Site icon Vistara News

Viral Video | ಶಾರುಖ್‌ ಅಭಿನಯದ ಸಿನಿಮಾ ಹಾಡು ಹಾಡಿದ ಅಮೆರಿಕ ನೌಕಾಪಡೆ ಅಧಿಕಾರಿಗಳು, ನೀವೂ ಕೇಳಿ!

Sharukh

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿನಯದ ಸಿನಿಮಾಗಳ ಹಾಡು ಕೇಳುವುದೇ ಕಿವಿಗಳಿಗೆ ಹಬ್ಬ. ಇಂಪಾದ ಹಾಡುಗಳಿಗೆ ತಂಪಾದ ಅಭಿನಯದ ಮೂಲಕ ಯಾವುದೇ ಹಾಡುಗಳಿಗೆ ಶಾರುಖ್‌ ಜೀವ ತುಂಬುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಶಾರುಖ್ ಅಭಿನಯದ “ಕಲ್‌ ಹೋ ನ ಹೋ” ಸಿನಿಮಾದ ಹಾಡನ್ನು ಅಮೆರಿಕದ ನೌಕಾಪಡೆ ಅಧಿಕಾರಿಗಳು ಹಾಡಿದ್ದಾರೆ. ಅವರು ಹಾಡಿದ ಹಾಡಿನ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ವಾಷಿಂಗ್ಟನ್‌ ಡಿಸಿಯ ಪೊಟೊಮ್ಯಾಕ್‌ ನದಿಯಲ್ಲಿ ಅಮೆರಿಕ ನೌಕಾಪಡೆ ಕಾರ್ಯದರ್ಶಿ ಆಯೋಜಿಸಿದ್ದ ಡಿನ್ನರ್‌ ಪಾರ್ಟಿಯ ವೇಳೆ ನೌಕಾಪಡೆ ಅಧಿಕಾರಿಗಳು ಕಲ್‌ ಹೋ ನ ಹೋ ಸಿನಿಮಾದ “ಹರ್‌ ಘಡಿ ಬದಲ್‌ ರಹೀ ಹೈ” (Har ghadi badal rahi hai) ಹಾಡನ್ನು ಮುದ್ದಾಗಿ ಹಾಡಿದ್ದಾರೆ. ಇಂಗ್ಲಿಷ್‌ ಮಾತನಾಡುವವರ ಬಾಯಲ್ಲಿ ಹಿಂದಿ ಹಾಡು ಕೇಳಿ ಭಾರತೀಯರು ಪುಳಕಿತಗೊಂಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಭಾರತೀಯರು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. “ಇದು ಭಾರತ-ಅಮೆರಿಕ ನಡುವಿನ ಆತ್ಮೀಯ ಸ್ನೇಹಕ್ಕೆ ಸಾಕ್ಷಿ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಇದು ಅಮೆರಿಕವು ಬಾಲಿವುಡ್‌ಗೆ ನೀಡಿದ ಕೊಡುಗೆ” ಎಂದು ಮತ್ತೊಬ್ಬರು ಹೇಳಿದ್ದಾರೆ. ಅಲ್ಲದೆ, ಇನ್ನೊಬ್ಬರು ಪ್ರತಿಕ್ರಿಯಿಸುತ್ತ, “ಗ್ಲೋಬಲ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್”‌ ಎಂದಿದ್ದಾರೆ.

ಇದನ್ನೂ ಓದಿ | Allu Arjun | ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಭಾರತ ಪ್ರತಿನಿಧಿಸಿದ ಐಕಾನ್‌ಸ್ಟಾರ್‌: ಪೋಟೊ ವೈರಲ್‌!

Exit mobile version