ಬೆಂಗಳೂರು: ಸೋಷಿಯಲ್ ಮೀಡಿಯಾ ಸೆನ್ಸೇಷನ್, ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed ) ಇದೀಗ ಮತ್ತೆ ಹೊಸ ಅವತಾರ ತಾಳಿದ್ದಾರೆ. ಬ್ಯಾಂಡೇಜ್ ರೋಪ್ಸ್, ರೇಜರ್ ಬ್ಲೇಡ್‌ಗಳವರೆಗೆ ಹಲವು ವಸ್ತುಗಳಿಂದ ಆಗಾಗ ಕ್ರಿಯೇಟಿವ್ ಐಡಿಯಾಗಳನ್ನು ಹೊತ್ತು ತರುವ ಉರ್ಫಿ ಈ ಬಾರಿ ಮತ್ತೆ ಹೊಸ ಫ್ಯಾಷನ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಎಷ್ಟೇ ಟ್ರೋಲ್ ಆದರೂ, ನೆಟ್ಟಿಗರು ಅಪಹಾಸ್ಯ ಮಾಡಿದರೂ, ಅತ್ಯಾಚಾರ ಮತ್ತು ಬೆದರಿಕೆಗಳನ್ನು ಹಾಕಿದರೂ, ನಟಿಯ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದರೂ ಉರ್ಫಿ ಕ್ಯಾರೆ ಎಂದಿಲ್ಲ. ಇದೀಗ ಮತ್ತೆ ತಮ್ಮ ಬೋಲ್ಡ್ ಲುಕ್‌ನೊಂದಿಗೆ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಬಾರಿ ಉರ್ಫಿ ಹೊಸ ಬಗೆಯ ಸೈಟಲ್‌ಗೆ ಸಹಾಯ ಮಾಡಿದ್ದಕ್ಕಾಗಿ ತನ್ನ ಸ್ಟೈಲಿಸ್ಟ್ ಶ್ವೇತಾ ಮಹಾದಿಕ್‌ಗೆ ಧನ್ಯವಾದ ಸೂಚಿಸಿದ್ದಾರೆ.
ಹೊಸ ವಿಡಿಯೊ ಮತ್ತು ಫೋಟೊಗಳನ್ನು ಉರ್ಫಿ ಹಂಚಿಕೊಂಡಿದ್ದಾರೆ. ಪ್ಯಾಸ್ಟಿಗಳೊಂದಿಗೆ ನಟಿ ಎದೆಯ ಭಾಗವನ್ನು ಮುಚ್ಚಿಕೊಂಡಿದ್ದಾರೆ. ಕಣ್ಣಿನ ರೀತಿಯ ಪ್ರಿಂಟೆಡ್ ಕೂಡ ಇದೆ. ಈ ವಿಡಿಯೊಗೆ ʻʻನನ್ನ ಹುಚ್ಚು ಕಲ್ಪನೆಗಳಿಗೆ ಸಹಾಯ ಮಾಡಿದ್ದಕ್ಕಾಗಿ ಸ್ಟೈಲಿಸ್ಟ್ ಶ್ವೇತಾ ಮಹಾದಿಕ್ ಅವರಿಗೆ ಧನ್ಯವಾದ, ನಮ್ಮಿಬ್ಬರ ಮನಸ್ಸು ಒಂದೇ ರೀತಿʼʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂತಹ ವಿಚಿತ್ರವಾದ ಫ್ಯಾಷನ್ ಆಯ್ಕೆಗಾಗಿ ನೆಟಿಜನ್‌ಗಳು ಟ್ರೋಲ್ ಮಾಡಿದರೆ, ಕೆಲವು ಅಭಿಮಾನಿಗಳು ಉರ್ಫಿ ಅವರ ಕ್ರಿಯೇಟಿವಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Uorfi Javed : ಟೊಮೆಟೋ ಸಿಗದ ಕಾಲದಲ್ಲಿ ಅದನ್ನೇ ಓಲೆ ಮಾಡಿಕೊಂಡ ಉರ್ಫಿ! ನೆಟ್ಟಿಗರು ಏನಂದಿದ್ದಾರೆ ನೋಡಿ!
ನೆಟ್ಟಿಗರೊಬ್ಬರು ʻʻಬಿಗ್ ಬಾಸ್ ಕಣ್ಣುಗಳನ್ನು ಅಕ್ಕ ಉರ್ಫಿ ಕದ್ದು ಬಿಟ್ಟಿದ್ದಾರೆʼʼಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ʻʻಉರ್ಫಿಗೆ ಇದೀಗ ನಾಲ್ಕು ಕಣ್ಣುಗಳುʼʼಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಈ ಬಟ್ಟೆಗಳನ್ನು ಧರಿಸಲು ಧೈರ್ಯವಿರುವ ಭಾರತದ ಮೊದಲ ಸೆಲೆಬ್ರಿಟಿ” ಎಂದು ಬರೆದಿದ್ದಾರೆ.
ಹಿಂದಿಯ ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್ ಅಲ್ಲಿಂದ ಹೊರ ಬರುತ್ತಿದ್ದಂತೆ ವಿಭಿನ್ನ ವಿಚಿತ್ರ ಡ್ರೆಸ್‌ಗಳ ಮೂಲಕವೇ ಗಮನ ಸೆಳೆಯಲು ಆರಂಭಿಸಿದರು. ಪ್ರತಿದಿನ ಒಂದಲ್ಲಾ ಒಂದು ವಿಚಿತ್ರ ಅವತಾರದೊಂದಿಗೆ ಉರ್ಫಿ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅವಕಾಶಗಳಿಲ್ಲ. ಇಷ್ಟಾದರೂ ಉರ್ಫಿ ಜಾವೇದ್ ತಮ್ಮ ಕಾಸ್ಟ್ಯೂಮ್‌ಗಳಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ.