Site icon Vistara News

Ratan Tata | ರತನ್‌ ಟಾಟಾ ಬಯೋಪಿಕ್‌ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಸುಧಾ ಕೊಂಗರಾ

Ratan Tata (Film)

ಬೆಂಗಳೂರು: ʻಸೂರರೈ ಪೊಟ್ರುʼ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರಾ ಅವರು ರತನ್ ಟಾಟಾ ಅವರ ಕಥೆಯನ್ನು ತೆರೆ ಮೇಲೆ ತರಲಿದ್ದಾರೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್‌ ಕೆಲಸಗಳು ಪ್ರಾರಂಭಗೊಂಡಿದ್ದು ಚಿತ್ರಕ್ಕೆ ಅಭಿಷೇಕ್‌ ಬಚ್ಚನ್‌ ಅಥವಾ ತಮಿಳು ನಟ ಸೂರ್ಯ ಅವರು ರತನ್ ಟಾಟಾ (Ratan Tata) ಪಾತ್ರವನ್ನು ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ.

ರಾಷ್ಟ್ರ ಪ್ರಶಸ್ತಿಯನ್ನು ಪಡೆದ ʻಸೂರರೈ ಪೊಟ್ರುʼ ಸಿನಿಮಾ ಇದೀಗ ಹಿಂದಿ ರಿಮೇಕ್‌ ಆಗುತ್ತಿದೆ. ಹಿಂದಿಯಲ್ಲಿ ಅಕ್ಷಯ್‌ ಕುಮಾರ್‌ ನಟಿಸುತ್ತಿದ್ದು ಡೈರೆಕ್ಷನ್‌ ಮಾಡುತ್ತಿದ್ದಾರೆ ಸುಧಾ ಕೊಂಗರಾ. ಇದರ ಬೆನ್ನಲ್ಲೆ ರತನ್ ಟಾಟಾ ಅವರ ಬಯೋಪಿಕ್ ಮಾಡಲು ಹೊರಟ್ಟಿದ್ದಾರೆ. ಹೆಸರಾಂತ ಉದ್ಯಮಿ ಆಗಿರುವ ರತನ್‌ ಟಾಟಾ ಅವರ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಈ ಸಿನಿಮಾದ ಮೂಲಕ ಹೇಳುವ ಉದ್ದೇಶವಿದೆ ಎಂದು ತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Ratn Tata | ಹಿರಿಯ ನಾಗರಿಕರ ಆರೈಕೆಯ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ ಮಾಡಿದ್ದೇಕೆ?!

2023ರ ನವೆಂಬರ್ ವೇಳೆ ಶೂಟಿಂಗ್ ಆರಂಭಿಸುವ ಕುರಿತು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ರತನ್‌ ಟಾಟಾ ಆಗಿ ಯಾರು ಅಭಿನಯಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ | Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

Exit mobile version