಕರಿಗೆ ತಿಳಿಸಿರುವುದು ಹೇಳಿಕೊಂಡಿದ್ದಾರೆ. ʻʻನಾನು ಈ ರೀತಿ ಅವರಿಗೆ ಏಕೆ ಹೇಳಿದೆ ಎಂದು ನನಗೆ ತಿಳಿದಿಲ್ಲ. ಆದರೆ ನನಗೆ ಆ ಸಮಯಕ್ಕೆ ಧೈರ್ಯ ಬಂದಿತ್ತುʼʼಎಂದು ಹೇಳಿಕೊಂಡಿದ್ದಾರೆ.
South Cinema
Bhola Movie: ಅಜಯ್ ದೇವಗನ್ ಅಭಿನಯದ ʻಭೋಲಾʼ ಚಿತ್ರ ಮೊದಲ ದಿನದ ಗಳಿಕೆ ಎಷ್ಟು?
ಭೋಲಾ (Bhola Movie) ಸಿನಿಮಾ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಗ್ರಹಣೆ ಮಾಡಬಹುದು ಎಂತಲೂ ವರದಿಯಾಗಿದೆ. ಐಪಿಎಲ್ ಪ್ರಾರಂಭವಾಗುವುದರಿಂದ ಸಿನಿಮಾ ಗಳಿಕೆಗೆ ತೊಂದರೆಯಾಗಬಹುದೆಂಬುದೂ ಸಹ ಹೇಳಲಾಗುತ್ತಿದೆ.
ಬೆಂಗಳೂರು: ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಟಬು ಅಭಿನಯದ ʻಭೋಲಾʼ ಸಿನಿಮಾ (Bhola Movie) ಮಾರ್ಚ್ 30ರಂದು ರಾಮ ನವಮಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆ್ಯಕ್ಷನ್-ಥ್ರಿಲ್ಲರ್ ಭೋಲಾ ಸಿನಿಮಾವನ್ನು ಅಜಯ್ ದೇವಗನ್ ನಿರ್ದೇಶಿಸಿದ್ದಾರೆ. ಇದು 2019ರ ತಮಿಳು ಚಿತ್ರ ಕೈದಿಯ ರಿಮೇಕ್ ಆಗಿದೆ. ಮೊದಲ ದಿನ ಭೋಲಾ ಸಿನಿಮಾ 11.20 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೀಗೆ ಬರೆದಿದ್ದಾರೆ, “ಭೋಲಾ ಮೊದಲನೇ ದಿನದಂದು 11.20 ಕೋಟಿ ರೂ. ಕಲೆಕ್ಷನ್ ಮಾಡಿದೆʼʼಎಂದು ಬರೆದುಕೊಂಡಿದ್ದಾರೆ. ಭೋಲಾ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದ್ದರೂ ಸಹ ದೃಶ್ಯಂ ಸಿನಿಮಾದಷ್ಟು ಕಲೆಕ್ಷನ್ ಮಾಡಿಲ್ಲ.ಆದರೆ ಭೋಲಾ ಸಿನಿಮಾ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಗ್ರಹಣೆ ಮಾಡಬಹುದು ಎಂತಲೂ ವರದಿಯಾಗಿದೆ. ಐಪಿಎಲ್ ಪ್ರಾರಂಭವಾಗುವುದರಿಂದ ಸಿನಿಮಾ ಗಳಿಕೆಗೆ ತೊಂದರೆಯಾಗಬಹುದೆಂಬುದೂ ಸಹ ಹೇಳಲಾಗುತ್ತಿದೆ.
ಬಾಲಿವುಡ್ ಹಂಗಾಮಾ ಪ್ರಕಾರ, ಮೊದಲ ದಿನದಲ್ಲಿ ಪಠಾಣ್ 57 ಕೋಟಿ ರೂ. ಗಳಿಕೆ ಕಂಡಿತ್ತು. ಜೂಥಿ ಮೈನ್ ಮಕ್ಕರ್ 15.73 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇವೆರಡು ಸಿನಿಮಾಗಳ ಬಳಿಕ ಭೋಲಾ ಈ ವರ್ಷದ ಮೊದಲನೇ ದಿನ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ. ಅಜಯ್ ದೇವಗನ್ ಅವರ ದೃಶ್ಯಂ-2 ಸಿನಿಮಾ 15.38 ಕೋಟಿ ರೂ. ಮೂಲಕ ಪ್ರಬಲ ಓಪನಿಂಗ್ ಹೊಂದಿತ್ತು. ಅಂತಿಮವಾಗಿ 240.54 ಕೋಟಿ ರೂ. ಬಾಚಿಕೊಂಡಿತು. ದೃಶ್ಯಂ 2 ಮತ್ತು ಭೋಲಾ ಎರಡೂ ಮಲಯಾಳಂ ಮತ್ತು ತಮಿಳು ಚಿತ್ರಗಳ ರಿಮೇಕ್‌ಗಳಾಗಿವೆ. ಭೋಲಾ 2019ರಲ್ಲಿ ಬಿಡುಗಡೆಯಾದ ಲೋಕೇಶ್ ಕನಕರಾಜ್ ಅವರ ಕೈದಿಯ ರಿಮೇಕ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಶೆಹಜಾದಾ ಮತ್ತು ಸೆಲ್ಫಿ ಕೂಡ ರೀಮೇಕ್ ಆಗಿದ್ದರೂ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆ.
