Site icon Vistara News

Valentines Day 2023: 34 ವರ್ಷ ಹಿಂದೆ ಪ್ರೇಮಿಗಳ ದಿನಕ್ಕೆ ಗೌರಿಗೆ ಕೊಟ್ಟಿದ್ದ ಗಿಫ್ಟ್ ನೆನಪಿಸಿಕೊಂಡ ಶಾರುಖ್, ಏನದು ಉಡುಗೊರೆ?

#image_title

ಮುಂಬೈ: ಪ್ರೇಮಿಗಳ (Valentines Day 2023) ದಿನವಾದ ಈ ದಿನವನ್ನು ಪೂರ್ತಿ ವಿಶ್ವವೇ ಆಚರಿಸುತ್ತಿದೆ. ಯುವ ಪ್ರೇಮಿಗಳ ಪ್ರೀತಿಯ ಹೊಸ ಜೀವನವನ್ನು ಆರಂಭಿಸುತ್ತಿದ್ದರೆ, ಹಿರಿಯರು ತಮ್ಮ ಪ್ರೀತಿಯ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಈ ವಿಶೇಷ ದಿನದಂದು ಬಾಲಿವುಡ್ ನಟ, ಶಾರುಖ್ ಖಾನ್ (Shah Rukh Khan) ಕೂಡ ತಮ್ಮ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ. ಪತ್ನಿ ಗೌರಿಗೆ ತಾವು ಪ್ರೇಮಿಗಳ ದಿನಕ್ಕೆಂದು ಕೊಟ್ಟಿದ್ದ ಉಡುಗೊರೆಯ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಎಸ್ಕಲೇಟರ್​​ನಲ್ಲಿ ನಾಯಿಮರಿ ಆಟ; ಹತ್ತೋದು-ಇಳಿಯೋದು ಸಖತ್​ ಕ್ಯೂಟ್​

ಪ್ರೇಮಿಗಳ ದಿನದ ಪ್ರಯುಕ್ತ ಅಭಿಮಾನಿಯೊಬ್ಬರು ಶಾರುಖ್ ಅವರಿಗೆ “ನೀವು ಗೌರಿ ಅವರಿಗೆ ಪ್ರೇಮಿಗಳ ದಿನಕ್ಕೆ ಕೊಟ್ಟ ಮೊದಲ ಉಡುಗೊರೆ ಏನು?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್, “34 ವರ್ಷಗಳ ಹಿಂದೆ ನಾನು ಗೌರಿಗೆ ಗುಲಾಬಿ ಬಣ್ಣದ ಓಲೆಗಳನ್ನು ಕೊಡಿಸಿದ್ದೆ” ಎಂದು ಹೇಳಿದ್ದಾರೆ.

ಹಾಗೆಯೇ “ಪ್ರೇಮಿಗಳ ದಿನದಂದು ನಮ್ಮಿಂದ ನಿಮಗೆ ಏನು ಬೇಕು” ಎಂದು ಕೇಳಿದ್ದ ಅಭಿಮಾನಿಗೆ ಉತ್ತರಿಸಿರುವ ಶಾರುಖ್, “ನನಗೆ ಬೇಕಾದದ್ದನ್ನು ನೀವು ಈಗಾಗಲೇ ಕೊಟ್ಟಿದ್ದೀರಿ. ರಾಶಿ ಪ್ರೀತಿ ಕೊಟ್ಟು ಪಠಾಣ್ ಅನ್ನು ಗೆಲ್ಲಿಸಿದ್ದೀರಿ” ಎಂದಿದ್ದಾರೆ. “ಪಠಾಣ್ ಹಾಗೂ ರುಬೈ ಪ್ರೇಮಿಗಳ ದಿನ ಆಚರಿಸುವುದಾಗಿದ್ದರೆ ಏನು ಮಾಡುತ್ತಿದ್ದರು” ಎಂದು ಇನ್ನೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪಠಾಣ್ ಆಗಿರುವ ಶಾರುಖ್, “ಅಪೂರ್ಣವಾಗಿರುವ ಬಿಸಿನೆಸ್ ಪೂರ್ಣ ಮಾಡುವುದಕ್ಕೆ ಪ್ಯಾರಿಸ್‌ಗೆ ತೆರಳುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.

Exit mobile version