ಬಾಲಿವುಡ್
Urfi Javed: ಬಟ್ಟೆಯೇ ನಿನ್ನನ್ನು ನೋಡಿ ನಾಚಿಕೆ ಪಡುತ್ತೆ ಅಂದ್ರು ನೆಟ್ಟಿಗರು; ಟ್ರೋಲ್‌ಗೆ ಗುರಿಯಾದ ಉರ್ಫಿ
Urfi Javed: ಉರ್ಫಿ ಜಾವೇದ್ ಅವರು ತನಗೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ರಾಜಕಾರಣಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸುದ್ದಿಯಲ್ಲಿದ್ದರು. ತನ್ನ ಬಟ್ಟೆಯಿಂದಾಗಿ ಉರ್ಫಿ ಜಾವೇದ್ ಇಲ್ಲಿಯವರೆಗೆ ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಮತ್ತೆ ಅವರು ಬಟ್ಟೆ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.
ಬೆಂಗಳೂರು: ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಮಾರ್ಚ್ 17ರಂದು ಮುಂಬೈನಲ್ಲಿ ನಡೆದ ಏಸ್ ಡಿಸೈನರ್ ಜೋಡಿ ಶಾಂತಾನು ಮತ್ತು ನಿಖಿಲ್ ಅವರ ಸ್ಟೋರ್ ಲಾಂಚ್ (Shantanu and Nikhil’s store )ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತನ್ನ ಕಪ್ಪು ಉಡುಗೆಯಿಂದ ಮತ್ತೆ ಸುದ್ದಿಯಾಗಿದ್ದಾರೆ ಉರ್ಫಿ. ಬೆಜೆವೆಲ್ಡ್ ಬೆಲ್ಟ್ ಹಾಗೂ ಧೋತಿಯಂತಹ ಸ್ಕರ್ಟ್ ಜತೆಗೆ ಕಪ್ಪು ದುಪಟ್ಟಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಉರ್ಫಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ʻಕಡಿಮೆ ಬಟ್ಟೆಗಳನ್ನು ಧರಿಸಿ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಶೈಲಿಯಿಲ್ಲʼʼ ಎಂದು ಬರೆದರೆ ಇನ್ನೊಬ್ಬರು ʻʻನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಮೆರಿಕದಲ್ಲಿ ಸಹ ಮಹಿಳೆಯರು ಅಂತಹ ಬಟ್ಟೆಗಳನ್ನು ಧರಿಸಿ ಬೀದಿಗಳಲ್ಲಿ ತಿರುಗಾಡುವುದಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರುʻʻಬಟ್ಟೆಯೇ ನಿನ್ನನ್ನು ನೋಡಿ ನಾಚಿಕೆ ಪಡುತ್ತೆ, ನಿನಗೆ ನಾಚಿಕೆ ಇಲ್ಲವಾʼʼಎಂದು ಬರೆದುಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರು ತನಗೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ರಾಜಕಾರಣಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸುದ್ದಿಯಲ್ಲಿದ್ದರು. ತನ್ನ ಬಟ್ಟೆಯಿಂದಾಗಿ ಉರ್ಫಿ ಜಾವೇದ್ ಇಲ್ಲಿಯವರೆಗೆ ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Urfi Javed: ಇಸ್ಲಾಂ ಧರ್ಮವನ್ನು ಅವಮಾನಿಸುತ್ತಿರುವ ಉರ್ಫಿಗೆ ಸ್ಮಶಾನದಲ್ಲೂ ಜಾಗ ಕೊಡಲ್ಲ: ಫೈಜಾನ್ ಅನ್ಸಾರಿ
ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಉರ್ಫಿ ಕಂಡದ್ದು
ಉರ್ಫಿ ವಿರುದ್ಧ ನಟ ಫೈಜಾನ್ ಅನ್ಸಾರಿ ಶಾಕಿಂಗ್ ಹೇಳಿಕೆ
ಕೆಲ ದಿನಗಳಿಂದ ಉರ್ಫಿ ಜಾವೇದ್ ವಿರುದ್ಧ ಹೋರಾಟ ನಡೆಸುತ್ತಿರುವ ನಟ ಫೈಜಾನ್, “ಧರ್ಮವನ್ನು ಪದೇಪದೆ ಅವಮಾನಿಸಿದ್ದಾರೆ. ಮುಸ್ಲಿಂ ಹುಡುಗಿಯೊಬ್ಬಳು ಬೆತ್ತಲೆಯಾಗಿ ತಿರುಗಾಡುತ್ತಿದ್ದಾಳೆ ಎಂದು ಯಾರಾದರೂ ಹೇಳಿದಾಗ ನನಗೆ ತುಂಬಾ ನಾಚಿಕೆಯಾಗುತ್ತದೆ. ಉರ್ಫಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ, ಆದ್ದರಿಂದ ಅವರನ್ನು ಯಾವುದೇ ಸ್ಮಶಾನದಲ್ಲಿ ಸಮಾಧಿ ಮಾಡಲು ಬಿಡಬಾರದು ಎಂದು ಮನವಿ ಮಾಡಿದ್ದೇನೆʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Urfi Javed: ಉರ್ಫಿ ಹೊಸ ಮ್ಯಾಗಜಿನ್ ಫೋಟೊಶೂಟ್ ವೈರಲ್: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಶ್ರಾಫ್ ಹೇಳಿದ್ದೇನು?
