ಬೆಂಗಳೂರು : ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna ) ಅಭಿನಯದ ʻವಾರಿಸುʼ ಸಿನಿಮಾ ಜನವರಿ 11ರಂದು ತೆರೆ ಕಂಡಿದೆ. ವಾರಿಸು ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ವರದಿ ಪ್ರಕಾರ ವಿಶ್ವಾದ್ಯಂತ 50 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆದರೆ ಕರ್ನಾಟಕದಲ್ಲಿ ವಾರಿಸು ಸಿನಿಮಾ ಸೋಲುಂಡಿದೆ ಎಂದು ವರದಿಯಾಗಿದೆ.
ಕಾಂತಾರ ಫೇಮ್ ರಿಷಬ್ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ಅನ್ನು ಕಳೆದ ಬಾರಿ ಉಲ್ಲೇಖಿಸಿದೇ ಸಂದರ್ಶನವೊಂದರಲ್ಲಿ ಕೇವಲ ಸನ್ನೆಯ ಮೂಲಕ ರಶ್ಮಿಕಾ ಮಂದಣ್ಣ ವ್ಯಕ್ತಪಡಿಸಿದ್ದರು. ಇದು ಭಾರಿ ಚರ್ಚಗೆ ಒಳಗಾಗಿತ್ತು. ಕರ್ನಾಟಕದಲ್ಲಿ ಹಲವೆಡೆ ವಾರಿಸು ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಲಾಯಿತು ಎಂತಲೂ ವರದಿಯಾಗಿದೆ. ಅದರ ಹಿಂದಿನ ಕಾರಣ ಅದರ ನಾಯಕಿ ರಶ್ಮಿಕಾ ಮಂದಣ್ಣ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ.
ಇದನ್ನೂ ಓದಿ | Rashmika Mandanna | ‘ಪುಷ್ಪ 2’ನಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ಏನಂತಾರೆ ರಶ್ಮಿಕಾ ಮಂದಣ್ಣ?
ವಾರಿಸು ಸಿನಿಮಾ ಕರ್ನಾಟಕದಲ್ಲಿ ಆರಂಭದಲ್ಲಿ ಸುಮಾರು ೭೫೦ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಆದರೆ ಮರುದಿನವೇ ಸ್ಕ್ರೀನ್‌ಗಳ ಸಂಖ್ಯೆಯಲ್ಲಿ ಕುಸಿತ ಆಯ್ತು. ಸುಮಾರು ೩೦೦ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ತೆಗೆದುಹಾಕಲಾಯ್ತು. ಅಂದರೆ ರಿಲೀಸ್ ದಿನ ಸಿನಿಮಾ ೭೫೭ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡರೆ ಮರುದಿನವೇ ಸ್ಕ್ರೀನ್‌ಗಳ ಸಂಖ್ಯೆ ೪೬೬ ಸ್ಕ್ರೀನ್‌ಗಳಿಗೆ ಇಳಿಯಿತು.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಜತೆ ʻಗುಡ್‌ಬೈʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ, ಈಗ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುʼ ಚಿತ್ರದೊಂದಿಗೆ ನಟಿಸಿದ್ದು, ಟ್ರೈಲರ್ ಬಿಡುಗಡೆಗೊಂಡಿದೆ. ರಶ್ಮಿಕಾ ಅವರ ಮುಂಬರುವ ಚಿತ್ರ ಪುಷ್ಪ 2 ಕರ್ನಾಟಕದ ಥಿಯೇಟರ್‌ಗಳಿಂದ ಬಲವಂತವಾಗಿ ತೆಗೆದುಹಾಕುವ ಮೂಲಕ ಕೆಲವರು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ | Rashmika Mandanna | ದಕ್ಷಿಣದ ರೊಮ್ಯಾಂಟಿಕ್ ಹಾಡುಗಳನ್ನು ಕಡೆಗಣಿಸುವಷ್ಟು ಮೂರ್ಖಳಲ್ಲ : ರಶ್ಮಿಕಾ ಮಂದಣ್ಣ