ಇದನ್ನೂ ಓದಿ: Bholaa trailer: ಅಜಯ್ ದೇವಗನ್ ನಟನೆ, ನಿರ್ದೇಶನದ ʻಭೋಲಾʼ ಟ್ರೈಲರ್ ಔಟ್
ʻಭೋಲಾʼ ಸಿನಿಮಾ 2019ರಲ್ಲಿ ಬಿಡುಗಡೆಯಾದ ತಮಿಳಿನ ʻಕೈದಿʼ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಬು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೋಲಾ ಚಿತ್ರವು ಅಜಯ್ ದೇವಗನ್ ಮತ್ತು ನಟಿ ಟಬು ಅವರ ಒಂಬತ್ತನೇ ಚಿತ್ರವಾಗಿದೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ 2ದಲ್ಲಿ ಕಾಣಿಸಿಕೊಂಡಿದ್ದಾರೆ .ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ.
South Cinema
Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಕಾರ್ಯಕ್ರಮದಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ನಟಿ ಕಾರ್ಯಕ್ರಮಕ್ಕೆ ಆಗಮಿಸಿದ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಬ್ರ್ಯಾಂಡ್‌ವೊಂದರ ಕಾರ್ಯಕ್ರಮದಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ನಟಿ ಕಾರ್ಯಕ್ರಮಕ್ಕೆ ಆಗಮಿಸಿದ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನನ್ಯಾ ತನ್ನ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಫೋಟೊಶೂಟ್ ಸಮಯದಲ್ಲಿ ಕೆಲವು ಮಾಧ್ಯಮಗಳು ಅವರನ್ನು ‘ಎಸಿಪಿʼ (ಅನನ್ಯಾ ಚಂಕಿ ಪಾಂಡೆ)’ ಎಂದು ಕರೆದಾಗ, ನಟಿ ಮುದ್ದಾಗಿ ದಯವಿಟ್ಟು ನನ್ನನ್ನು ಎಸಿಪಿ ಎಂದು ಕರೆಯಬೇಡಿʼʼ ಎಂದು ಧನ್ಯವಾದ ಸೂಚಿಸಿದ್ದಾರೆ.
ವಿಡಿಯೊ ನೋಡಿದ ಅಭಿಮಾನಿಗಳು ನಟಿಯ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು “ಅನನ್ಯಾ ಅವರ ಶೈಲಿಯು ಯಾವಾಗಲೂ ತಾಜಾ ಮತ್ತು ವಿಶಿಷ್ಟವಾಗಿರುತ್ತದೆ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು “ಈ ಬಣ್ಣ ಅವರಿಗೆ ತುಂಬ ಸೂಕ್ತವಾಗಿದೆ,” ಎಂದಿದ್ದಾರೆ. ಮತ್ತೊಬ್ಬರು ʻʻಗೊಂಬೆಯ ರೀತಿ ಕಾಣುತ್ತಿದ್ದಾರೆ,” ಎಂದು ಕಮೆಂಟ್ ಮಾಡಿದ್ದಾರೆ.