ಉರ್ಫಿ ಸತ್ತಾಗ ಸ್ಮಶಾನದಲ್ಲಿ ಜಾಗವನ್ನೂ ಕೊಡುವುದಿಲ್ಲ ಎಂದು ನಟ ಹೇಳಿದ್ದಾರೆ. ʻʻಆಕೆ ತೊಟ್ಟಿರುವ ಬಟ್ಟೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಕೆಣಕುತ್ತಿವೆ. ಅವಳು ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರೆ, ಮೊದಲು ಅವಳ ಹೆಸರನ್ನು ಬದಲಿಸಿಕೊಳ್ಳಬೇಕು. ಮುಸ್ಲಿಂ ಹುಡುಗಿ ಇಂತಹ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಯಾರಾದರೂ ಹೇಳಿದಾಗ ನಮಗೆ ತುಂಬಾ ಬೇಸರವಾಗುತ್ತದೆ. ಫತ್ವಾ ಹೊರಡಿಸಿದ್ದಕ್ಕಾಗಿ ದೆಹಲಿಯ ಮೌಲಾನಾ ಮತ್ತು ಮುಂಬೈನ ಸಿಟಿ ಖಾಜಿಗೂ ದೂರು ನೀಡಿದ್ದೇನೆ ಎಂದು ಫೈಜಾನ್ ಅನ್ಸಾರಿʼʼ ತಿಳಿಸಿದ್ದಾರೆ.
ಬಾಲಿವುಡ್
Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?
Boney Kapoor: ಬಾಲಿವುಡ್ ಸ್ಟಾರ್, ಬಹುಭಾಷಾ ನಾಯಕಿ ಶ್ರೀದೇವಿ ಸಾವಿನ ಕುರಿತು ಪತಿ, ನಿರ್ಮಾಪಕ ಬೋನಿ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀದೇವಿ ಸಾವು ಸಹಜವಲ್ಲ ಆದರೆ ಆಕಸ್ಮಿಕ ಎಂದಿದ್ದಾರೆ.
ಮುಂಬೈ: ಬಾಲಿವುಡ್ ನಟಿ, ಪತ್ನಿ ಶ್ರೀದೇವಿ ಸಾವಿನ ಕುರಿತು ಇದೇ ಮೊದಲ ಬಾರಿ ನಿರ್ಮಾಪಕ ಬೋನಿ ಕಪೂರ್ ಮಾತನಾಡಿದ್ದಾರೆ. 2018ರಲ್ಲಿ ಮೃತಪಟ್ಟ ನಟಿಯ ಸಾವಿನ ಹಿಂದೆ ತಮ್ಮ ಪಾತ್ರ ಇರುವ ಬಗ್ಗೆ ವದಂತಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಶ್ರೀದೇವಿ ಅವರ ಸಾವು ಸಹಜವಲ್ಲ. ಆದರೆ ಆಕಸ್ಮಿಕ ಎಂದಿದ್ದಾರೆ. ಈ ಬಗ್ಗೆ ಅವರು ದುಬೈ ಪೊಲೀಸರಿಂದ ಎಲ್ಲಾ ರೀತಿಯ ಪರೀಕ್ಷೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಭಾರತೀಯ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಇತ್ತು ಎನ್ನುವುದನ್ನೂ ತಿಳಿಸಿದ್ದಾರೆ.
