ಬೆಂಗಳೂರು: ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಮಾರ್ಚ್ 17ರಂದು ಮುಂಬೈನಲ್ಲಿ ನಡೆದ ಏಸ್ ಡಿಸೈನರ್ ಜೋಡಿ ಶಾಂತಾನು ಮತ್ತು ನಿಖಿಲ್ ಅವರ ಸ್ಟೋರ್ ಲಾಂಚ್ (Shantanu and Nikhil’s store )ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತನ್ನ ಕಪ್ಪು ಉಡುಗೆಯಿಂದ ಮತ್ತೆ ಸುದ್ದಿಯಾಗಿದ್ದಾರೆ ಉರ್ಫಿ. ಬೆಜೆವೆಲ್ಡ್ ಬೆಲ್ಟ್ ಹಾಗೂ ಧೋತಿಯಂತಹ ಸ್ಕರ್ಟ್ ಜತೆಗೆ ಕಪ್ಪು ದುಪಟ್ಟಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಉರ್ಫಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ʻಕಡಿಮೆ ಬಟ್ಟೆಗಳನ್ನು ಧರಿಸಿ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಶೈಲಿಯಿಲ್ಲʼʼ ಎಂದು ಬರೆದರೆ ಇನ್ನೊಬ್ಬರು ʻʻನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಮೆರಿಕದಲ್ಲಿ ಸಹ ಮಹಿಳೆಯರು ಅಂತಹ ಬಟ್ಟೆಗಳನ್ನು ಧರಿಸಿ ಬೀದಿಗಳಲ್ಲಿ ತಿರುಗಾಡುವುದಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರುʻʻಬಟ್ಟೆಯೇ ನಿನ್ನನ್ನು ನೋಡಿ ನಾಚಿಕೆ ಪಡುತ್ತೆ, ನಿನಗೆ ನಾಚಿಕೆ ಇಲ್ಲವಾʼʼಎಂದು ಬರೆದುಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರು ತನಗೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ರಾಜಕಾರಣಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸುದ್ದಿಯಲ್ಲಿದ್ದರು. ತನ್ನ ಬಟ್ಟೆಯಿಂದಾಗಿ ಉರ್ಫಿ ಜಾವೇದ್ ಇಲ್ಲಿಯವರೆಗೆ ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Urfi Javed: ಇಸ್ಲಾಂ ಧರ್ಮವನ್ನು ಅವಮಾನಿಸುತ್ತಿರುವ ಉರ್ಫಿಗೆ ಸ್ಮಶಾನದಲ್ಲೂ ಜಾಗ ಕೊಡಲ್ಲ: ಫೈಜಾನ್ ಅನ್ಸಾರಿ
ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಉರ್ಫಿ ಕಂಡದ್ದು
ಉರ್ಫಿ ವಿರುದ್ಧ ನಟ ಫೈಜಾನ್ ಅನ್ಸಾರಿ ಶಾಕಿಂಗ್ ಹೇಳಿಕೆ
ಕೆಲ ದಿನಗಳಿಂದ ಉರ್ಫಿ ಜಾವೇದ್ ವಿರುದ್ಧ ಹೋರಾಟ ನಡೆಸುತ್ತಿರುವ ನಟ ಫೈಜಾನ್, “ಧರ್ಮವನ್ನು ಪದೇಪದೆ ಅವಮಾನಿಸಿದ್ದಾರೆ. ಮುಸ್ಲಿಂ ಹುಡುಗಿಯೊಬ್ಬಳು ಬೆತ್ತಲೆಯಾಗಿ ತಿರುಗಾಡುತ್ತಿದ್ದಾಳೆ ಎಂದು ಯಾರಾದರೂ ಹೇಳಿದಾಗ ನನಗೆ ತುಂಬಾ ನಾಚಿಕೆಯಾಗುತ್ತದೆ. ಉರ್ಫಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ, ಆದ್ದರಿಂದ ಅವರನ್ನು ಯಾವುದೇ ಸ್ಮಶಾನದಲ್ಲಿ ಸಮಾಧಿ ಮಾಡಲು ಬಿಡಬಾರದು ಎಂದು ಮನವಿ ಮಾಡಿದ್ದೇನೆʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Urfi Javed: ಉರ್ಫಿ ಹೊಸ ಮ್ಯಾಗಜಿನ್ ಫೋಟೊಶೂಟ್ ವೈರಲ್: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಶ್ರಾಫ್ ಹೇಳಿದ್ದೇನು?
ಉರ್ಫಿ ಸತ್ತಾಗ ಸ್ಮಶಾನದಲ್ಲಿ ಜಾಗವನ್ನೂ ಕೊಡುವುದಿಲ್ಲ ಎಂದು ನಟ ಹೇಳಿದ್ದಾರೆ. ʻʻಆಕೆ ತೊಟ್ಟಿರುವ ಬಟ್ಟೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಕೆಣಕುತ್ತಿವೆ. ಅವಳು ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರೆ, ಮೊದಲು ಅವಳ ಹೆಸರನ್ನು ಬದಲಿಸಿಕೊಳ್ಳಬೇಕು. ಮುಸ್ಲಿಂ ಹುಡುಗಿ ಇಂತಹ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಯಾರಾದರೂ ಹೇಳಿದಾಗ ನಮಗೆ ತುಂಬಾ ಬೇಸರವಾಗುತ್ತದೆ. ಫತ್ವಾ ಹೊರಡಿಸಿದ್ದಕ್ಕಾಗಿ ದೆಹಲಿಯ ಮೌಲಾನಾ ಮತ್ತು ಮುಂಬೈನ ಸಿಟಿ ಖಾಜಿಗೂ ದೂರು ನೀಡಿದ್ದೇನೆ ಎಂದು ಫೈಜಾನ್ ಅನ್ಸಾರಿʼʼ ತಿಳಿಸಿದ್ದಾರೆ.