ಅನನ್ಯಾ ಹೊರತುಪಡಿಸಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಅಥಿಯಾ ಶೆಟ್ಟಿ, ಶ್ವೇತಾ ಬಚ್ಚನ್ ನಂದಾ, ಸೋನಮ್ ಕಪೂರ್, ರೇಖಾ, ಖುಷಿ ಕಪೂರ್ ಮತ್ತು ಅಂಬಾನಿಗಳಂತಹ ಹಲವಾರು ಸೆಲೆಬ್ರಿಟಿಗಳು ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಅನುಷ್ಕಾ ಹಳದಿ ಡ್ರೆಸ್ ಧರಿಸಿ ಲೇಡಿ ಡಿಯೊರ್ ಮಿನಿ ಬ್ಯಾಗ್ ಹಿಡಿದುಕೊಂಡಿದ್ದರು. ವಿರಾಟ್ ಖಾಕಿ ಸೂಟ್, ಬಿಳಿ ಶರ್ಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ; Ananya Panday: ಸಿಗರೇಟ್ ಸೇದುತ್ತಿರುವ ಅನನ್ಯಾ ಪಾಂಡೆ: ಸ್ಮೋಕರ್ ಎಂದು ಟ್ರೋಲ್ ಮಾಡಿದ ನೆಟ್ಟಿಗರು
ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ವೃತ್ತಿಪರ ಮುಂಭಾಗದಲ್ಲಿ, ಅನನ್ಯಾ ಮುಂದೆ ರಾಜ್ ಶಾಂಡಿಲ್ಯ ಅವರ ನಿರ್ದೇಶನದ ʻಡ್ರೀಮ್ ಗರ್ಲ್ 2ʼ ನಲ್ಲಿ ಪರೇಶ್ ರಾವಲ್ ಮತ್ತು ಆಯುಷ್ಮಾನ್ ಖುರಾನಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿದ್ದು, ಪ್ರಸ್ತುತ ಅದರ ನಿರ್ಮಾಣ ಹಂತದಲ್ಲಿದೆ. ಈ ವರ್ಷ ಜುಲೈ 7ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಲ್ಲದೆ, ಅವರು ಅರ್ಜುನ್ ವರೈನ್ ಸಿಂಗ್ ಅವರ ʻಖೋ ಗಯೇ ಹಮ್ ಕಹಾನ್ʼ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆದರ್ಶ್ ಗೌರವ್ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Shreya Dhanwanthary: ಸೆಕ್ಸಿ ಫೋಟೊಶೂಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಶ್ರೇಯಾ ಧನ್ವಂತರಿ
ಶ್ರೇಯಾ ಧನ್ವಂತರಿ (Shreya Dhanwanthary) ಅವರು ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದು, ಮೊನೊಕ್ರೋಮ್ ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಬೆಂಗಳೂರು: ಸ್ಕ್ಯಾಮ್ 1992 ಮತ್ತು ದಿ ಫ್ಯಾಮಿಲಿ ಮ್ಯಾನ್‌ನಲ್ಲಿನ ಪಾತ್ರಗಳಿಗೆ ಜನಪ್ರಿಯವಾಗಿರುವ ಶ್ರೇಯಾ ಧನ್ವಂತರಿ (Shreya Dhanwanthary) ಇತ್ತೀಚೆಗೆ ಹಾಟ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬ್ರಾಲೆಸ್ ಚಿತ್ರಗಳಲ್ಲಿ ನಟಿ ಸೆಕ್ಸಿಯಾಗಿ ಕಂಡಿದ್ದಾರೆ.
ಶ್ರೇಯಾ ಧನ್ವಂತರಿ ಅವರು ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದು, ಮೊನೊಕ್ರೋಮ್ ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲಸದ ಮುಂಭಾಗದಲ್ಲಿ, ಶ್ರೇಯಾ ಧನ್ವಂತರಿ ವೈ ಚೀಟ್ ಇಂಡಿಯಾ?, ಲೂಪ್ ಲಪೇಟಾ ಹೀಗೆ ಹಲವು ಚಿತ್ರಗಳ ಭಾಗವಾಗಿದ್ದಾರೆ. ಮುಂದೆ, ಅವರು ಸನ್ನಿ ಡಿಯೋಲ್ ಮತ್ತು ದುಲ್ಕರ್ ಸಲ್ಮಾನ್ ಅವರೊಂದಿಗೆ ಚುಪ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ನವಾಜುದ್ದೀನ್ ಸಿದ್ದಿಕಿ ಜತೆಗೂ ಸಿನಿಮಾ ಹೊಂದಿದ್ದಾರೆ. ಮುಂಬೈ ಡೈರೀಸ್: 26/11ನಲ್ಲಿ ಶ್ರೇಯಾ ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra : ಬಾಲಿವುಡ್‌ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ಶ್ರೇಯಾ 2009ರ ತೆಲುಗು ಚಲನಚಿತ್ರ ಜೋಶ್‌ನೊಂದಿಗೆ ತನ್ನ ಪದಾರ್ಪಣೆ ಮಾಡಿದರು ಸ್ನೇಹ ಗೀತಂ, ವೈ ಚೀಟ್ ಇಂಡಿಯಾ, ಲೂಪ್ ಲಪೇಟಾ ಮತ್ತು ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತು.
ದೇಶ
Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?
Raghav-Parineeti: ಆಪ್ ನಾಯಕ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳಿಗೆ ವಾರದಲ್ಲಿಯೇ ನಡೆದ ಮೂರನೇ ಭೇಟಿಯು ಪುಷ್ಟಿ ನೀಡಿದೆ.