”ಆ ಬಗ್ಗೆ ನಾನು ಮಾತನಾಡದಿರಲು ನಿರ್ಧರಿಸಿದ್ದೆ. ತನಿಖೆ ವೇಳೆ ನಾನು ಈ ಬಗ್ಗೆಯೇ ಸುಮಾರು 24ರಿಂದ 48 ಗಂಟೆಗಳ ಕಾಲ ಮಾತನಾಡಿದ್ದೆ. ಹೀಗಾಗಿ ನಾನು ದುಬೈ ಪೊಲೀಸ್‌ನಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದೆ. ಮಾತ್ರವಲ್ಲ ನಾನು ತನಿಖೆಗೆ ಪೊಲೀಸರ ಜತೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದೆ. ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಸಹಿತ ಎಲ್ಲಾ ಪರೀಕ್ಷೆಗಳಿಗೆ ಒಳಗಾಗಿದ್ದೆ. ಕೊನೆಗೆ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವ ವರದಿ ಬಂತುʼʼ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಡಯಟ್ ಮಾಡುತ್ತಿದ ಶ್ರೀದೇವಿ
ಶ್ರೀದೇವಿ ಕೈಗೊಳ್ಳುತ್ತಿದ್ದ ಡಯಟ್ ಬಗ್ಗೆಯೂ ಬೋನಿ ಕಪೂರ್ ಮಾತನಾಡಿದ್ದಾರೆ. ʼʼಅವರು ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಕುಟುಂಬ ವೈದ್ಯರು ಪಥ್ಯ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆ ಶ್ರೀದೇವಿ ಹಸಿವಿನಿಂದ ಬಳಲುತ್ತಿದ್ದರೂ ಚೆನ್ನಾಗಿ ಕಾಣಬೇಕು ಎಂದು ಬಯಸಿದ್ದರುʼʼ ಎಂದು ಬೋನಿ ಕಪೂರ್ ಹೇಳಿದ್ದಾರೆ.
ʼʼಶ್ರೀದೇವಿ ತಮ್ಮ ದೇಹದ ಆಕಾರ ಉತ್ತಮವಾಗಿ ಇರಿಸಿಕೊಳ್ಳಲು ಸದಾ ಗಮನ ಹರಿಸುತ್ತಿದ್ದರು. ಹಿಂದೊಮ್ಮೆ ಅವರು ʼಇಂಗ್ಲಿಷ್ ವಿಂಗ್ಲಿಷ್ʼ ಚಿತ್ರಕ್ಕಾಗಿ ದೇಹವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದರು. ಮಾತ್ರವಲ್ಲ ಅವರು ಉಪ್ಪನ್ನು ಸೇವಿಸುತ್ತಿರಲಿಲ್ಲʼʼ ಎಂದು ವಿವರಿಸಿದ್ದಾರೆ.
ʼʼಮದುವೆಯಾದಾಗಿನಿಂದ ಗಮನಿಸುತ್ತಿದ್ದೆ. ಆಕೆ ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸುತ್ತಿದ್ದರು. ಕಠಿಣ ಡಯಟ್ ಫಾಲೋ ಮಾಡುತ್ತಿದ್ದರು. ಲೋ ಬಿಪಿಯ ಅಪಾಯದ ಬಗ್ಗೆ ಆಗಾಗ ವೈದ್ಯರು ಸೂಚಿಸುತ್ತಿದ್ದರು. ಉಪ್ಪು ತಿನ್ನದಿರುವ ಆಹಾರ ಕ್ರಮ ಅನುಸರಿಸಬೇಡಿ ಎಂದು ಎಚ್ಚರಿಸುತ್ತಿದ್ದರು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಶ್ರೀದೇವಿ ಮೃತಪಟ್ಟಾಗ ನಟ ನಾಗಾರ್ಜುನ ಸಾಂತ್ವನ ಹೇಳಲು ಬಂದಿದ್ದರು. ಆಗ ಅವರು ಒಂದು ಸಿನಿಮಾಕ್ಕಾಗಿ ಕಠಿಣ ಡಯಟ್ ಮಾಡಿ ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದು ಹಲ್ಲು ಮುರಿದುಕೊಂಡ ಘಟನೆಯನ್ನು ವಿವರಿಸಿದ್ದರುʼʼ ಎಂದು ಬೋನಿ ಕಪೂರ್ ತಿಳಿಸಿದ್ದಾರೆ.
ಇದನ್ನೂ ಓದಿ: Actress Sridevi: ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರೆ? ಬೋನಿ ಕಪೂರ್ ಹೇಳಿದ್ದೇನು?
2018ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಶ್ರೀದೇವಿ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಈ ವೇಳೆ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ಇದು ಅನುಮಾನಗಳನ್ನನು ಹುಟ್ಟು ಹಾಕಿತ್ತು. ಹೀಗಾಗಿ ಬೋನಿ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಶ್ರೀದೇವಿ-ಬೋನಿ ಕಪೂರ್ ದಂಪತಿಯ ಮಕ್ಕಳು. ಸದ್ಯ ಜಾಹ್ನವಿ ಚಿತ್ರಗಳಲ್ಲಿ ನಟಿಸುತ್ತಿದ್ದು, ಖುಷಿ ಶೀಘ್ರದಲ್ಲಿಯೇ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್
‘Merry Christmas’Movie: ಕೊನೆಗೂ ʻಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
‘Merry Christmas’Movie: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಕಾಲಿವುಡ್ ನಟ ವಿಜಯ್ ಸೇತುಪತಿ ಮೊದಲ ಬಾರಿ ಒಂದಾಗುತ್ತಿರುವ ʻಮೆರ‍್ರಿ ಕ್ರಿಸ್‌ಮಸ್ʼ ಡಿಸೆಂಬರ್ 8ರಂದು ತೆರೆಗೆ ಬರಲಿದೆ.
ಮುಂಬೈ: ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವುದು ಸಹಜ. ಆದರೆ ಇಲ್ಲೊಂದು ಚಿತ್ರ 3 ಬಾರಿ ರಿಲೀಸ್ ದಿನಾಂಕವನ್ನು ಬದಲಾವಣೆ ಮಾಡಿಕೊಂಡಿದೆ. ಹೌದು, ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʻಮೆರ‍್ರಿ ಕ್ರಿಸ್‌ಮಸ್ʼ (‘Merry Christmas’) ಮೂರನೇ ಬಾರಿ ಬಿಡುಗಡೆ ತಾರೀಕನ್ನು ಬದಲಾವಣೆ ಮಾಡಿ ಘೋಷಣೆ ಹೊರಡಿಸಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಮತ್ತು ಕಾಲಿವುಡ್ ಸ್ಟಾರ್ ವಿಜಯ್ ಸೇತುಪತಿ (Vijay Sethupathi) ತೆರೆ ಮೇಲೆ ಒಂದಾಗುತ್ತಿರುವ ಈ ಚಿತ್ರ ಆರಂಭದಲ್ಲಿ ಡಿಸೆಂಬರ್ 23ರಂದು ತೆರೆಗೆ ಬರಲಿದೆ ಎನ್ನಲಾಗಿತ್ತು. ಬಳಿಕ ಡಿಸೆಂಬರ್ 15ಕ್ಕೆ ದಿನಾಂಕ ಬದಲಾಯಿಸಿಕೊಂಡಿತ್ತು. ಆದರೆ ಇದೀಗ ಅಂದೇ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ʼಯೋಧʼ ಕೂಡ ಬಿಡುಗಡೆಯಾಗುತ್ತಿರುವುದರಿಂದ ʻಮೆರ‍್ರಿ ಕ್ರಿಸ್‌ಮಸ್ʼ ಅನ್ನು ಒಂದು ವಾರ ಮೊದಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.
ಹೊಸ ದಿನಾಂಕ ಯಾವುದು?
ʻಮೆರ‍್ರಿ ಕ್ರಿಸ್‌ಮಸ್ʼ ಚಿತ್ರಕ್ಕೆ ಮತ್ತೆ ಹೊಸ ಬಿಡುಗಡೆ ದಿನಾಂಕ ಸಿಕ್ಕಿದೆ. ಡಿಸೆಂಬರ್ 8ರಂದು ಸಿನಿಮಾ ತೆರೆ ಕಾಣಲಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ʼʼಮೊದಲ ಬಾರಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಒಂದಾಗುತ್ತಿದ್ದು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆದಿದೆʼʼ ಎಂದು ತಿಳಿಸಿದ್ದಾರೆ.
KATRINA KAIF – VIJAY SETHUPATHI: ‘MERRY CHRISTMAS’ TO ARRIVE ONE WEEK EARLY… 8 Dec 2023 is the new release date of #MerryChristmas, which teams #KatrinaKaif and #VijaySethupathi for the first time.#MerryChristmas – directed by #SriramRaghavan – is shot in two languages… pic.twitter.com/GPyGmCIQMI
— taran adarsh (@taran_adarsh) October 3, 2023
ಈ ಹಿಂದೆ ʼಅಂಧಾಧುನ್ʼ, ʼಬದ್ಲಾಪುರ್ʼ ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಶ್ರೀರಾಮ್ ರಾಘವನ್ ʻಮೆರ‍್ರಿ ಕ್ರಿಸ್‌ಮಸ್ʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟನೆಯ ಜತೆಗೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕತ್ರಿನಾ ಕೈಫ್ ಮತ್ತು ಶ್ರೀರಾಮ್ ರಾಘವನ್ ಅವರ ಮೊದಲ ತಮಿಳು ಚಿತ್ರ ಇದಾಗಿರಲಿದೆ.
