Site icon Vistara News

Vanitha Vijaykumar: ಪ್ರಭುದೇವರನ್ನ ಹುಚ್ಚಿಯಂತೆ ಪ್ರೀತಿಸುತ್ತಿದ್ದೆ, ನಾನ್‌ವೆಜ್‌ ಕೂಡ ಬಿಟ್ಟೆ ಎಂದ ನಟಿ ವನಿತಾ ವಿಜಯಕುಮಾರ್!

Vanitha Vijaykumar prabhudeva

ವನಿತಾ ವಿಜಯಕುಮಾರ್ (Vanitha Vijaykumar) ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ. ಅಷ್ಟೇ ಅಲ್ಲದೇ ಇತ್ತೀಚೆಗೆ ನರೇಶ್‌-ಪವಿತ್ರಾ ಲೋಕೇಶ್‌ ಅಭಿನಯ ಮತ್ತೆ ಮದುವೆ ಸಿನಿಮಾದಲ್ಲಿ ರಮ್ಯಾ ಅವರ ಪಾತ್ರ ನಿಭಾಯಿಸಿರುವ ನಟಿ. ವನಿತಾ ವಿಜಜ್‌ಕುಮಾರ್ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.ಆದರೆ ನಟನೆಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಪ್ರಭುದೇವ ತಮಗೆ ಎಷ್ಟು ಇಷ್ಟವಾಗಿದ್ದರು ಎಂಬದುನ್ನು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರ ನೆನಪಿನಲ್ಲಿ ಸಸ್ಯಾಹಾರವನ್ನು ಸೇವಿಸುತ್ತಿದ್ದೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.

ವನಿತಾ ಕೋವಿಡ್‌ ಸಂದರ್ಭದಲ್ಲಿ ಯುಟ್ಯೂಬ್‌ ಚಾನೆಲ್ ನಿಭಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ನಿರೂಪಕಿಯಾಗಿ ಯಶಸ್ಸು ಗಳಿಸಿದ್ದಾರೆ. ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಬಗ್ಗೆ ವನಿತಾ ವಿಜಯ್‌ಕುಮಾರ್ ಇಂಟರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ. “ನಾನು ಪ್ರಭುದೇವ ಅವರ ಅಪ್ಪಟ ಅಭಿಮಾನಿ. ಪ್ರಭುದೇವ ಅವರನ್ನು ತುಂಬಾನೇ ಪ್ರೀತಿಸುತ್ತಿದ್ದೆ” ಎಂದು ಹೇಳಿಕೆ ನೀಡಿದ್ದಾರೆ.

“ನಾನು ಪ್ರಭುದೇವ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ. ಅವರ ಪ್ರತಿಯೊಂದು ಸಿನಿಮಾ ಬಂದಾಗಲೂ ಎಲ್ಲ ಸುದ್ದಿಗಳನ್ನು ಹಾಗೂ ಫೋಟೊಗಳನ್ನು ಸಂಗ್ರಹಿಸಿ ಇಡುತ್ತಿದ್ದೆ. ಅದು ನನ್ನ ಕೋಣೆಯಲ್ಲಿ ರಾರಾಜಿಸುತ್ತಿತ್ತು. ನಾನು ಪ್ರಭುದೇವರನ್ನು ಇಷ್ಟು ಪಡುತ್ತಿದ್ದದ್ದನ್ನು ನೋಡಿ ನನ್ನ ತಂದೆ ಅವರನ್ನೇ ಮನೆಗೆ ಕರೆದುಕೊಂಡು ಬಂದಿದ್ದರು. ಅವರಿಗಾಗಿ ನಾನ್‌ವೆಜ್‌ ಅಡುಗೆಯನ್ನು ತಯಾರಿಸಿದ್ದೆ. ಆದರೆ, ಅವರು ಮಾಂಸಾಹಾರ ಸೇವಿಸುವುದಿಲ್ಲ ಎಂದರು. ಅವರಿಗೆ ಮೊಟ್ಟೆಯನ್ನು ಬೇಯಿಸಿ ಬಡಿಸಿದೆ. ಅಲ್ಲದೆ ಕೆಲವು ದಿನಗಳವರೆಗೆ ನಾನು ಕೂಡ ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ” ಎಂದಿದ್ದಾರೆ ವನಿತಾ ವಿಜಯ್‌ಕುಮಾರ್.

ಇದನ್ನೂ ಓದಿ: Vanitha Vijaykumar: ನಟಿ ವನಿತಾ ವಿಜಯ್ ಕುಮಾರ್ ಮೂರನೇ ಮಾಜಿ ಪತಿ ನಿಧನ

ಎರಡೂ ಮದುವೆಗಳು ಅಂತ್ಯ!

ಒಮ್ಮೆ ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜತೆ ಪ್ರೀತಿಯಲ್ಲಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ತಮ್ಮ ಸಂಬಂಧವನ್ನು ಜಗಳದಲ್ಲಿಯೇ ಅಂತ್ಯಗೊಳಿಸುತ್ತಾರೆ. ಬಳಿಕ ಪೀಟರ್ ಪೌಲ್‌ ಜತೆ ವಿವಾಹವಾದರೂ, ಅದು ಕೂಡ ಬೇಗನೇ ಕೊನೆ ಆಯ್ತು. ಪೀಟರ್ (vanitha vijayakumar husband peter paul) ಮದುವೆಯನ್ನು ಮೊದಲ ಪತ್ನಿ ತೀವ್ರ ವಿರೋಧಿಸಿದ್ದರು. ವನಿತಾ ಜತೆ ಮದುವೆಯಾಗಿದ್ದೇ ಗೊತ್ತಿಲ್ಲ ಎಂದು ಮೊದಲ ಪತ್ನಿ ಬೀದಿ ರಂಪ ಮಾಡಿದ್ದರು.

ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ಈ ನಟನಿಂದ ದೂರವೇ ಉಳಿಸಿದ್ದಾರೆ.

Exit mobile version