Site icon Vistara News

Uorfi Javed: ಉಫ್‌! 100 ಕೆ.ಜಿ. ತೂಕದ ಗೌನ್ ಧರಿಸಿದ ಉರ್ಫಿ ಜಾವೇದ್‌; ವಿಡಿಯೊ ಇಲ್ಲಿದೆ

Uorfi Javed

Uorfi Javed

ಮುಂಬೈ: ಯಾರೂ ಊಹಿಸದ ರೀತಿಯ ಚಿತ್ರ ವಿಚಿತ್ರ ಉಡುಗೆ ತೊಡುವ ಮೂಲಕ ಬಾಲಿವುಡ್‌, ಕಿರುತೆರೆ ನಟಿ ಉರ್ಫಿ ಜಾವೇದ್‌ (Uorfi Javed) ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ  ಎದೆಯ ಮೇಲೆ ಫ್ಯಾನ್ ಅಳವಡಿಸಿಕೊಂಡ ಉಡುಗೆ ತೊಟ್ಟು ಪೋಸ್‌ ನೀಡಿದ್ದರು. ಇದೀಗ ಮತ್ತೊಂದು ವಿಚಿತ್ರ ಡ್ರೆಸ್‌ ತೊಟ್ಟು ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಬರೋಬ್ಬರಿ 100 ಕೆ.ಜಿ. ತೂಕದ ಗೌನ್ ಧರಿಸಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ (Viral Video) ಆಗಿದೆ.

ವಿಡಿಯೊದಲ್ಲಿ ಉರ್ಫಿ ಜಾವೇದ್‌ ತನ್ನ ಭಾರವಾದ ನೀಲಿ ಬಣ್ಣದ ಗೌನ್‌ ಧರಿಸಿ ವಾಹನದಿಂದ ಇಳಿದು ಬರುತ್ತಿರುವುದು ಕಂಡು ಬಂದಿದೆ. ತಂಡದ ಸದಸ್ಯರ ಸಹಾಯದಿಂದ ಅವರು ವಾಹನದಿಂದ ಕೆಳಗೆ ಇಳಿಯುತ್ತಾರೆ. ಈ ಉಡುಪನ್ನು ತಯಾರಿಸಲು 2-3 ತಿಂಗಳು ಬೇಕಾಯಿತು. ಮಾತ್ರವಲ್ಲ ಇದನ್ನು ತಯಾರಿಸಲು 10-11 ಜನರು ಶ್ರಮ ವಹಿಸಿದ್ದರು ಎಂದು ಉರ್ಫಿ ಜಾವೇದ್‌ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಉರ್ಫಿ ಕಾರ್ಯಕ್ರಮವೊಂದರಲ್ಲಿ ಹೊಸ ಅವತಾರದಲ್ಲಿ ಕಂಡು ಬಂದಿದ್ದರು. ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎಂದಿದ್ದರು.

ಕೆಲವು ದಿನಗಳ ಹಿಂದೆ ಉರ್ಫಿ ಜಾವೇದ್‌ ತನ್ನ ಹೊಸ ಶೋ ʼಫಾಲೋ ಕರ್ ಲೋ ಯಾರ್ʼ ಅನ್ನು ಘೋಷಿಸಿದ್ದರು. ಇದು ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ವಿಶೇಷ ಎಂದರೆ ಇದು ಅವರದ್ದೇ ಜೀವನವನ್ನು ಆಧರಿಸಿದೆ. ಇದನ್ನು ಸಂದೀಪ್ ಕುಕ್ರೇಜಾ ನಿರ್ದೇಶಿಸಿದ್ದಾರೆ.

ಬಾಲಿವುಡ್‌ಗೆ ಪಾದಾರ್ಪಣೆ

ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಏಪ್ರಿಲ್ 19ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿದೆ. ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿದೆ. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ಎದೆಯ ಮೇಲೆ ಫ್ಯಾನ್​ ಅಳವಡಿಕೆ: ಬೇಸಿಗೆಗೆ ಹೊಸ ಡ್ರೆಸ್‌ ಪರಿಚಯಿಸಿದ ಉರ್ಫಿ ಜಾವೇದ್‌!

Exit mobile version