ಹಿಂದಿ ಚಿತ್ರದಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್ ಕುಮಾರ್, ಷನ್ಮುಖರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿದ್ದ ಶ್ರೀರಾಮ್ ರಾಘವನ್, ‘ʻಮೆರ‍್ರಿ ಕ್ರಿಸ್‌ಮಸ್ʼ ಲವ್ ಸ್ಟೋರಿಯನ್ನೊಳಗೊಂಡಿದೆ. ಇದು ನನ್ನ ಹಿಂದಿನ ಚಿತ್ರ ‘ಅಂಧಾಧುನ್’ಗಿಂತ ಭಿನ್ನವಾಗಿರಲಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ ಎಂದಿದ್ದರು. ಪೋಸ್ಟರ್ ನೋಡಿದ ವೀಕ್ಷಕರು ಈ ಚಿತ್ರದಲ್ಲೂ ಸ್ವಲ್ಪ ಪ್ರಮಾಣದ ಕ್ರೈಂ ಅಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇದು ಕೊನೆಯ ಭಾಗದಲ್ಲಿ ಬರಲಿದೆಯಂತೆ. ʼʼವಿಜಯ್ ಸೇತುಪತಿ ಇರುವುದಿಂದ ತಮಿಳಿನಲ್ಲೂ ಚಿತ್ರ ಮಾಡುವ ಕುರಿತು ಚಿಂತನೆ ನಡೆಸಿದ್ದೆವುʼʼ ಎಂದು ಶ್ರೀರಾಂ ರಾಘವನ್ ಹೇಳಿದ್ದಾರೆ. ಎರಡೂ ಭಾಷೆಗಳಲ್ಲಿ ನಾಯಕ-ನಾಯಕಿಯಾಗಿ ವಿಜಯ್ ಸೇತುಪತಿ-ಕತ್ರಿನಾ ಕೈಫ್ ಇರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್
Aamir Khan: ಕಂಬ್ಯಾಕ್ ಪ್ರಕಟಿಸಿದ ಆಮೀರ್ ಖಾನ್; ಆದರೆ ನಾಯಕನಾಗಿ ಅಲ್ಲ
Aamir Khan: ಸತತ ಸೋಲಿನಿಂ ಕಂಗೆಟ್ಟಿದ್ದ ಬಾಲಿವುಡ್ ಸೂಪರ್ ಸ್ಟಾರ್ ಹೊಸ ಚಿತ್ರ ಘೋಷಿಸಿದ್ದಾರೆ. ನಾಯಕನ ಬದಲಾಗಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಲಾಹೋರ್ 1947 ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
ಮುಂಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಆಮೀರ್ ಖಾನ್ (Aamir Khan) ಕೆಲವು ಸಮಯಗಳಿಂದ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಅವರ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದು ಹೊರಬಂದಿದ್ದು, ಹೊಸ ಚಿತ್ರದೊಂದಿಗೆ ಮರಳಿ ಬಂದಿದ್ದಾರೆ. ಆದರೆ ಈ ಬಾರಿ ಅವರು ನಾಯಕನಾಗಿ ಅಲ್ಲ ಬದಲಾಗಿ ನಿರ್ಮಾಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಕುಮಾರ್ ಸಂತೋಷಿ ನಿರ್ದೇಶನದ ಮುಂದಿನ ಚಿತ್ರವನ್ನು ಅಮೀರ್ ಖಾನ್ ನಿರ್ಮಿಸಲಿದ್ದು, ಚಿತ್ರಕ್ಕೆ ಲಾಹೋರ್ 1947 (Lahore 1947) ಟೈಟಲ್ ಇಡಲಾಗಿದೆ. ಗದರ್ 2 (Gadar 2) ಮೂಲಕ ತಮ್ಮ ಖದರ್ ತೋರಿದ ಸನ್ನಿ ಡಿಯೋಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಆಮೀರ್ ಖಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼನಾನು ಮತ್ತು ಆಮೀರ್ ಖಾನ್ ಪ್ರೊಡಕ್ಷನ್ಸ್ (AKP) ಟೀಮ್‌ನ ಎಲ್ಲರೂ ನಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಲು ಉತ್ಸುಕರಾಗಿದ್ದೇವೆ. ಸನ್ನಿ ಡಿಯೋಲ್ ನಾಯಕನಾಗಿ ನಟಿಸುತ್ತಿರುವ, ನನ್ನ ನೇಚ್ಚಿನ ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಲಾಹೋರ್ 1947 ಶೀರ್ಷಿಕೆ ಇಟ್ಟಿದ್ದೇವೆ. ಪ್ರತಿಭಾವಂತರಾದ ಸನ್ನಿ ಡಿಯೋಲ್ ಮತ್ತು ರಾಜ್ ಕುಮಾರ್ ಸಂತೋಷಿ ಒಂದಾಗುತ್ತಿರುವುದು ನೋಡಲು ಖುಷಿ ಎನಿಸುತ್ತಿದೆ. ಈ ನಮ್ಮ ಪಯಣಕ್ಕೆ ನಿಮ್ಮ ಆಶೀರ್ವಾದ ಬೇಕುʼʼ ಎಂದು ಬರೆದುಕೊಂಡಿದ್ದಾರೆ.