ನವದೆಹಲಿ: ಪಂಜಾಬ್ ಆಪ್ ನಾಯಕ, ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Raghav-Parineeti) ಅವರು ಕೆಲ ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಇಬ್ಬರೂ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಕಾರಣ ಇಬ್ಬರೂ ವದಂತಿಗಳಿಗೆ ಆಹಾರವಾಗಿದ್ದರು. ಈ ಕುರಿತು ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ರಾಘವ್ ಚಡ್ಡಾ ಹಾರಿಕೆಯ ಉತ್ತರ ನೀಡಿದ್ದರು. ಈಗ ಜೋಡಿಯು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ವಾರದಲ್ಲಿ ಮೂರನೇ ಭೇಟಿಯಾಗಿದೆ. ಹಾಗಾಗಿ, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂಬ ಮಾತಿಗೆ ಹಚ್ಚಿನ ಪುಷ್ಟಿ ಬಂದಂತಾಗಿದೆ.
ಮಾರ್ಚ್ 29ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಿಣೀತಿ ಚೋಪ್ರಾ ಅವರನ್ನು ಪಿಕ್ ಮಾಡಲು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ರಾಘವ್ ಚಡ್ಡಾ ಕಾರಿನಲ್ಲಿಯೇ ಪರಿಣೀತಿ ಚೋಪ್ರಾ ಅವರು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡ ಫೋಟೊಗಳು ಪಾಪರಾಜಿಗಳಿಗೆ ಸಿಕ್ಕಿದ್ದು, ಫೋಟೊಗಳು ವೈರಲ್ ಆಗಿವೆ. ಅಲ್ಲದೆ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಮತ್ತೆ ಹೇಳಲು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಮಾಧ್ಯಮದವರು ಇಬ್ಬರನ್ನೂ ಮಾತನಾಡಿಸಲು ಯತ್ನಿಸಿದರಾದರೂ, ಜೋಡಿಯು ಪ್ರತಿಕ್ರಿಯಿಸದೆ ತೆರಳಿದೆ.
ಏರ್‌ಪೋರ್ಟ್‌ನಲ್ಲಿ ಜೋಡಿ ಹಕ್ಕಿ
ಒಟ್ಟಿಗೆ ಊಟ, ಒಂದೇ ಕಾರಿನಲ್ಲಿ ತಿರುಗಾಟ
ಕಳೆದ ಒಂದು ವಾರದಲ್ಲಿ ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಮೂರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 22ರಂದು ರಾಘವ್ ಹಾಗೂ ಪರಿಣೀತಿ ಅವರು ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಹೋಟೆಲ್ ಪ್ರವೇಶಿಸುವ ಹಾಗೂ ಹೋಟೆಲ್‌ನಿಂದ ಹೊರಬರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ. ಇದಾದ ಮರುದಿನವೇ (ಮಾರ್ಚ್ 23) ಇಬ್ಬರೂ ಮತ್ತೆ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಪದೇಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್ ಕುರಿತು ಮಾತುಗಳು ಕೇಳಿಬರುತ್ತಿವೆ.
ಹಾರಿಕೆಯ ಉತ್ತರ ನೀಡಿದ್ದ ಚಡ್ಡಾ
ಪರಿಣೀತಿ ಜತೆಗಿನ ಡೇಟಂಗ್ ಕುರಿತು ಇತ್ತೀಚೆಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಲೇ ನಾಚಿ ನೀರಾಗಿದ್ದ ರಾಘವ್ ಚಡ್ಡಾ, “ನನಗೆ ಪರಿಣೀತಿ ಬಗ್ಗೆ ಅಲ್ಲ, ರಾಜನೀತಿ ಬಗ್ಗೆ ಪ್ರಶ್ನೆ ಕೇಳಿ” ಎಂದು ನಕ್ಕಿದ್ದರು. ಹಾಗೆಯೇ, ನೀವು ಮದುವೆ ಆಗುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, “ನಾನು ಮದುವೆಯಾಗುವಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.
ಪಂಜಾಬ್ ಆಪ್ ನಾಯಕ, ರಾಜ್ಯಸಭೆಯ ಯುವ ಸದಸ್ಯರಾಗಿರುವ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗಾಗಿ, ಇಬ್ಬರಿಗೂ ಮೊದಲಿನಿಂದಲೂ ಪರಿಚಯ ಇದೆ ಎಂದು ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಾಗಿ, ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Raghav Chadha: ಆಪ್ ನಾಯಕ ರಾಘವ್ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