Site icon Vistara News

Yash | ಯಶ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ: ಮಕ್ಕಳೊಂದಿಗೆ ಹಬ್ಬ ಆಚರಿಸಿದ ಯಶ್ ದಂಪತಿ

Yash

ಬೆಂಗಳೂರು: ಶುಕ್ರವಾರ (ಆ.5) ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಸ್ಯಾಂಡಲ್‌ವುಡ್‌ ನಟ ನಟಿಯರು ಹಬ್ಬದ ಆಚರಣೆಯ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನಟ ಯಶ್‌ (Yash) ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರವನ್ನು ರಾಧಿಕಾ ಪಂಡಿತ್‌ ಶೇರ್‌ ಮಾಡಿದ್ದಾರೆ. ಮಕ್ಕಳೊಂದಿಗೆ ಹಬ್ಬ ಆಚರಿಸಿದ ಯಶ್ ದಂಪತಿ ಪೋಟೋಗಳು ಇದೀಗ ಸಖತ್‌ ವೈರಲ್‌ ಆಗುತ್ತಿವೆ.

ಇದನ್ನೂ ಓದಿ | Radhika Pandit | ಮಗ ಯಥರ್ವ್‌ ಫೋಟೊ ಹಾಕಿ ಎಲ್ಲೋ ನೋಡಿದ ಹಾಗಿದೆ ಅಲ್ವಾ ಅಂದಿದ್ಯಾಕೆ?

ಈ ಹಿಂದೆ ರಾಧಿಕಾ ಮಗ ಯಥರ್ವ್‌ ಬೀಚ್‌ನಲ್ಲಿ ಸಮುದ್ರದತ್ತ ಮುಖ ಮಾಡಿ ನಿಂತಿರುವ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯ ಸ್ಟೋರಿ ಲಿಸ್ಟ್‌ನಲ್ಲಿ ಹಂಚಿಕೊಂಡಿದ್ದರು. ರಾಧಿಕಾ ಹಾಗೂ ಯಶ್‌ ಯಾವಾಗಲೂ ತಮ್ಮ ಮಕ್ಕಳ ಪೋಟೊ ಹಾಗೂ ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ. ಐರಾ ಹಾಗೂ ಯಥರ್ವ್‌ ತುಂಟಾಟಗಳನ್ನು ನೋಡಿ ಯಶ್‌ ಮತ್ತು ರಾಧಿಕಾ ಫ್ಯಾನ್ಸ್‌ ಶೇರ್‌ ಮಾಡಿ ಕಮೆಂಟ್‌ಗಳನ್ನು ಮಾಡುತ್ತಿರುತ್ತಾರೆ.

ಇದನ್ನೂ ಓದಿ | Rocking Star Yash | ರಾಕಿ ಬಾಯ್‌ ಯಶ್‌ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!

Exit mobile version