ಖುಷಿ ಹಂಚಿಕೊಂಡ ಫ್ಯಾನ್ಸ್
ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ನಿರೀಕ್ಷೆ ಗರಿಗೆದರಿದೆ. ʼʼವಾವ್! ಇದು ಖಂಡಿತಾ ಬ್ಲಾಕ್ ಬ್ಲಸ್ಟರ್ ಚಿತ್ರವಾಗಲಿದೆ. ಇದಕ್ಕಾಗಿ ಕಾಯುತ್ತಿದ್ದೇವೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ʼʼಇದು ಉತ್ತಮ ವಿಚಾರ. ಇದು 1,000 ಕೋಟಿ ರೂ. ಕ್ಲಬ್ ಸೇರಲಿದೆʼʼ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವರು ಇದು ಖುಷ್ವಂತ್ ಸಿಂಗ್ ಅವರ ಕಾದಂಬರಿ ʼಟ್ರೈನ್ ಟು ಪಾಕಿಸ್ತಾನ್ʼ ಆಧಾರದಲ್ಲಿ ತಯಾರಾಗಲಿದೆ ಎಂದು ಊಹಿಸಿದ್ದಾರೆ. ಆದರೆ ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
ಕಳೆದ ವರ್ಷ ತೆರೆಕಂಡ ಆಮೀರ್ ಖಾನ್ ಅಭಿನಯ್ ಬಹು ನಿರೀಕ್ಷಿತ ಚಿತ್ರ ʼಲಾಲ್ ಸಿಂಗ್ ಛಡ್ಡಾʼ ಬಾಕ್ಸ್ ಆಫೀಸ್‌ನಲ್ಲಿ ಸೋತು ಹೋಗಿತ್ತು. ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದಾಗ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದರು. ಹಾಲಿವುಡ್‌ನ ಹಿಟ್ ಚಿತ್ರ ಟಾಮ್ ಹಾಂಕ್ಸ್‌ನ ಫಾರೆಸ್ಟ್ ಗಂಪ್‌ನ ರಿಮೇಕ್ ಇದಾಗಿತ್ತು. ಅದರ ಮೊದಲು 2018ರಲ್ಲಿ ತೆರೆಕಂಡ ʼಥಗ್ಸ್ ಆಫ್ ಹಿಂದೂಸ್ಥಾನ್ʼ ಸಿನಿಮಾವೂ ಫ್ಲಾಪ್ ಪಟ್ಟಿಗೆ ಸೇರಿತ್ತು. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಘಟಾನುಘಟಿಗಳಾದ ಅಮಿತಾಬ್ ಬಚ್ಚನ್, ಕತ್ರೀನಾ ಖೈಫ್ ಮತ್ತಿತರರು ನಟಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ: Gadar 2: 24 ದಿನಗಳಲ್ಲಿ ಪಠಾಣ್, ಬಾಹುಬಲಿ 2 ದಾಖಲೆ ಮುರಿದ ಗದರ್ 2!
