Site icon Vistara News

Varisu vs Thunivu | 5ನೇ ದಿನ ವಾರಿಸು, ತುನಿವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ರೇಸ್‌ನಲ್ಲಿ ಗೆದ್ದವರಾರು?

Varisu vs Thunivu

ಬೆಂಗಳೂರು : ಸಂಕ್ರಾಂತಿಗೆ ದಳಪತಿ ವಿಜಯ್‌ ಅಭಿನಯದ ʻವಾರಿಸುʼ ಹಾಗೂ ಅಜಿತ್‌ ಅಭಿನಯದ ʻತುನಿವುʼ ಸಿನಿಮಾಗಳು (Varisu vs Thunivu ) ಒಟ್ಟಿಗೆ ತೆರೆ ಕಂಡಿವೆ. ಭಾನುವಾರದಂದು ತುನಿವು ಸಿನಿಮಾಗಿಂತ ವಾರಿಸು ಸಿನಿಮಾ ಹೆಚ್ಚು ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಕೆಲವೇ ದಿನಗಳಲ್ಲಿ ತೆಲುಗು ರಾಜ್ಯಗಳು ಮತ್ತು ಹಿಂದಿ ಬೆಲ್ಟ್‌ನಲ್ಲಿ ತೆರೆಕಂಡ ವಾರಿಸು ಭಾನುವಾರ ಸಖತ್ ಪ್ರದರ್ಶನ ಕಂಡಿದೆ. ಮೊದಲ ವಾರ ಸುಮಾರು 18.50 ಕೋಟಿ ರೂ. ಗಳಿಕೆ ಕಂಡಿದ್ದು, ಅದರ ಅಖಿಲ ಭಾರತ ನಿವ್ವಳ ಒಟ್ಟು ಮೊತ್ತವನ್ನು 85.25 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ. ವಿಜಯ್ ಅವರ ಚಿತ್ರವು ಭಾನುವಾರದಂದು ಒಟ್ಟಾರೆ 74.52% ಚಿತ್ರಮಂದಿರದಲ್ಲಿ ಆಕ್ಯುಪೆನ್ಸಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ, ತುನಿವು ಐದನೇ ದಿನದಂದು 11.50 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದರ ಅಖಿಲ ಭಾರತ ನಿವ್ವಳ ಸಂಗ್ರಹವನ್ನು 67 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಹಿಂದಿಯಲ್ಲಿ ಇನ್ನೂ ಬಿಡುಗಡೆಯಾಗಬೇಕಿದೆ. ಚಿತ್ರವು ಭಾನುವಾರದಂದು ಒಟ್ಟಾರೆ 74.26% ಆಕ್ಯುಪೆನ್ಸಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ | Rashmika Mandanna | ಕರ್ನಾಟಕದಲ್ಲಿ ಸೋಲನುಭವಿಸಿದ ವಾರಿಸು: ರಶ್ಮಿಕಾ ಕಾರಣವಂತೆ!

2022ರ ಬೀಸ್ಟ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ವಿಜಯ್‌ ಅಷ್ಟಾಗಿ ಸಕ್ಸೆಸ್‌ ಕಂಡಿರಲಿಲ್ಲ. ಇದೀಗ ವಾರಿಸು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆದುಕೊಂಡಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್‌ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಲ್ಲಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆರ್. ಶರತ್‌ಕುಮಾರ್, ಪ್ರಕಾಶ್ ರಾಜ್, ಶಾಮ್, ಶ್ರೀಕಾಂತ್, ಯೋಗಿ ಬಾಬು, ಮತ್ತು ಜಯಸುಧಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ʻತುನಿವುʼ ಚಿತ್ರವನ್ನು ಎಚ್ ವಿನೋತ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಬೋನಿ ಕಪೂರ್ ನಿರ್ಮಿಸಿದ್ದಾರೆ. ಇದರಲ್ಲಿ ಮಂಜು ವಾರಿಯರ್, ಪಾವನಿ ರೆಡ್ಡಿ ,ಜಾನ್ ಕೊಕ್ಕೆನ್, ಮಮತಿ ಚಾರಿ, ವೀರ ಮತ್ತು ಬಗವತಿ ಪೆರುಮಾಳ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Thala-Thalapathy Fans War | ತುನಿವು- ವಾರಿಸು ಸಿನಿಮಾಗಳ ಮೊದಲ ದಿನದ ಕಲೆಕ್ಷನ್‌ ಎಷ್ಟು?

Exit mobile version