ಗೆಲುವಿನ ಯಶಸ್ಸಿನಲ್ಲಿ ಸನ್ನಿ ಡಿಯೋಲ್
ಇತ್ತ ಸನ್ನಿ ಡಿಯೋಲ್ ಸದ್ಯ ʼಗದರ್ 2ʼ ಸೂಪರ್ ಹಿಟ್ ಆದ ಖುಷಿಯಲ್ಲಿದ್ದಾರೆ. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ 525 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿ ಸುದ್ದಿಯಲ್ಲಿದೆ. ಅಮೀರ್ ಖಾನ್ ಮತ್ತು ಸನ್ನಿ ಡಿಯೋಲ್ ಈ ಮೊದಲು ಒಟ್ಟಿಗೆ ಕೆಲಸ ಮಾಡಿಲ್ಲ. ಹೀಗಾಗಿ ಈ ಇಬ್ಬರು ದಿಗ್ಗಜರ ಸಮ್ಮಿಲನ ನಿರೀಕ್ಷೆ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್
Actress Sridevi: ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರೆ? ಬೋನಿ ಕಪೂರ್ ಹೇಳಿದ್ದೇನು?
Actress Sridevi: ಮಗು ಜನಿಸಿದ ಬಳಿಕ ತಮ್ಮ ಮತ್ತು ಶ್ರೀದೇವಿ ಮದುವೆ ನಡೆಯಿತು ಎನ್ನುವ ಗಾಳಿಸುದ್ದಿಯನ್ನು ನಿರ್ಮಾಪಕ ಬೋನಿ ಕಪೂರ್ ನಿರಾಕರಿಸಿದ್ದಾರೆ. ಜತೆಗೆ ಅವರು ತಮ್ಮ ವೈಯಕ್ತಿಕ ಬದುಕಿನ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಮುಂಬೈ: ಬಾಲಿವುಡ್‌ನ ಎವರಿಗ್ರೀನ್ ನಾಯಕಿ ಶ್ರೀದೇವಿ (Actress Sridevi). ಹಲವು ದಶಕಗಳ ಕಾಲ ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗವನ್ನು ಆಳಿದ ನಟಿ. 2018ರಲ್ಲಿ ಇವರು ಮೃತಪಟ್ಟ ವಿಚಾರವನ್ನು ಇಂದಿಗೂ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಸೌಂದರ್ಯ, ಅಭಿನಯ, ನೃತ್ಯದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಶಾಶ್ವತ ಸ್ಥಾನ ಪಡೆದ ಈ ನಟಿಯ ಬಗ್ಗೆ ಇದೀಗ ಕೆಲವೊಂದು ಕುತೂಹಲಕಾರಿ ಸಂಗತಿಗಳು ಹೊರ ಬಿದ್ದಿವೆ. ಶ್ರೀದೇವಿ ಅವರ ಪತಿ ಬೋನಿ ಕಪೂರ್ (Boney Kapoor) ಯೂ ಟ್ಯೂಬರ್ ರೋಹನ್ ದುವಾ ಅವರಿಗೆ ನೀಡಿದ ಸಂದರ್ಶನದಲ್ಲಿ ಭಾಗಿಯಾಗಿ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಸಪ್ತಪದಿ ತುಳಿಯುವಾಗ ಗರ್ಭಿಣಿಯಾಗಿದ್ದ ಶ್ರೀದೇವಿ
ʼʼ1996ರಲ್ಲಿ ಶಿರಡಿಯಲ್ಲಿ ನಾವು ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರು. ಜಾಹ್ನವಿ ಕಪೂರ್ ಜನಿಸಿದ ಬಳಿಕ ನಾವು ವಿವಾಹವಾದೆವು ಎನ್ನುವ ಸುದ್ದಿ ನಿಜವಲ್ಲ ʼʼ ಎಂದು ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ.
ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಿದ ಬೋನಿ ಕಪೂರ್, ʼʼನಮ್ಮ ವಿಶ್ವಾಸ, ಧಾರ್ಮಿಕ ನಂಬಿಕೆಯಿಂದ ನಾವಾಗಲಿ, ನಮ್ಮ ಕುಟುಂಬವಾಗಲೀ ಎಂದಿಗೂ ದೂರ ಸರಿದಿಲ್ಲ. ಶ್ರೀದೇವಿಯಾಗಲಿ, ನನ್ನ ಸಹೋದರ, ನಟ ಅನಿಲ್ ಕಪೂರ್ ಅವರ ಪತ್ನಿ ಸುನೀತಾ ಆಗಲಿ ಅಥವಾ ನಾನು, ಅನಿಲ್ ಕಪೂರ್, ಜಾಹ್ನವಿ ಕಪೂರ್ ಆಗಿರಲಿ ಎಂದೂ ಧಾರ್ಮಿಕ ಆಚರಣೆಯನ್ನು ತಪ್ಪಿಸುವುದಿಲ್ಲ. ಜಾಹ್ನವಿ ಪ್ರತೀ ಮೂರು ತಿಂಗಳಿಗೊಮ್ಮೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳುತ್ತಾಳೆ. ಶ್ರೀದೇವಿ ತನ್ನ ಪ್ರತಿವರ್ಷದ ಹುಟ್ಟುಹಬ್ಬದ ದಿನ ತಪ್ಪದೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದರು. ನನಗೆ ಏನಾದರೂ ಸಂಕಷ್ಟ ಎದುರಾದರೆ ಆಕೆ ಜುಹುವಿನಿಂದ ವಿನಾಯಕ ದೇವರ ದರ್ಶನಕ್ಕೆ ಬರಿಗಾಲಿನಲ್ಲೇ ತೆರಳುತ್ತಿದ್ದರುʼʼ ಎಂದು ವಿವರಿಸಿದ್ದಾರೆ.
ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬೋನಿ ಕಪೂರ್
ಇನ್ನು ಮದುವೆಯ ಬಗ್ಗೆಯೂ ಚಿತ್ರ ನಿರ್ಮಾಪಕ ಮನಬಿಚ್ಚಿ ಮಾತನಾಡಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬೋನಿ ಕಪೂರ್ ʼʼಶ್ರೀದೇವಿ ಜತೆಗೆ ನನ್ನದು ಎರಡನೇ ಮದುವೆ. ಶಿರಡಿಯಲ್ಲಿ ನಾವು 1996ರ ಜೂನ್ 2ರಂದು ಸಪ್ತಪದಿ ತುಳಿದೆವು. ನಾವು ಒಂದು ದಿನ ಅಲ್ಲೇ ಕಳೆದಿದ್ದೆವು. ಜನವರಿಯಲ್ಲಿ ಶ್ರೀದೇವಿ ಬಸುರಿಯಾಗಿದ್ದರು. ಆದ್ದರಿಂದ ನಮಗೆ ಬೇರೆ ದಾರಿ ಇರಲಿಲ್ಲ. ಇನ್ನು 1997ರ ಜನವರಿಯಲ್ಲಿ ನಾವು ಸಾರ್ವಜನಿಕವಾಗಿ ಹಾರ ಬದಲಾಯಿಸಿಕೊಂಡಿದ್ದೆವು. ಆದ್ದರಿಂದ ಕೆಲವರು ಮಗು(ಜಾಹ್ನವಿ) ಜನಿಸಿದ ಬಳಿಕ ನಾವು ವಿವಾಹಿತರಾದೆವು ಎಂದು ಭಾವಿಸಿದ್ದಾರೆʼʼ ಎಂದು ಗೊಂದಲ ನಿವಾರಿಸಿದ್ದಾರೆ.
ಶ್ರೀದೇವಿ ಅವರ ಚೆನ್ನೈ ಮನೆ ಇಂದಿಗೂ ಬೋನಿ ಕಪೂರ್ ನೆನಪಿನಲ್ಲಿ ಉಳಿದಿದೆಯಂತೆ. ಮುಚ್ಚಿದ ಕೋಣೆಗಳು ತೇವಾಂಶದಿಂದ ಕೂಡಿದ್ದರಿಂದ ಮನೆಯನ್ನು ನವೀಕರಿಸಬೇಕಾಯಿತು. ಸಾಕಷ್ಟು ದೊಡ್ಡದಾಗಿದ್ದ ಆ ಮನೆ ಅವರ ಕುಟುಂಬ ಸದಸ್ಯರಾದ ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಅವರ ಪಾಲಕರು ಬಂದಾಗ ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳನ್ನು ಹೊಂದಿದ್ದವಂತೆ. ಆ ಮನೆಯನ್ನು ಈಗ ನವೀಕರಿಸಲಾಗಿದ್ದರೂ ಅಲ್ಲಿಗೆ ಭೇಟಿ ನೀಡಿದಾಗಲೆಲ್ಲ ಶ್ರೀದೇವಿಯ ಸಾನಿಧ್ಯ ನೆನಪಿಗೆ ಬರುತ್ತದೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
-
ದೇಶ19 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ದೇಶ22 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ಪ್ರಮುಖ ಸುದ್ದಿ14 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್21 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ20 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್22 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ9 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
South Cinema24 hours ago
Ragini Dwivedi: ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ!